ಶ್ರೀ ಬಸವರೇಶ್ವರ ಜಯಂತಿ ಸರಳ ಆಚರಣೆ

ದಾವಣಗೆರೆ

        ಮೇ.07 ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಗಳ ಕಚೇರಿಯ ಸಭಾಂಗಣದಲ್ಲಿ ಶ್ರೀ ಬಸವೇಶ್ವರ ಜಯಂತಿಯನ್ನು ಶ್ರೀ ಬಸವೇಶ್ವರರವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಸರಳವಾಗಿ ಆಚರಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹೆಚ್. ಬಸವರಾಜೇಂದ್ರ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ದಾವಣಗೆರೆ ಉಪವಿಭಾಗಧಿಕಾರಿ ಬಿ.ಟಿ. ಕುಮಾರಸ್ವಾಮಿ, ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.

        ಈ ವೇಳೆ ಬಸವ ಬಳಗದ ವಿ. ಸಿದ್ದರಾಮ ಶರಣರು, ಅಥಣಿ ವೀರಣ್ಣ, ಹುಚ್ಚಪ್ಪ ಮಾಸ್ತರ್ ಬಸವ ತತ್ವಗಳ ಬಗ್ಗೆ ಕುರಿತು ಮಾತನಾಡಿದರು. ಕದಳಿ ಮಹಿಳಾ ವೇದಿಕೆಯ ಮಹಿಳೆಯರು ವಚನ ಗಾಯನ ಮಾಡಿದರು. ಐರಣಿ ಚಂದ್ರು ಬಸವಣ್ಣನ ಕುರಿತು ಗಾಯನ ಮಾಡಿದರು. ಶಿವಕುಮಾರ್ ದೇವರಮನಿ, ವೀರಭದ್ರಪ್ಪ ದೇವಿಗೆರೆ, ಶಶಿಧರ್, ಮಹಾಲಿಂಗಪ್ಪ ಹಾಗು ಇತರೆ ಸಮಾಜದ ಮುಖಂಡರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ