ಹಾವೇರಿ:
ರಾಜ್ಯದಲ್ಲಿ ಹಾಗೂ ದೇಶದಲ್ಲಿ ಮೋದಿ ಅಲೆಯಿಲ್ಲ. ಬಿಜೆಪಿ ಸಂಸದರು ಅಭಿವೃದ್ಧಿ ವಿಚಾರ ಮಾತನಾಡುತ್ತಿಲ್ಲ. ಆ ಕಾರಣದಿಂದ ಈ ಬಾರಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಶ್ಚಿತ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಲೋಕಸಭಾ ಚುನಾವಣೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ನಾನು ಸಹ ರಾಜ್ಯದ ಹಲವು ಭಾಗದಲ್ಲಿ ಸುತ್ತಾಡಿ ಬಂದಿರುವೆ. ಕಳೆದ ಚುನಾವಣೆಯಲ್ಲಿ ಇದ್ದ ಹಾಗೇ, ಮೋದಿ ಹವಾ ಈ ಬಾರಿಯಿಲ್ಲ.
ಈ ಬಾರಿ ಬಿಜೆಪಿ ಮೇಲಿನ ವಿಶ್ವಾಸವನ್ನು ಜನರು ಕಳೆದುಕೊಂಡಿದ್ದಾರೆ. ಯಾವ ಬಿಜೆಪಿ ಸಂಸದರು ಸಹ ಅಭಿವೃದ್ಧಿ ವಿಚಾರದಲ್ಲಿ ಮತ ಕೇಳುತ್ತಿಲ್ಲ. ಮೋದಿ ನೋಡಿ ಓಟು ನೀಡಿ ಎನ್ನುತ್ತಿದ್ದಾರೆ. ಇದರಿಂದ ಜನರಿಗೆ ಅರ್ಥವಾಗಿದೆ. ಬಿಜೆಪಿ ಅವರ ಅಭಿವೃದ್ಧಿ ಕಾರ್ಯವನ್ನು ಮಾಡುವಂತ ಜನರಲ್ಲ ಎಂದು. ಆ ಕಾರಣದಿಂದ ಅಭಿವೃದ್ಧಿಪರ ನಿಲುವು ಹೊಂದಿರುವ ಮೈತ್ರಿ ಅಭ್ಯರ್ಥಿಗಳನ್ನು ಜನರು ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು.
ಕಳೆದ ಬಾರಿ ಮೋದಿ ಮೇಲೆ ಜನರು ವಿಶ್ವಾಸ ಹೆಚ್ಚಾಗಿತ್ತು. ಈ ಬಾರಿ ಆ ವಿಶ್ವಾಸವನ್ನು ಜನರು ಕಳೆದುಕೊಂಡಿದ್ದಾರೆ. ಅವರಿಂದ ಯಾವ ಅಭಿವೃದ್ಧಿ ಕಾರ್ಯವಾಗಿಲ್ಲ. ಈ ಚುನಾವಣೆ ಬಿಜೆಪಿಗೆ ಈ ಹಿಂದಿನಗಿಂತ ಇಲ್ಲ. ವಾಜಪೇಯಿ, ಅಡ್ವಾಣಿ ಅಂತಹ ನಾಯಕರನ್ನು ಮೂಲೆಗುಂಪು ಮಾಡಿರುವದು ಬಿಜೆಪಿ ಕಟ್ಟಿ ಬೆಳೆಸಿದವರಲ್ಲಿ ಅಸಮಾಧಾನ ಹುಟ್ಟುಹಾಕಿದೆ ಇದು ಬಿಜೆಪಿ ನಾಯಕರಿಗೆ ಮುಳುವಾಗಲಿದೆ ಎಂದು ತಿಳಿಸಿದರು.
ಈ ಹಿಂದೆ ತೃತೀಯ ರಂಗದಲ್ಲಿ ರಾಜಕೀಯ ಬದ್ಧತೆ, ಇಂದಿನ ನಾಯಕರಲ್ಲಿ ಇಲ್ಲ. ಅದಕ್ಕಾಗಿ ತೃತೀಯ ರಂಗ ಅಸ್ತಿತ್ವಕ್ಕೆ ಬರುವದು ಸ್ವಲ್ಪು ಮಟ್ಟಿಗೆ ಕಷ್ಟವಾಗುತ್ತದೆ. ದೇಶದಲ್ಲಿ ಜಾತ್ಯಾತೀತ ಒಕ್ಕೂಟ ವ್ಯವಸ್ಥೆಯ ಮೇಲೆ ನಂಬಿಕೆ ಹೊಂದಿರುವ ಪಕ್ಷಗಳು ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಕೋಮವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮುಂದಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಅಶೋಕ ಬೇವಿನಮರದ, ಮುಖಂಡರಾದ ಡಾ.ಸಂಜಯ ಡಾಂಗೆ, ಉಮೇಶ ತಳವಾರ, ಶ್ರೀಪಾದ ಸಾಹುಕಾರ,ಶಿವಕುಮಾರ ಮಠದ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








