ರವೀಂದ್ರ ಎಂ.ಪಿ.ಪ್ರಕಾಶ್ ಕಲಾಪರಿಷತ್‍ನಿಂದ ಬಹುಮಾನಗಳ ವಿತರಣೆ

ಹಗರಿಬೊಮ್ಮನಹಳ್ಳಿ:

           ಪಟ್ಟಣದ ಶ್ರೇಷ್ಠ ಅಲಂಕಾರಿಕ ಗಣೇಶನಿಗೆ ರವೀಂದ್ರ ಎಂ.ಪಿ.ಪ್ರಕಾಶ್ ಕಲಾಪರಿಷತ್‍ನಿಂದ ಬಹುಮಾನಗಳ ವಿತರಣೆ ಶನಿವಾರ ಸಂಜೆ ಜರುಗಿತು.

           ಬಹುಮಾನ ವಿತರಣೆಯಲ್ಲಿ ಪಾಲ್ಗೊಂಡ ಜಿ.ಪಂ.ಮಾಜಿ ಸದಸ್ಯ ಅಕ್ಕಿತೋಟೇಶ್ ಮಾತನಾಡಿ, ದೇಶದಲ್ಲಿ ಜ್ಯಾತ್ಯಾತೀತವಾಗಿ ಮತ್ತು ಯುವಕರಿಗಾಗಿಯೇ ಇರುವಂತ ಗಣೇಶ ಚತುರ್ಥಿ, ಯುವಜನತೆ ಒಗ್ಗಟ್ಟಿಗಾಗಿಯೇ ಇದೆ ಎಂದರು. ಯುವಜನತೆಯನ್ನು ಮತ್ತು ಸಂಘಸಂಸ್ಥೆಗಳಿಗೆ ಪ್ರೋತ್ಸಹ ನೀಡಲು ಇಂತಹ ಬಹುಮಾನ ವಿತರಣೆಯ ಸ್ಪರ್ಧೆ ಏರ್ಪಡಿಸಿರುವುದು ಸಂಸ್ಕೃತಿ ಉಳಿಯ ಬೇಕು ಎನ್ನುವ ಹಿನ್ನೆಲೆಯಲ್ಲಿ ಎಂದರು.

            ಪ್ರಥಮ ಬಹುಮಾನವನ್ನು ಸ್ವೀಕರಿಸಿದ ಮಾರುತಿ ಸ್ಪೋಟ್ರ್ಸ್ ಕ್ಲಬ್‍ನ ಅಧ್ಯಕ್ಷ ಶಿವಶಂಕರಗೌಡ ಗಣೇಶೋತ್ಸವ ಆಚರಣೆ ಕೇವಲ ಆಚರಣೆಯಾಗಬಾರದು, ಅಲಂಕಾರ, ಸಂಸ್ಕೃತಿಕ ಕಾರ್ಯಕ್ರಮಗಳು ನೀಡುವುದು ಸೇರಿದಂದೆ ಅನೇಕ ವಿಚಾರಗಳನ್ನು ಮುಂದಿಟ್ಟು ಬಹುಮಾನ ವಿತರಣೆ ಕಾರ್ಯಕ್ರಮ ಯುವಜನತೆಯಲ್ಲಿ ಮತ್ತೊಷ್ಟು ಉತ್ಸಹ ಮೂಡಿಸುತ್ತೆ. ಅದಕ್ಕಾಗಿ ಬಹುಮಾನ ಆಯೋಜನಕರಿಗೆ ಕೃತಜ್ಞತೆ ಸಲ್ಲಿಸಲೇ ಬೇಕು ಎಂದರು.

            ಸಿ.ಪಿ.ಐ ರಾಮಪ್ಪ ಸಾವಳಿಗಿ, ತಹಸೀಲ್ದಾರ್ ವಿಜಯಕುಮಾರ್ ಸೇರಿ ಅನೇಕರು ಮಾತನಾಡಿದರು.
ಹಿರಿಯರಾದ ಚಿಂತ್ರಪಳ್ಳಿ ಗಂಗಾಧರ, ಜಿ.ಮಂಜಣ್ಣ, ನೆಲ್ಲು ಇಸ್ಮಾಯಿಲ್, ಜೆಡಿಎಸ್ ಅಧ್ಯಕ್ಷ ಬನ್ನಿಗೋಳ ವೆಂಕಣ್ಣ, ಹುಡೇದ್ ಗುರುಬಸವರಾಜ್, ವಾಲ್ಮೀಕಿ ಸಮುದಾಯದ ತಾಲೂಕು ಅಧ್ಯಕ್ಷ ದೇವೇಂದ್ರ, ವರಲಹಳ್ಳಿಯ ಕಡ್ಡಿ ವೀರಪ್ಪ ಹಾಗೂ ಬಿ.ಡಿ.ಸಿ.ಸಿ.ಬ್ಯಾಂಕ್ ಅಧಿಕಾರಿ ಮಂಜುನಾಥ ಕಲ್ಲಮ್ಮನವರ್ ಮತ್ತಿತರರಿದ್ದರು.
ಪರಿಷತ್ ಸಂಚಾಲಕರಾದ ಪತ್ರೇಶ್ ಹಿರೇಮಠ್ ಮತ್ತು ದೈಹಿಕ ಶಿಕ್ಷಕ ಎಂ.ಪಿ.ಎಂ.ಮಂಜುನಾಥ ಕಾರ್ಯಕ್ರಮ ನಿರ್ವಹಿಸಿದರು.

ಬಹುಮಾನ ವಿತರಣೆ:
             ಪಟ್ಟಣದ ಯುಕೆ ಬಯಲು ಜಾಗದಲ್ಲಿ ಪ್ರತಿಷ್ಠಾತವಾಗಿರುವ ಜ್ಯೋತಿವೃಂದದ ಗಣೇಶನ ವೇದಿಕೆಯಲ್ಲಿ ರವೀಂದ್ರ ಎಂ.ಪಿ.ಪ್ರಕಾಶ್ ಕಲಾಪರಿಷತ್‍ನ ಬಳಗದಿಂದ ಏರ್ಪಡಿಲಾಗಿದ್ದ ಬಹುಮಾನಗಳ ವಿತರಣೆಯಲ್ಲಿ ರಾಮನಗರದ ಗುರುಭವನದಲ್ಲಿ ಮಾರುತಿ ಸ್ಪೋಟ್ರ್ಸ್ ಕ್ಲಬ್‍ನಿಂದ ಪ್ರತಿಷ್ಠಾಪಿಸಿರುವ ಗಣೇಶನಿಗೆ ಪ್ರಥಮ ಬಹುಮಾನ ನಗದು 5001 ರೂ.ಗಳು, ಕೂಡ್ಲಿಗಿ ವೃತ್ತದದಲ್ಲಿ ಏಕದಂತ ಗ್ರೂಫ್‍ನಿಂದ ಪ್ರತಿಷ್ಠಾಪಿತವಾಗಿರುವ ಗಣೇಶನಿಗೆ ದ್ವಿತೀಯ ಬಹುಮಾನ 3001 ರೂ.ಗಳು ಹಾಗೂ ತಲಾ ಆಕರ್ಷಕ ಕಪ್ ನೀಡಲಾಯಿತು. ಓಂಕಾರ ವಿನಾಯಕಗೆ ಸಮಾದಾನಕರ ಬಹುಮಾನ ನೀಡಲಾಯಿತು.

Recent Articles

spot_img

Related Stories

Share via
Copy link