ರಾಣಿಬೆನ್ನೂರು:
ಇತ್ತೀಚೆಗೆ ಹಾವೇರಿಯಲ್ಲಿ ರಾಜ್ಯ ಶಿಕ್ಷಣ ಮತ್ತು ಸಂಶೋಧನೆ ತರಬೇತಿ ಇಲಾಖೆ ಹಾಗೂ ಸಾರ್ವಶಿಕ್ಷಣ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಾಲೂಕಿನ ಕುಮಾರಪಟ್ಟಣ ಆದಿತ್ಯಾ ಬಿರ್ಲಾ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಸ್ವರೂಪ ಆರ್.ಕೆ. ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ವಸ್ತು ಪ್ರದರ್ಶನದಲ್ಲಿ ವ್ಯವಸಾಯದಲ್ಲಿ ಪರ್ಯಾಯ ಕೃಷಿ ಎಂಬ ಶಿರ್ಷಿಕೆಯಲ್ಲಿ ವಸ್ತು ಪ್ರದರ್ಶನ ನೀಡಿದ್ದಾನೆ. ಶಾಲೆಯ ಪ್ರಾಚಾರ್ಯೆ ನೀತಾ ಮೆನನ್, ಸಹಶಿಕ್ಷಕ ಸಂತೋಷ ಕರ್ಕಿ ಮಾರ್ಗದರ್ಶನ ನೀಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ