ಶಿಗ್ಗಾವಿ :
ತಾಲೂಕಿನ ಎಲ್ಲ ತರಿ ಭೂಮಿ ಹೊಂದಿದ ರೈತರಿಗೆ ಚಿಕ್ಕ ಹಿಡುವಳಿ ನೀಡುವಂತೆ ಅಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಘಟಕದ ರೈತ ಪದಾಧಿಕಾರಿಗಳು ತಹಶೀಲ್ದಾರರಿಗೆ ಮನವಿ ಅರ್ಪಿಸಿದರು.
ಮನವಿ ಅರ್ಪಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾದ್ಯಕ್ಷ ಹನುಮಂತ ಹುಚ್ಚಣ್ಣವರ, 3 ಎಕರೆ ಭೂಮಿಯಲ್ಲಿ ಒಣ ಬೇಸಾಯ ಮಾಡಿದರೂ ನಮಗೆ ಸಣ್ಣ ಹಿಡುವಳಿ ಸಿಗುತ್ತಿಲ್ಲ, ಕಾರಣ ಕೇಳಿದರೆ ಭೂಮಿ ತರಿ ಭೂಮಿಯಿದೆ ಇದನ್ನು ನೀರಾವರಿ ಭೂಮಿ ಎಂದು ಪರಿಗಣಿಸಲಾಗುವುದು ಹಾಗಾಗಿ 3 ಎಕರೆ ಭೂಮಿ 6 ಎಕರೆ ಆಗುತ್ತದೆ ಎಂದು ಹೇಳಿ ಸಣ್ಣ ಹಿಡುವಳಿ ಕೊಡಲಿಕ್ಕೆ ಬರುವುದಿಲ್ಲ ಎಂದು ಕಾರಣ ಹೇಳುತ್ತಿದ್ದಾರೆ ಎಂದರು.
ಯಾವ ಕೆರೆ ಕಟ್ಟೆಯಲ್ಲಿಯೂ ಒಂದು ಹನಿ ನೀರಿಲ್ಲ ಹಾಗಾಗಿ ನೀರಾವರಿ ಮಾಡಲಿಕ್ಕೆ ಹೇಗೆ ಸಾದ್ಯ ?ರೈತ ಸಮುದಾಯಕ್ಕೆ ಸರಕಾರ ಯಾವುದೇ ಯೋಜನೆ ತಂದರೂ ಮೊದಲು ಚಿಕ್ಕ ಹಿಡುವಳಿ ಕೇಳುತ್ತಾರೆ ಆದರೆ ಈ ತರಿ ಭೂಮಿ ಕಾರಣದಿಂದ ಸರಕಾರದ ಯೋಜನೆಯ ಲಾಭ ರೈತ ಸಮುದಾಯಗಳಿಗೆ ಸಿಗುತ್ತಿಲ್ಲ ರೈತರಿಗೆ ತುಂಬಾ ಅನ್ಯಾಯವಾಗಿದೆ ಆದ್ದರಿಂದ ಈ ತರಿ ಭೂಮಿಯನ್ನು ನೀರಾವರಿ ಭೂಮಿಯನ್ನಾಗಿ ಪರಿಗಣಿಸದೇ 5 ಎಕರೆ ಇರುವ ಎಲ್ಲ ರೈತರಿಗೆ ಚಿಕ್ಕ ಹಿಡುವಳಿ ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲಾದ್ಯಕ್ಷ ಹನುಮಂತ ಹುಚ್ಚಣ್ಣವರ, ತಾಲೂಕಾದ್ಯಕ್ಷ ಮುತ್ತು ಗುಡಗೇರಿ ಹಾಗೂ ಬೆಂಡಿಗೇರಿ ಗ್ರಾ ಪಂ ಉಪಾದ್ಯಕ್ಷ ರಮೇಶ ಸಾತಣ್ಣವರ ಸೇರಿದಂತೆ ತಾಲೂಕಿನ ವಿವಿಧ ರೈತ ಮುಖಂಡರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
