ಹರಪನಹಳ್ಳಿ:
ಅರಣ್ಯ ಭೂಮಿ ಸಾಗುವಳಿದಾರರಿಗೆ ಪಟ್ಟಾ ಮಂಜೂರಾತಿ ಮತ್ತು ಅಕ್ರಮ ಸಕ್ರಮ ಯೋಜನೆಯ ಅಡಿಯಲ್ಲಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ರೈತರು ತಾಲೂಕಿನ ತೆಲಿಗಿ ನಾಡ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವನಹಳ್ಳಿ ಮಂಜುನಾಥ ಬಣ) ತಾಲೂಕು ಘಟಕದ ಆಶ್ರಯದಲ್ಲಿ ಜಿಲ್ಲಾ ಅಧ್ಯಕ್ಷ ಅರಸನಾಳು ಸಿದ್ದಪ್ಪ ಅವರ ನೇತೃತ್ವದಲ್ಲಿ ನಾಡ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಡಿಸೆಂಬರನಲ್ಲಿ ಈಗಾಗಲೇ ನೀಡಿರುವ ಕೆಲವೊಂದು ಅಕ್ರಮ ಸಕ್ರಮ ದ ಹಕ್ಕು ಪತ್ರಗಳಿಗೆ ಪಹಣಿ ಮಾಡಿಲ್ಲ, ಆದ್ದರಿಂದ ಬೇಗ ಪಹಣಿ ಮಾಡಬೇಕು ಎಂಬ ಬೇಡಿಕೆ ಸಹ ಅವರು ಮಂಡಿಸಿದರು.
ತಹಶೀಲ್ದಾರ ಡಾ.ಮಧು ಅವರು ಘಟನಾ ಸ್ಥಳಕ್ಕೆ ತೆರಳಿ ಬೇಡಿಕೆ ಪತ್ರ ಸ್ವೀಕರಿಸಿ ತಮ್ಮ ಬೇಡಿಕೆಗಳನ್ನು ಬೇಗ ಈಡೇರಿಸುವುದಾಗಿ ಭರವಸೆ ನೀಡಿದರು.
ರೈತ ಸಂಘದ ತೆಲಿಗಿ ಹೋಬಳಿ ಅಧ್ಯಕ್ಷ ಕರಿಯಪ್ಪ, ತಾಳೇದಹಳ್ಳಿ ತಾಂಡದ ಶೀಲನಾಯ್ಕ, ಕುಮಾರನಾಯ್ಕ, ಆರೇರ ಯಲ್ಲಪ್ಪ, ತಲುವಾಗಲು ಅಂಜಿನಪ್ಪ , ಅಣ್ಣಪ್ಪ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
