ಹರಿಹರ:
ಬೆಂಗಳೂರಿನ ಜೀವನಜ್ಯೋತಿ ಯೋಗಕೇಂದ್ರ, ಕೌಂಡಿನ್ಯ ಯೋಗಕೇಂದ್ರ ಮೈಸೂರು ಇವರ ಸಂಯುಕ್ತಾಶ್ರ್ರಯದಲ್ಲಿ ಡಾ. ರಾಜ್‍ಕುಮಾರ ಸವಿ ನೆನಪಿಗಾಗಿ 3ನೇ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯು ಬೆಂಗಳೂರು ಮಲ್ಲೇಶ್ವರಂನ ಶ್ರೀ ರಾಮಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸ್ಪರ್ಧೆಯಲ್ಲಿ ಹರಿಹರ ಶ್ರೀ ಸಪ್ತರಿಷಿ ಯೋಗ ಕೇಂದ್ರದ ಯೋಗಾಪಟುಗಳಾದ 8 ವರ್ಷದ ಒಳಗಿನ ಬಾಲಕಿಯರಲ್ಲಿ ಕುಮಾರಿ ನಮಿತಾ.ಎನ್.ಪ್ರಭು ದ್ವಿತೀಯ ಸ್ಥಾನ, ಲೇಖನ ಎನ್ ತೃತೀಯ ಸ್ಥಾನ ಹಾಗೂ 40ರಿಂದ 50ರ ಮಹಿಳರ ವಿಭಾಗದಲ್ಲಿ ಶ್ರೀಮತಿ ಕೆ. ಸಾವಿತ್ರಮ್ಮ ಪ್ರಥಮ ಸ್ಥಾನ, 50ವರ್ಷ ಮೇಲ್ಪಟ್ಟು ವಯೋಮಿತಿಯಲ್ಲಿ ಡಾ.ಕೆ.ಜೈಮುನಿ ಪ್ರಥಮ ಸ್ಥಾನ, ಶ್ರೀಮತಿ ಪ್ರಸನ್ನಬಾಯಿ ಜಗತಪ್ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ, ಜಿಲ್ಲೆ ಮತ್ತು ತಾಲೂಕಿಗೆ ಕೀರ್ತಿ ತಂದಿರುತ್ತಾರೆ.
ಇವರುಗಳಿಗೆ ಶಾಸಕ ಎಸ್. ರಾಮಪ್ಪ, ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ಶಾಲೆಯ ಮುಖ್ಯೋಪಾಧ್ಯಯರುಗಳು ಶುಭ ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ