ಹರಪನಹಳ್ಳಿ
ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರು ಸಜ್ಜನ ನಾಯಕರು, ಅಂತರ್ ರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಪಡೆದ ರಾಜಕೀಯ ಮುತ್ಸದ್ದಿಯಾಗಿದ್ದರು ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ನಿಮಿತ್ತ ರೋಗಿಗಳಿಗೆ ಹಣ್ಣು, ಬ್ರೇಡ್ ವಿತರಿಸಿ ಅವರು ಮಾತನಾಡಿದರು.
ದೇಶಕಂಡ ಮಹಾನ್ ನಾಯಕ ಅಟಲಜೀ. ಅವರು ಶ್ರೇಷ್ಠ ಸಂಸದೀಯ ಪಟು, ವಾಗ್ಮಿ, ಕವಿ, ನೇತಾರ ಹಾಗೂ ಜನನಾಯಕರಾಗಿದ್ದರು. ರಾಜಕೀಯ ಕ್ಷೇತ್ರದಲ್ಲಿ ಅಜಾತಶತ್ರು ಎಂದೇ ಎಂಬ ಖ್ಯಾತಿ ಪಡೆದಿದ್ದರು. ಅವರ ಆದರ್ಶಗಳು ಇಂದಿನ ರಾಜಕಾರಣಿಗಳಿಗೆ ಪ್ರೇರಣೆಯಾಗಿವೆ’ ಎಂದರು.
`ದೇಶದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದ್ದೇ ಅಟಲಜೀ ಪ್ರಧಾನಿ ಆಗಿದ್ದಾಗ. ಗ್ರಾಮೀಣಾಭಿವೃದ್ಧಿ, ಶೈಕ್ಷಣಿಕ ಕ್ಷೇತ್ರ ಪ್ರಗತಿ ಕಂಡವು. ಗ್ರಾಮೀಣ ಪ್ರದೇಶ ಸೇರಿದಂತೆ ದೇಶದೆಲ್ಲಡೆ ರಸ್ತೆ ಸಂಪರ್ಕಕ್ಕೆ ಹೆಚ್ಚು ಆದ್ಯತೆ ನೀಡಲಾಯಿತು. ಚತುಷ್ಪತ ರಸ್ತೆ ನಿರ್ಮಾಣ ಮಾಡಿದ್ದು ದೇಶಾಭಿವೃದ್ಧಿಗೆ ಪೂರಕವಾಯಿತು’ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ನಾಯ್ಕ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಂಜ್ಯನಾಯ್ಕ, ನಿಟ್ಟೂರು ಸಣ್ಣಹಾಲಪ್ಪ, ರಾಘವೇಂದ್ರಶೆಟ್ಟಿ, ವೈದ್ಯಾಧಿಕಾರಿಗಳಾದ ಶಂಕರನಾಯ್ಕ, ಸಂಗೀತಾ, ತ್ರೀವೇಣಿ, ಮುಖಂಡರಾದ ಪುರಸಭೆ ಸದಸ್ಯ ಮೆಹಬೂಬ್‍ಸಾಬ್, ಮಲ್ಲೇಶ್, ಸಿಂಗ್ರಿಹಳ್ಳಿ ನಾಗರಾಜ, ಎನ್.ಮಂಜುನಾಥ, ಕರೇಗೌಡ, ಸತ್ತೂರು ಹಾಲೇಶ್, ಲೋಕೇಶ್, ಯು.ಪಿ.ನಾಗರಾಜ, ಸಂತೋಷ, ಪ್ರಾಣೇಶ್, ರವಿಕುಮಾರ, ಜಗದೀಶ್‍ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
