ಹರಿಹರ:
ರಾಜ್ಯದಲ್ಲಿ ಬರಗಾಲವಿದೇ, ರೈತರ ಸಾಲ ಮನ್ನಾದಂತಹ ಕಾರ್ಯಗಳು ನಡೆಯುತ್ತಿಲ್ಲಾ, ಜನರೇಲ್ಲಾ ಗುಳೆ ಹೊಗುತ್ತಿದ್ದಾರೆ, ನೀರಿಗಾಗಿ ಪರದಾಡುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಕುರ್ಚಿ ಉಳಿಸಿಕೊಳ್ಳಲು ಕಿತ್ತಾಡುತ್ತಿದ್ದಾರೆ, ಕೂಡಲೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾವಿಯವರು ರಾಜೀನಾಮೆ ನೀಡಬೇಕು ಎಂದು ಶಾಸಕ ಬಿ. ಶ್ರೀರಾಮುಲು ಆಗ್ರಹಿಸಿದರು.
ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿತ್ತಾಟದ ರಾಜಕಾರಣದಲ್ಲಿ ಒಬ್ಬರ ಮೇಲೆ ಒಬ್ಬರು ಹೇಳಿಕೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದ್ದಿರಿ ಕೂಡಲೇ ರಾಜೀನಾಮೆ ನೀಡಿ ಮನೆಗೆ ಹೋಗಲು ಆಗ್ರಹಿಸಿದ ಅವರು ಸಮ್ಮೀಶ್ರ ಸರ್ಕಾರದ ಎರಡು ಪಕ್ಷದ ಮುಖಂಡರು ತಮ್ಮ ಶಾಸಕರನ್ನು ಹಿಡಿದು ಇಟ್ಟುಕೊಳ್ಳದೆ ಬಿಜೆಪಿ ಪಕ್ಷ ಷಡ್ಯಂತರದಿಂದ ದೊಸ್ತಿ ಸರ್ಕಾರ ಕೆಡುವುತ್ತಾರೆ ಎಂಬುದು ಹಾಸ್ಯಸ್ಪದ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯನವರು ತಮ್ಮ ಪಕ್ಷದ ಶಾಸಕರನ್ನು ಹಿಡದಿಟ್ಟುಕೊಳ್ಳಲು ಆಗಲಿಲ್ಲವೆಂದರೆ ರಾಜೀನಾಮೆ ಕೊಟ್ಟು ಮನೆಗೆ ಹೊಗಲಿ, ಈಗಾಗಲೇ ಅವರದೇ ಶಾಸಕರು ಅವರದೇ ಸರ್ಕಾರದ ವಿರುದ್ದ ಅಸಮಾಧಾನ ಹೊಂದಿದ್ದಾರೆ ಯಾವುದೇ ಅಭಿವೃದ್ದಿ ಕೆಲಸ ವಾಗುತಿಲ್ಲಾ ಎಂದು ಹೇಳುತ್ತಿದಾರೆ, ಅವರದೇ ಕಿತ್ತಾಟದಿಂದ ಸರ್ಕಾರ ಪತನವಾದರೆ ನಾವೂ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಕೊಡಿ ಎಂದು ಕೇಳುತ್ತೇವೆ ನಾವೇನೂ ಸಾನ್ಯಾಸಿಗಳಲ್ಲಾ ಎಂದು ಹೇಳಿದರು.
ನಾವೂ ಯಾವ ಶಾಸಕರನ್ನು ಸೇಳೆಯುತ್ತಿಲ್ಲಾ, ನಿಮ್ಮ ನಿಮ್ಮಲ್ಲಿನ ಅಸಮಾಧಾನಕ್ಕೆ ನಾವೂ ಕಾರಣರಲ್ಲಾ, ಹಾಗಾಗೀ ನಿಮಗೆ ಆಡಳಿತ ನಡೆಸಲಿಕ್ಕೆ ಹಕ್ಕಿಲ್ಲಾ ನಿಮ್ಮ ಆಡಳಿತದಿಂದ ರಾಜ್ಯದ ಜನರು ಬೇಸತ್ತಿದ್ದಾರೆ, ಯಾವುದೇ ಸಂದರ್ಭದಲ್ಲಿ ಸರ್ಕಾರದಲ್ಲಿ ಏನಾದರೂ ಬದಲಾವಣೆ ಕಾಣಬಹುದು ಎಂದು ಉತ್ತರಿಸಿದರು.