ರಾಣಿಬೆನ್ನೂರ:
ಸ್ಥಳೀಯ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯು ಇಲ್ಲಿನ ಕುರುಬಗೇರಿ ಕ್ರಾಸ್ ಬಳಿ ಪಿಬಿ ರಸ್ತೆಯ ಹತ್ತಿರ ಪ್ರತಿಷ್ಠಾಪಿಸಿರುವ ರಾಣಿಬೆನ್ನೂರ ಕಾ ರಾಜಾ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯಕ್ರಮದ ನಿಮಿತ್ಯ ಬೃಹತ್ ಶೋಭಾಯಾತ್ರೆ, ಸನ್ಮಾನ, ಉಪನ್ಯಾಸ ಮತ್ತಿತರ ಕರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಅ.9ರಂದು ಸಂಜೆ 5-30ಕ್ಕೆ ರಾಮಕೃಷ್ಣ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್ ಸಾನಿಧ್ಯದಲ್ಲಿ ಸಚಿವ ಆರ್ ಶಂಕರ, ಕಲಾವಿದರಾದ ಇಂದ್ರಕುಮಾರ, ದಾನಿ ತಿರಕಪ್ಪ ಕಾಕಿ ಸೇರಿದಂತೆ ನಗರಸಭೆಯ ಎಲ್ಲ 35 ನೂತನ ಸದಸ್ಯರುಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅಂದೇ ಪ್ರಸಿದ್ದ ಭಾಷಣಗಾರ್ತಿ ಚೈತ್ರಾ ಕುಂದಾಪುರವರಿಂದ ನಿಮ್ಮೊಳಗೊಂದು ಭಾರತ ಕುರಿತು ಉಪನ್ಯಾಸ ಜರುಗಲಿದೆ. ಅ.10ರಂದು ಅನ್ನ ಸಂತರ್ಪಣೆ ನಡೆಯಲಿದೆ. ಅ.11 ರಂದು ಸಂಜೆ 4 ಘಂಟೆಗೆ ಬೃಹತ್ ಶೋಭಾಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಪ್ರಕಾಶ ಬುರಡಿಕಟ್ಟಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
