ರೈತರಿಗೆ, ಸಾರ್ವಜನಿಕರಿಗೆ ಉಚಿತ ತೆಂಗಿನ ಸಸಿ ವಿತರಣೆ

ಕುಣಿಗಲ್

       ಸಹಸ್ರಾರು ರೈತರಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ತೆಂಗಿನ ಸಸಿ ನೀಡುವುದರ ಜತೆಗೆ ಪರಿಸರ ಸಂರಕ್ಷಿಸುವ ದೃಷ್ಟಿಯಿಂದ ಸಸಿ ನೆಡುವ ಕಾರ್ಯ ಹಾಗೂ ರಕ್ತದ ಕೊರತೆ ಇದ್ದವರಿಗೆ ರಕ್ತ ದಾನ ಮಾಡುವ ಶಿಬಿರವನ್ನು ಜೆಡಿಎಸ್ ಮುಖಂಡ ಬಿ.ಎನ್. ಜಗದೀಶ್ ಹುಟ್ಟುಹಬ್ಬದ ಪ್ರಯುಕ್ತ ಡಿ.ನಾಗರಾಜ್ಯ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಲಾಗಿತ್ತು.

       ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಡಿ.ನಾಗರಾಜಯ್ಯ ಹುಟ್ಟುಹಬ್ಬಗಳನ್ನ ದುಂದುವೆಚ್ಚದೊಂದಿಗೆ ಆಚರಿಸಿಕೊಳ್ಳದೆ, ಸಮಾಜದ ಒಳಿತಿಗೆ ಸಹಾಯ ಮಾಡುವ ಮೂಲಕ ಸರಳವಾಗಿ ಆಚರಿಸಿಕೊಳ್ಳಬೇಕಾಗಿದೆ ಎಂದು ಕಿವಿಮಾತು ಹೇಳಿದರು.

        ಅವರು ಪಟ್ಟಣದ ಜೆಡಿಎಸ್ ಕಚೇರಿಯ ಮುಂಭಾಗ ಆಯೋಜಿಸಿದ್ದ ರಾಜ್ಯ ಜೆಡಿಎಸ್ ಯುವ ಪ್ರಧಾನ ಕಾರ್ಯದರ್ಶಿ ಬಿ.ಎನ್.ಜಗದೀಶ್ ನಾಗರಾಜಯ್ಯರವರ 38ನೇ ಹುಟ್ಟುಹಬ್ಬವನ್ನ ರಕ್ತದಾನ ಶಿಬಿರ, ರೈತರಿಗೆ, ಸಾರ್ವಜನಿಕರಿಗೆ ತೆಂಗಿನ ಸಸಿಗಳನ್ನ ವಿತರಿಸಿ, ಅನ್ನ ಸಂತರ್ಪಣೆ ಮಾಡುವ ಮೂಲಕ ಅವರ ಅಭಿಮಾನಿಗಳು ಸರಳವಾಗಿ ಆಚರಿಸಿದರು. ಬಿ.ಎನ್.ಜಗದೀಶ್ ಮಾತನಾಡಿ, ನನ್ನ ಹುಟ್ಟುಹಬ್ಬದಂದು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಮಾಜಕ್ಕೆ ಉಪಯುಕ್ತವಾಗುವ ರಕ್ತದಾನ ಶಿಬಿರ, ತೆಂಗಿನಸಸಿ ವಿತರಣೆ, ಅನ್ನ ಸಂತರ್ಪಣೆ ಕಾರ್ಯವನ್ನ ಕೈಗೊಂಡಿದ್ದು ಸಂತೋಷದ ವಿಷಯ. ಪರಿಸರದ ಬಗ್ಗೆ ಎಲ್ಲರೂ ಕಾಳಜಿವಹಿಸಿ ರಕ್ಷಿಸಬೇಕೆಂದರು.

       ಅಭಿಮಾನಿಗಳು ಕೇಕ್ ಕತ್ತರಿಸಿ ಸಿಹಿ ಹಂಚಿದರು. ಪುರಸಭಾ ಸದಸ್ಯ ಕೆ.ಎಲ್.ಹರೀಶ್, ಗುರುಪ್ರಸಾದ್, ತರಿಕೆರೆ ಪ್ರಕಾಶ, ದೀಪು, ಕೋಟೆ ನಾಗಣ್ಣ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap