ರಾಜೀನಾಮೆ ಪ್ರಸಂಗಕ್ಕೆ ಇತಿಶ್ರೀ ಹಾಡಲು ಆಗ್ರಹ

ಶಿಗ್ಗಾವಿ :

      ಹಾವೇರಿ ಜಿಲ್ಲಾ ಭಾರತೀಯ ಜನತಾ ಪಕ್ಷದ ಜಿಲ್ಲಾದ್ಯಕ್ಷ ಶಿವರಾಜ ಸಜ್ಜನ ಅವರು ನೀಡಿದ ರಾಜೀನಾಮೆಯನ್ನು ಅಂಗೀಕಾರ ಮಾಡದಿರಲು ಮಾಜಿ ಸಚಿವರಾದ ಸಿ ಎಮ್ ಉದಾಸಿ ಹಾಗೂ ಬಸವರಾಜ ಬೊಮ್ಮಾಯಿಯವರು ಮದ್ಯ ಪ್ರವೇಶಿಸಿ ರಾಜೀನಾಮೆ ಪ್ರಸಂಗಕ್ಕೆ ಇತಿಶ್ರೀ ಹಾಡಬೇಕೆಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಶಶಿಧರ ಹೊನ್ನಣ್ಣವರ ಹಾಗೂ ತಾಲೂಕಿನ ಕೆಲ ಭಾಜಪ ಮುಖಂಡರು ಅಗ್ರಹಿಸಿದರು.

      ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕಾದರೆ ಸಜ್ಜನ ಅವರ ಸಂಘಟನಾ ಚತುರತೆ ಮತ್ತು ಅವರು ಪಟ್ಟ ಶ್ರಮವೇ ಕಾರಣವಾಗಿದೆ ಜೊತೆಗೆ ಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕಾದರೆ ಅವರ ರಾಜೀನಾಮೆಯನ್ನು ಅಂಗೀಕರಿಸದೇ ಅವರನ್ನೆ ಮತ್ತೆ ಜಿಲ್ಲಾದ್ಯಕ್ಷರನ್ನಾಗಿ ಮುಂದುವರೆಸಲು ಮನವಿ ಮಾಡಿದರು.

      ಒಂದು ವೇಳೆ ಸಮಸ್ಯೆ ಬಗೆ ಹರಿಯದೇ ಹೋದರೆ ಎಲ್ಲ ಜಾತಿ ಜನಾಂಗದವರೊಂದಿಗೆ ಹೊಂದಿಕೊಂಡು ಹೋಗುವ ಸಾಮಥ್ರ್ಯ ಇರುವ ಶಿವರಾಜ ಸಜ್ಜನರ್ ಜೊತೆಗೆ ಸಣ್ಣಸಣ್ಣ ಲಿಂಗಾಯತ ಸಮುದಾಯದ ಮುಖಂಡರು ಭಾಜಪ ದಲ್ಲಿ ಮುಂದುವರೆಯುವುದಿಲ್ಲ ಲೋಕಸಭೆ, ಸ್ಥಳೀಯ ಚುನಾವಣೆಯಲ್ಲಿ ಭಾಜಪ ಜಯಗಳಿಸಬೇಕಾದರೆ ಸಜ್ಜನರ್ ಅವರನ್ನು ಮುಂದುವರೆಸುವಂತೆ ವಿನಂತಿಸಿದರು.

ಪ್ರಲ್ಹಾದ್ ಜೋಷಿಯವರಿಗೆ ಟಿಕೆಟ್ ಬೇಡ :

      ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ದಾರವಾಡ ಲೋಕಸಭಾ ಕ್ಷೇತ್ರದ ಸಂಸದರಾದ ಪ್ರಹ್ಲಾದ್ ಜೋಷಿಯವರಿಗೆ ಪಕ್ಷದ ಟಿಕೆಟ್ ನೀಡಬಾರದೆಂದು ಭಾಜಪ ಮುಖಂಡರು ಇದೇ ಸಂದರ್ಭದಲ್ಲಿ ಅಗ್ರಹಿಸಿದರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಮತಗಳಿಂದ ಆಯ್ಕೆಯಾದ ಪ್ರಹ್ಲಾದ್ ಜೋಷಿಯವರು ಲಿಂಗಾಯತರನ್ನು ಎತ್ತಿಕಟ್ಟಿ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾತರಿಗೆ ಅನ್ಯಾವನ್ನುಂಟು ಮಾಡಿದ್ದಾರೆ, ಸ್ಥಳೀಯ ಕಾರ್ಯಕರ್ತರು ಯಾರು ? ಏನು ? ಎಂಬ ಸಂಭಂದವಿಲ್ಲದಂತೆ ವರ್ತಿಸುತ್ತಿರುವ ಜೋಷಿಯವರಿಗೆ ಟಿಕೆಟ್ ನೀಡಬಾರದು, ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಬಹುಸಂಖ್ಯಾತ ಲಿಂಗಾಯತರಿಗೆ ಟಿಕೆಟ್ ನೀಡಬೇಕೆಂದು ಅಗ್ರಹಿಸಿದ್ದಾರೆ.

      ಸುದ್ದಿಗೊಷ್ಟಿಯಲ್ಲಿ ಬಸವರಾಜ ಕುರಗೋಡಿ, ದುಂಡಪ್ಪ ರಾಯಣ್ಣವರ, ಶಂಕ್ರಪ್ಪ ಗುಳೆದ, ಮನೋಹರ ಹಿಂಡಿ, ಶಿದ್ದಪ್ಪ ಭಾವಿಕಟ್ಟಿ, ದುಂಡಪ್ಪ ಸವನೂರ, ಸತೀಶ ನಾಗನೂರ, ಉಮೇಶ ಹುಬ್ಬಳ್ಳಿ, ಪಾಂಡು ದಂಡೀನ, ಜಗದೀಶ ಗಟಾರದಳ್ಳಿ ಸೇರಿದಂತೆ ಭಾಜಪ ಮುಖಂಡರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link