ರಕ್ತದಾನ ಮಾಡಿ ಜೀವ ಉಳಿಸಿ

 ಹೊಸಪೇಟೆ:

      ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಇತರರ ಅಮೂಲ್ಯವಾದ ಜೀವಗಳನ್ನು ಉಳಿಸಲು ಸಂಕಲ್ಪ ಮಾಡಬೇಕು ಎಂದು ನಗರದ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಯ ತಜ್ಞ ವೈದ್ಯ ಡಾ.ಸೋಮಶೇಖರ್ ಹೇಳಿದರು.

      ಇಲ್ಲಿನ ಥಿಯೋಸಾಫಿಕಲ್ ಮಹಿಳಾ ಕಾಲೇಜಿನ ಯೂತ್ ರೆಡ್ ಕ್ರಾಸ್ ಮತ್ತು ಆರೋಗ್ಯ ಘಟಕಗಳು ಹಾಗೂ ವಿಮ್ಸ್ ಬ್ಲಡ್ ಬ್ಯಾಂಕ್ ಬಳ್ಳಾರಿ ಇವರ ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ‘ರಕ್ತ ಪರೀಕ್ಷೆ’ ಮತ್ತು ‘ರಕ್ತದಾನ ಶಿಬಿರ’ವನ್ನು ಉದ್ದೇಶಿಸಿ ಮಾತನಾಡಿದರು.

      ಆರೋಗ್ಯವಂತರು ರಕ್ತದಾನ ಮಾಡುವುದರಿಂದ ಬಡಜೀವಿಗಳಿಗೆ ಮರುಜನ್ಮ ನೀಡಿದಂತಾಗುತ್ತದೆ ಎಂದ ಅವರು, ರಕ್ತದಾನದ ವಿಧಾನ ಬೆಳೆದುಬಂದ ಇತಿಹಾಸ, ರಕ್ತದಾನದ ವರ್ಗೀಕರಣ, ರಕ್ತ ಸಂಗ್ರಹಣೆ ವಿಧಾನ ಮತ್ತು ರಕ್ತದಾನದಿಂದಾಗುವ ಲಾಭಗಳ ಬಗ್ಗೆ ವೈಜ್ಞಾನಿಕವಾಗಿ ವಿದ್ಯಾರ್ಥಿನಿಯರಿಗೆ ತಿಳಿಸಿಕೊಟ್ಟರು.

      ನಾವು ರಕ್ತದಾನ ಮಾಡಲು ಮೊದಲು ಆರೋಗ್ಯವಂತರಾಗಿರಬೇಕು. ರಕ್ತದ ಕೊರತೆಯುಂಟಾಗದಂತೆ ಹೆಚ್ಚಾಗಿ ನಾರಿನಾಂಶ, ಖನಿಜಾಂಶ ಮತ್ತು ಪೋಷಕಾಂಶವಿರುವ ತರಕಾರಿ, ಸೊಪ್ಪು, ಹಣ್ಣುಗಳನ್ನು ಸೇವಿಸಿ ನಮ್ಮ ಆರೋಗ್ಯವನ್ನು ಮೊದಲು ಕಾಪಾಡಿಕೊಳ್ಳಬೇಕು. ನಂತರ ನಾವು ಅಗತ್ಯವಿರುವರಿಗೆ “ರಕ್ತದಾನ” ಮಾಡಲು ಸಾಧ್ಯ ಎಂದರು.

      ಶಿಬಿರದ ಸಂಚಾಲಕ ಡಾ. ಕಿಚಿಡಿ ಚನ್ನಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಕ್ತದಾನ ಒಂದು ಪ್ರಕೃತಿದತ್ತವಾದ ಸಹಜ ಪ್ರಕ್ರಿಯೆಯಾಗಿದೆ. ಇದರಿಂದ ರಕ್ತದಾನಿಗೆ ವೈಯಕ್ತಿಕವಾಗಿ ಮತ್ತು ಸಾಂಘಿಕವಾಗಿ ಎರಡು ಲಾಭಗಳಾಗುತ್ತವೆ. ವ್ಯಕ್ತಿಯೊಬ್ಬ ರಕ್ತದಾನ ಮಾಡುವುದರಿಂದ ಆತನಲ್ಲಿ ಸಹಜವಾಗಿ ಹೊಸರಕ್ತ ಉತ್ಪನ್ನವಾಗುತ್ತದೆ. ಇನ್ನೊಂದು ರಕ್ತದಾನಿಯ ಆರೋಗ್ಯದಲ್ಲಿ ಮತ್ತು ಜೀವನದಲ್ಲಿ ಹೊಸ ಚೈತನ್ಯ ಮತ್ತು ಲವಲವಿಕೆಯುಂಟಾಗಿ ದೀರ್ಘ ಆಯುಷ್ಯಿಯಾಗುತ್ತಾನೆ. ಇಂತಹ ಕಾರ್ಯದಲ್ಲಿ ಯುವತಿಯರು, ಯುವಕರು ಮುಂದೆ ಬರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

      ಶಿಬಿರದ ಆಯೋಜಕ ಜಗದೀಶ್, ಬಳ್ಳಾರಿಯ ವಿಮ್ಸ್ ಬ್ಲಡ್ ಬ್ಯಾಂಕಿನ ತಾಂತ್ರಿಕ ವರ್ಗದವರು ಉಪಸ್ಥಿತರಿದ್ದರು. ನಂತರ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಅಶೋಕ ಜೀರೆ ಇವರಿಂದ ವೈದ್ಯರಿಗೆ ಮತ್ತು ತಾಂತ್ರಿಕ ವರ್ಗದವರಿಗೆ ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲೆ ಡಾ. ಬಿ.ಮಂಜುಳಾ. ಉಪನ್ಯಾಸಕರಾದ ಪವನ್‍ಕುಮಾರ್, ಕಿರಣ್‍ಕುಮಾರ್, ಡಾ. ಸಂಗೀತ ಗಾಂವ್‍ಕರ್, ಅಂಜಲಿ ದೇಸಾಯಿ, ಸಿ. ದಿನಮಣಿ, ಭುವನೇಶ್ವರಿ, ಓಂಕಾರ, ಕು. ಸುನೀತ ಸೇರಿದಂತೆ 30 ವಿದ್ಯಾರ್ಥಿನಿಯರು ರಕ್ತದಾನ ಮಾಡಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link