ಐ.ಡಿ.ಹಳ್ಳಿ
ಆಂಧ್ರದ ಗಡಿಭಾಗದಲ್ಲಿರುವ ಐ.ಡಿ.ಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ರಂಗನಾಥಪ್ಪ ಇವರಿಗೆ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಸನ್ಮಾನ್ಯ ಮಾನ್ಯ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ರವರು ನೀಡಲಾಯಿತು.ಆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿರುವುದರಿಂದ ಶಾಲೆಯ ವಿದ್ಯಾರ್ಥಿಗಳ ಎಲ್ಲಾ ಪೋಷಕರಿಗೂ ಮತ್ತು ಹಳೆಯ ವಿದ್ಯಾರ್ಥಿಗಳಿಗೂ ಹಾಗೂ ಐ.ಡಿ.ಹಳ್ಳಿ ಹೋಬಳಿಯ ಎಲ್ಲಾ ಸಾರ್ವಜನಿಕರಿಗೆ ಸಂತೋಷ ಹಾಗೂ ಕಿರ್ತಿ ತಂದಂತಾಗಿದೆ.
ಇವರು ಹುಟ್ಟಿದ್ದು ಆಂಧ್ರದ ಗುಡುಗುರಿಕೆ ಎಂಬ ಗ್ರಾಮದಲ್ಲಿ ಜನಿಸಿದ ಇವರು ಹುಟ್ಟಿನಿಂದಲೇ ಕನ್ನಡವನ್ನು ಅರಿತುಕೊಂಡು ಕನ್ನಡದ ಬಗ್ಗೆ ಕಾಳಜಿ ವಹಿಸಿ ಕನ್ನಡ ಭಾಷೆಗೆ ಗೌರವವನ್ನು ನೀಡಿದ ರಂಗನಾಥಪ್ಪ ರವರು ಕರ್ನಾಟಕದಲ್ಲಿ ಕನ್ನಡ ಶಿಕ್ಷಕರಾಗಿ ಪ್ರಪ್ರಥಮವಾಗಿ ಆಂಧ್ರದ ಗಡಿಭಾಗದಲ್ಲಿರುವ ಐ.ಡಿ.ಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಸರ್ಕಾರಿ ನೌಕರರಾಗಿ ಕನ್ನಡ ಭಾಷಾ ಶಿಕ್ಷಕರಾಗಿ ಬಂದು ಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡದ ನಾಡು ನುಡಿ ಜಲ ಭಾಷೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಪಾಠ ಬೋಧನೆಯನ್ನು ಮಾಡಿತ್ತ.
ವಿದ್ಯಾರ್ಥಿಗಳನ್ನು ದೊಡ್ಡಮಟ್ಟದ ಅಧಿಕಾರಿಗಳನ್ನಾಗಿ ಮಾಡಿರುವಂತಹ ಇವರಿಗೆ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ದೊರಕಿರುವುದರಿಂದ ಶಾಲೆಯ ವಿದ್ಯಾರ್ಥಿಗಳಲ್ಲಿಯೂ ಒಳ್ಳೆ ಅಭಿಪ್ರಾಯ ಮೂಡುತ್ತಿದೆ. ಆದರಿಂದ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ನಾನು ಶಿಕ್ಷಕರಾಗಬೇಕು ಅಥವಾ ಒಳ್ಳೆಯ ದೊಡ್ಡಮಟ್ಟದ ಆಧಿಕಾರಿಯಾಗಬೇಕು ಎಂಬುದು ಶಾಲೆಯ ವಿದ್ಯಾರ್ಥಿಗಳಲ್ಲಿ ಮೂಡಿದೆ.ಇವರು ಈ ಶಾಲೆಗೆ ಬಂದಾಗಿನಿಂದ ಪ್ರತಿ ವರ್ಷವೂ ಕನ್ನಡ ಭಾಷಾ ಪುಸ್ತಕದಲ್ಲಿ ಐ.ಡಿ.ಹಳ್ಳಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ