ದೆಹಲಿ:
ರಾಜ್ಯಸಭೆ ಚುನಾವಣೆಯಲ್ಲಿ ನೋಟಾ(None Of The Above) ಆಯ್ಕೆಯನ್ನು ಬಳಸುವಂತಿಲ್ಲ ಎಂದು ಸುಪ್ರೀಕೋರ್ಟ್ ಮಹತ್ವದ ತೀರ್ಪನ್ನು ನೀಡಿ ಆದೇಶ ಹೊರಡಿಸಿದೆ.ಇದಕ್ಕೆ ಅವಕಾಶ ನೀಡಿದ್ದ ಚುನಾವಣೆ ಆಯೋಗದ ಅಧಿಸೂಚನೆಯನ್ನು ಕೋರ್ಟ್ ವಜಾಗೊಳಿಸಿದೆ.
ಕಾಂಗ್ರೆಸ್ ಮುಖಂಡ ಶೈಲೇಶ್ ಮನುಭಾಯ್ ಪರ್ಮಾರ್ ಅವರು ರಾಜ್ಯಸಭೆಗೆ ನೋಟಾ ಬಳಕೆಗೆ ಅನುಮತಿ ನೀಡಿದ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಅಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಿತು.
ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯಪೀಠ, “ನೋಟಾ ಆಯ್ಕೆ ನೇರ ಚುನಾವಣೆಯಲ್ಲಿ ಮತದಾನ ಮಾಡುವ ವೈಯಕ್ತಿಕ ಮತದಾರರಿಗೆ ಸಂಬಂಧಿಸಿದ್ದೇ ಹೊರತು ರಾಜ್ಯಸಭೆಯಂಥ ಚುನಾವಣೆಗೆ ಇದು ಸೂಕ್ತವಲ್ಲ” ಎಂದು ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ