ತುಮಕೂರು:
ಕರ್ನಾಟಕವನ್ನು ನಂಬರ್ ಒನ್ ಮಾಡಲು ಈ ಭಾರಿ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಗೆಲ್ಲಿಸುವ ಸಂಕಲ್ಪ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ತಮಕೂರಿನಲ್ಲಿ ಇಂದು ರಾಜ್ಯ ವಿಧಾನ ಸಭೆಯ ಚುನಾವಣ ಪ್ರಚಾರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕರ್ನಾಟಕವನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ನಂಬರ್ ಒನ್ ಮಾಡಲಾಗುವುದು. ಹಾಗಾಗಿ ರಾಜ್ಯದ ಮತದಾರರು ಬಿಜೆಪಿ ಗೆಲ್ಲಿಸಲು ಸಂಕಲ್ಪ ಮಾಡಿ ಎಂದರು.
ಈ ಭಾರಿ ರಾಜ್ಯದಲ್ಲಿ ಬಿಜೆಪಿ ಅತೀ ಹೆಚ್ಚು ಸೀಟುಗಳು ಬರುತ್ತದೆ ಆದರೆ ಬೂತ್ ಮಟ್ಟದಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚು ಲೀಡ್ ಬರಬೇಕು ಈ ನಿಟ್ಟಿನಲ್ಲಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಳ್ಳಲು ಶ್ರಮ ಹಾಕಬೇಕು ಎಂದು ಕರೆ ನೀಡಿದರು.
ರಾಜ್ಯ ಹಾಗೂ ದೇಶದ ಜನತೆಗೆ ಬಿಜೆಪಿ ಸರಕಾರ ಆಧುನಿಕ ರಕ್ಷಣೆಯನ್ನು ಒದಗಿಸಿದೆ. ಬಿಜೆಪಿ ಸರಕಾರ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕಾರ್ಯಗತ ಮಾಡಲು ಹೋದರೆ ಜೆಡಿಎಸ್ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷ ತಡೆಯಲು ಪ್ರಯತ್ನಿಸಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ 85% ಕಮೀಷನ್ ಪಡೆದಿದೆ. ಕಾಂಗ್ರೆಸ್ ಸರಕಾರ ಲೂಟಿ ಮಾಡಿತ್ತು, ಇದರಬಗ್ಗೆ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಸ್ವತಃ ಒಪ್ಪಿಕೊಂಡಿದ್ದರು ಎಂದು ಲೇವಡಿ ಮಾಡಿದರು.
ಬಿಜೆಪಿ ಸರಕಾರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಉತ್ತಮ ಕೆಲಸ ಮಾಡಿದೆ.ಆಧುನಿಕ ನೂತನ ಶೈಕ್ಷಣಿಕ ನೀತಿ ತಂದಿದೆ. ಏಷ್ಯಾದ ಅತೀ ದೊಡ್ಡ ಎಲ್ಲಿಕಾಪ್ಟರ್ ಘಟಕವನ್ನು ಜಿಲ್ಲೆಯಲ್ಲಿ ಉದ್ಘಾಟಿಸಿದ್ದೇವೆ. ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ಕೈಗಾರಿಕಾ ಪ್ರದೇಶವನ್ನು ಕೂಡ ಉದ್ಘಾಟಿಸಿ, ರಾಷ್ಟಿçÃಯ, ಅಂತರಾಷ್ಟಿçÃಯ ಮಟ್ಟದ ಕೈಗಾರಿಕೆಗಳು ಕೆಲಸ ಮಾಡಲು ಅನುಕೂಲ ಮಾಡಿ ಕೊಡಲಾಗಿದೆ. ಇನ್ನು ಜಿಲ್ಲೆಗೆ ಹಲವಾರು ಯೋಜನೆಗಳು ಮುಂದಿನ ದಿನಗಳಲ್ಲಿ ಜಿಲ್ಲೆಗೆ ಲಭಿಸಲಿವೆ ಎಂದರು.
ಕೊಬ್ಬರಿ ಬೆಳೆಗಾರರಿಗೆ ಹೆಚ್ಚು ಬೆಲೆ ನೀಡುವ ಮೂಲಕ ಪ್ರೋತ್ಸಾಹ ನೀಡಲಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಸತ್ತು ಹೋಗುತ್ತದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯ ಡಬ್ಬಲ್ ಇಂಜೀನ್ ಸರಕಾರ ಬಂದರೆ ಆಯಾ ರಾಜ್ಯಗಳು ಅಭಿವೃದ್ಧಿ ಹೊಂದಲು ಸಾಧ್ಯ, ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರ ಕೊಡುವುದನ್ನು ರಾಜ್ಯ ಹಾಗೂ ದೇಶದ ಜನತೆ ಮರೆಯಬಾರದು ಎಂದು ಹೇಳಿದರು.
ಮೋದಿ ಬಂದಾಗಿನಿAದಲೂ ದೇಶದಲ್ಲಿ ಎಲ್ಲವೂ ಬದಲಾಗಿದೆ. ದೇಶದ ಹಳ್ಳಿ,ಹಳ್ಳಿಗೂ ವಿದ್ಯುತ್ ತಲುಪಿದೆ.2014 ರ ಮುಂಚೆ 18 ಸಾವಿರ ಹಳ್ಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ.ಇಂದು ಎಲ್ಲಾ ಮನೆಗಳಿಗೂ ವಿದ್ಯುತ್ ತಲುಪಿದೆ.1.5 ಲಕ್ಷ ಕುಟುಂಬಕ್ಕೆ ಜಲಜೀವನ್ ಮೂಲಕ ನೀರಿನ ಸೌಲಭ್ಯ ಸಿಕ್ಕಿದೆ. ಜಿಲ್ಲೆಯಲ್ಲಿ ಆರಂಭವಾಗಿರುವ ಪುಡ್ ಪಾರ್ಕ್ ನಿಂದ ಜಿಲ್ಲೆಯ ರೈತರಿಗೆ ಅನುಕೂಲ ಆಗಿದೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,ಸಂಸದರಾದ ಜಿ.ಎಸ್ ಬಸವರಾಜು, ಜಗ್ಗೇಶ್, ಜಿಲ್ಲೆಯ ಹಾಲಿ ಶಾಸಕರು,ಮಾಜಿ ಶಾಸಕರು ಮುಂತಾದವರು ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
