ಜೂ1ರಿಂದ ಆ4ರವರೆಗೂ ಮಳೆ ಹಾನಿಯ ಮಾಹಿತಿ
ರಾಜಧಾನಿ ರಸ್ತೆಗಳೆಲ್ಲಿ ನೀರು ಬೈಕ್ ಸವಾರರ ಪರದಾಟ
ಕರಾವಳಿಯಲ್ಲಿ ರೆಡ್ ಅಲರ್ಟ್
ಬೆಂಗಳೂರು : ಜೂನ್’ನಿಂದ ಆರಂಭವಾದ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಮತ್ತೇ ಮಳೆ ಅಬ್ಬರ ಜೋರಾಗಿದ್ದು ಎಡಬಿಡದೆ ಸುರಿಯುತ್ತಿದೆ. ಮುಂಜಾನೆಯಿಂದಲೇ ರಾಜಧಾನಿಯಲ್ಲಿ ಜಿಟಿಜಿಟಿ ಮಳೆ ಆರಂಭವಾಗಿದ್ದು, ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದಾಗಿ ಕಚೇರಿ ಕೆಲಸಗಳಿಗೆ, ಅಂಗಡಿಗಳಿಗೆ ಹೊರಟ ಬೈಕ್ ಸವಾರರು ಪರದಾಡುವಂತಾಗಿದೆ.
ನಗರದಲ್ಲಿ ಬೆಳಗ್ಗೆಯಿಂದ ಎಡೆಬಿಡದೆ ಸುರಿಯುತ್ತಿರುವ ಬಾರಿ ಮಳೆಯಿಂದ ಸಿಗ್ನಲ್ ಗಳಲ್ಲಿ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ರಸ್ತೆ, ಫೈಓವರ್ ಮೇಲೆ, ಅಂಡರ್ ಪಾಸ್ ತಗ್ಗು ಪ್ರದೇಶಗಳ ಜಲಾವೃತ ಹೀಗೆ ಬಹುತೇಕ ರಸ್ತೆಗಳೆಲ್ಲವೂ ನೀರಿನ ಕೊಳಗಳಂತೆ ಸೃಷ್ಟಿಯಾಗಿದೆ, ರಸ್ತೆ ಯಾವುದು, ಚರಂಡಿ ಯಾವುದು ಎಂಬುದೇ ತಿಳಿಯುತ್ತಿಲ್ಲ, ಇನ್ನ ಬಿಬಿಎಂಪಿ ಹಾಗೂ ಸರ್ಕಾರದ ಸಿಂಗಾಪುರ ಅಭಿವೃದ್ಧಿ ಅಂದರೇ ಇದೇನಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಮೈಸೂರು ರಸ್ತೆ, ಚಾಮರಾಜಪೇಟೆ, ಹೊಸಕೆರೆಹಳ್ಳಿ, ವಿಜಯನಗರ, ನಾಯಂಡಹಳ್ಳಿ, ಶ್ರೀನಗರ, ಚಂದ್ರಾ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಬಿಟಿಎಂ ಲೇಔಟ್, ಜಯನಗರ, ಕೆಆರ್ ಮಾರ್ಕೆಟ್ ಸೇರಿ ಹಲವೆಡೆ ಮಳೆ ಆರ್ಭಟದಿಂದ ಜಿನ ಜೀವನ ಅಸ್ತವ್ಯಸ್ತವಾಗಿ ಪರದಾಡುವಂತಾಗಿತ್ತು.
ಇನ್ನೂ 5ದಿನ ಮಳೆ : ರಾಜ್ಯದಲ್ಲಿ ಇನ್ನೂ 5ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ, ಪ್ರಸ್ತುತ ವಾಡಿಕೆಗಿಂತ ಹೆಚ್ಚು ಮಳೆ ಬೀಳಲಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಜೂನ್ 1 ರಿಂದ ಆಗಸ್ಟ್ 4ರವರೆಗೂ 506 ಮಿಮೀ ಮಳೆಯಾಗಬೇಕಿತ್ತು, ಆದರೆ 610 ಮಿಮೀ ಮಳೆಯಾಗಿದ್ದು ಶೇ21 ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದು ಮಾಹಿತಿ ನೀಡಿದರು.
ಜೂನ್ 1 ರಿಂದ ಆ 4 ರವೆಗೂ ಮಳೆ ಹಾನಿಯ ಮಾಹಿತಿ : ರಾಜ್ಯಾದ್ಯಾಂತ ಕಳೆದ ತಿಂಗಳ ಜೂನ್ 1 ರಿಂದ ಆಗಸ್ಟ್ 4ರವರೆಗೆ ಭಾರಿ ಮಳೆಯಿಂದಾಗಿ ಬಹುದೊಡ್ಡ ಅವಾಂತರವನ್ನೇ ಸೃಷ್ಠಿಸಿದೆ. ವರುಣನ ಆರ್ಭಟದಿಂದಾಗಿ ರಾಜ್ಯದ 14 ಜಿಲ್ಲೆಗಳ ಜನರು ತೊಂದರೆಗೆ ಸಿಲುಕಿದ್ದಾರೆ. ರಾಜ್ಯದಲ್ಲಿ 608 ಮನೆ, 299 ರಸ್ತೆ, 4,224 ಶಾಲೆಗಳಿಗೆ ಹಾನಿಯಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಜೂನ್ 1ರಿಂದ ಆಗಸ್ಟ್ 4,ರವರೆಗೆ ರಾಜ್ಯದ 14 ಜಿಲ್ಲೆಯಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. 64 ಜನರು ಸಾವನ್ನಪ್ಪಿದ್ದಾರೆ. 1,4,956 ಜನರು ಪ್ರವಾಹ ಪೀಡಿತರಾಗಿದ್ದಾರೆ. ಇನ್ನೂ ವರುಣನ ಆರ್ಭಟದಿಂದಾಗಿ 608 ಮನೆಗಳು ಸಂಪೂರ್ಣ ನಾಶ, 2,450 ಮನೆ ಭಾಗಶಹ ಹಾನಿಗೊಂಡಿದೆ. ಈವರೆಗೆ ನೆರೆಯಲ್ಲಿ ಸಿಲುಕಿದ್ದಂತ 8,057 ಜನರು ರಕ್ಷಣೆ ಮಾಡಲಾಗಿದೆ. 6933 ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯಪಡೆದಿದ್ದಾರೆ, ಮಳೆಯಿಂದಾಗಿ 1,8,280 ಹೆಕ್ಟೇರ್ ಬೆಳೆ ನಾಶವಾಗಿದೆ. 4,500 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶಗೊಂಡಿದೆ. 1,392 ಕಿಲೋಮೀಟರ್ ರಸ್ತೆ ಹಾನಿಗೊಂಡಿದೆ. 61 ಕೆರೆಗಳು ಹಾನಿಗೊಂಡಿವೆ. 299 ಸೇತುವೆಗಳು, 4224 ಶಾಲೆಗಳಿಗೆ ತೋಂದರೆಯಾಗಿದೆ.
– ಆರ್.ಅಶೋಕ್. ಕಂದಾಯ ಸಚಿವರು.
ಬೆಂಗಳೂರಿನಲ್ಲಿ ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಪರಿಸ್ಥಿತಿ ಎದುರಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ಮಳೆ ಬರುತ್ತಿದ್ದು ದ್ವಿಚಕ್ರವಾಹನ ಸವಾರರು ಪರದಾಡುವಂತಾಗಿದೆ, ರಸ್ತೆಗಳಲ್ಲಿ ನೀರು, ಅಂಡರ್ ಪಾಸ್ ನಲ್ಲಿ ನೀರು, ಮನೆಗಳಿಗೆ ನೀರು ನಿಗ್ಗಿ ಹಾನಿಯಾಗುತ್ತಿದೆ, ಪದೇ ಪದೇ ಇದೇ ಪರಿಸ್ಥಿತಿ ಉಂಟಾಗುತ್ತಿದ್ದರೂ ಬಿಬಿಎಂಪಿ ಹಾಗೂ ಸರ್ಕಾರ ಏನು ಕ್ರಮ ಕೈಗೊಳ್ಳುತ್ತಿಲ್ಲ ಮತ್ತೇ ಅಧಿಕಾರಕ್ಕಾಗಿ ಎಲ್ಲಾ ಪಕ್ಷಗಳು ಕಿತ್ತಾಡುತ್ತಿದೆ. ರಾಜಧಾನಿಗೆ ಮಳೆ ಬಂದಾಗ ನೀರು ನಿಲ್ಲದಂತೆ ಶಾಶ್ವತ ಪರಿಹಾರ ಬೇಕಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು, ಸರ್ಕಾರ ಕೆಲಸ ಮಾಡಬೇಕು ಎಂದು ಒತ್ತಾಯಿಸುತ್ತೇನೆ.
– ನವೀನ್ ಕುಮಾರ್, ಬೆಂಗಳೂರು.