ದಾವಣಗೆರೆ:
ಇತ್ತೀಚೆಗೆ ನಗರದ ಆಂಜನೇಯ ಬಡಾವಣೆಯ ಜಿಲ್ಲಾ ಒಳಂಗಣ ಕ್ರೀಡಾಂಗಣದಲ್ಲಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ ತಾಲೂಕಿನ ಅರಸಾಪುರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲೆಯ 6 ಜನ ಬಾಲಕಿಯರು ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಲೆಯ ಕುಸ್ತಿ ಪಟುಗಳಾದ ತನುಜಾಬಾಯಿ, ಸ್ವಾತಿ, ದೀಪಾ ಬಾಯಿ, ಪವಿತ್ರಬಾಯಿ, ರೇಖಾ ಬಾಯಿ ಹಾಗೂ ದಿವ್ಯಾ ಬಾಯಿ ಅವರುಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಕುಸ್ತಿ ತರಬೇತುದಾರರಾದ ಶಿವಾನಂದ್, ವಿನೋದ ಹಾಗೂ ದೈಹಿಕ ನಿರ್ದೇಶಕರಾದ ಕೊಟ್ರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.