ಹರಪನಹಳ್ಳಿ:
ರಾಜಕೀಯ ಮತ್ತು ಜಾತಿ ಬಣ್ಣವಿಲ್ಲದ ಸಾರ್ವಜನಿಕ ಯಪಯೋಗಿ ಕಾರ್ಯಕ್ರಮಗಳಿಗೆ ನಮ್ಮ ಸಹಕಾರವಿದೆ. ಇಂತಹ ಕಾರ್ಯಕ್ರಮಗಳನ್ನು ವಿರೋಧಿಸುವವರಿಗೆ ನಾವು ಜಗ್ಗುವವರಲ್ಲ ಎಂದು ಹಿರಿಯ ವಕೀಲ ಟಿ.ಹೆಚ್.ಎಂ. ವಿರೂಪಾಕ್ಷಯ್ಯ ತಿಳಿಸಿದರು.ಪಟ್ಟಣದ ಎಡಿಬಿ ಕಾಲೇಜು ಆವರಣದಲ್ಲಿ ಶ್ರೀ ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್, ತಥಾಗತ್ ಮೆಡಿಕಲ್ ಟ್ರಸ್ಟ್ ಹಾಗೂ ಹರಪನಹಳ್ಳಿ ಐಎಂಎ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಬೃಹತ್ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು.
ದಿವಂಗತ ಎಂ.ಪಿ.ಪ್ರಕಾಶ್ ರವರು ಸದಾ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ಅವರ ಹಾದಿಯಲ್ಲೇ ಪ್ರಕಾಶ್ ರವರ ಪುತ್ರಿ ವೀಣಾ ಮಹಾಂತೇಶ್ ಹಾಗೂ ಅಳಿಯ ಮಹಾಂತೇಶ್ ಚರಂತಿಮಠರವರ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ.
ಒಳ್ಳೆಯ ಕೆಲಸಗಳಿಗೆ ವಿಘ್ನಗಳು ಎಂಬಂತೆ ಇಂತಹ ಜನಾನುರಾಗಿ ಕಾರ್ಯಗಳಿಗೆ ವಿರೋಧಿಗಳು ಹೆಚ್ಚು. ಭಾಗವಹಿಸುವ ಬಗ್ಗೆ ವಿರೋಧಿಸುವವರನ್ನು ನಾನು ಸಹಿಸುವುದಿಲ್ಲ. ನನಗೆ ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ ಎಂದರು.
ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ವೀಣಾ ಮಹಾಂತೇಶ್ ಮಾತನಾಡಿ. ಸಂಸ್ಥೆ ವತಿಯಿಂದ ಆರೋಗ್ಯ, ಕ್ರೀಡೆ, ಸಾಹಿತ್ಯ, ಸಾಂಸ್ಕತಿಕ, ಕೃಷಿ ಪ್ರಧಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಮುನ್ನೆಡೆದಿದೆ. ಹೋಬಳಿ ಮಟ್ಟದಲ್ಲಿ ಆಯೋಜಿಸಲು ಟ್ರಸ್ಟ್ ನಿರ್ಧರಿಸಿದ್ದು ಗ್ರಾಮೀಣ ಭಾಗದಲ್ಲಿ ಕಾರ್ಯಕ್ರಮದ ಮುಂದಾಳತ್ವ ವಹಿಸಿಕೊಳ್ಳುವವರು ನಮ್ಮನ್ನು ಸಂಪರ್ಕಿಸುವಂತೆ ಕೋರಿದರು.
ಪೆಭ್ರವರಿ 8 ರಂದು ಹೂವಿನಹಡಗಲಿಯಲ್ಲಿ ಎಂ.ಪಿ.ಪ್ರಕಾಶ್ ರವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶ್ರೀಗಳು, ಜಾರ್ಜ್ ಪರ್ನಾಂಡಿಸ್, ಎಂ.ಪಿ.ರವೀಂದ್ರರವರ ಸವಿನೆನಪಿಗಾಗಿ ನುಡಿನಮನ, ಭಕ್ತಿನಮನ, ಗೀತನಮನ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಮಾಡುವಂತೆ ಕೋರಿದರು.
ಐಎಂಎ ತಾಲೂಕು ಅಧ್ಯಕ್ಷ ಸ್ತ್ರೀರೋಗ ತಜ್ಞ ಡಾ. ಮಹೇಶ್ ಮಾತನಾಡಿ. ತಾಲೂಕಿಗೆ 371 ಜೆ ಕಲಂ ವಿಶೇಷ ಯೋಜನೆಯ ಸೌಲಭ್ಯವನ್ನು ತಾಲೂಕಿನ ಜನತೆಗೆ ಒದಗಿಸಿಕೊಡುವಲ್ಲಿ ದಿವಂಗತ ಎಂ.ಪಿ.ರವೀಂದ್ರರವರ ಪರಿಶ್ರಮಿಸಿದರೆ ಅವರ ಸಹೋದರಿ ವೀಣಾ ಮತ್ತು ಅಳಿಯ ಮಹಾಂತೇಶ್ ಇಂತಹ ಜನೋಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸ್ವಾಗತಾರ್ಹವಾಗಿದೆ. ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಆಶಿಸುತ್ತೇನೆ ಎಂದರು.
ಎಡಿಬಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಮೋಹನ್‍ರೆಡ್ಡಿ ಮಾತನಾಡಿ. ಜಾತಿಬೇದ, ವರ್ಗಬೇಧ ಹಾಗೂ ಆದಾಯಬಬೇಧವಿಲ್ಲದ್ದ ಆರೋಗ್ಯ ಶಿಬಿರಗಳು. ಇಂತಹ ವಿಶೇಷ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಡ ಜನರಿಗೆ ಅನುಕೂಲ ಮಾಡಿಕೊಡುವಂತೆ ಕೋರಿದರು.
ಶಿಬಿರದಲ್ಲಿ 500 ಕ್ಕೂ ಹೆಚ್ಚು ಜನ ಉಪಯೋಗ ಪಡೆದುಕೊಂಡರು. 8 ಜನ ಹೃದಯ ಸಂಬಂದಿ ಕಾಯಿಲೆಯ ರೋಗಿಗಳಿಗೆ ಜನರಲ್ ಸರ್ಜರಿಗೆ, 4 ಜನರಿಗೆ ಹೃದಯದ ಶಸ್ತ್ರ ಚಿಕಿತ್ಸೆಗೆ ಟ್ರಸ್ಟ್‍ನಿಂದ ಶಿಪಾರಸ್ಸು ಮಾಡಲಾಯಿತು. 140 ಜನರಿಗೆ ಎಕೋ ಟೆಸ್ಟ್, 200 ಕ್ಕೂ ಹೆಚ್ಚು ಜನ ಸಕ್ಕರೆಗೆ ಸಂಬಂದಿಸಿದ ತೊಂದರೆಯಲ್ಲಿದ್ದಾರೆ ಎಂದು ತಥಾಗತ್ ಮೆಡಿಕಲ್ ಟ್ರಸ್ಟ್‍ನ ಮುಖ್ಯಸ್ಥ ಡಾ.ಮಹಾಂತೇಶ್ ಚರಂತಿಮಠ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಖಾನ್, ಡಾ.ಅನಂತಶೆಟ್ಟಿ, ಡಾ.ಮಂಜುನಾಥ್, ಡಾ.ಮೆಣಸಿನಕಾಯಿ, ಡಾ.ಶ್ರೀನಿವಾಸ್, ಹಲಗೇರಿ ಮಂಜುನಾಥ್, ಕವಿತಾ ವಾಗೀಶ್, ನಿಲ್ ಆರ್ಮ್‍ಸ್ಟ್ರಾಂಗ್, ಎಎಸ್‍ಐ ಜಾತಪ್ಪ, ಶಿವಕುಮಾರನಾಯ್ಕ್, ಬಾಷಾ ಮುಜಾವರ್ ಹಾಗೂ ಇತರರು ಭಾಗವಹಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
