ದಾವಣಗೆರೆ:
ಬಿಹಾರದ ಬೇಗುಸರಾಯ್‍ನಿಂದ ಲೋಕಸಭೆಗೆ ಸ್ಪರ್ಧಿಸಿರುವ “ಕನ್ಹಯ್ಯಾ ಕುಮಾರ” ಚುನಾವಣಾ ಖರ್ಚಿಗೆ ಗುರುವಾರ ದಾವಣಗೆರೆಯ ಸಮೀಪದ ಆವರಗೆರೆಯಲ್ಲಿ ಅಖಿಲ ಭಾರತ ಯುವಜನ ಒಕ್ಕೂಟದಿಂದ (ಎ.ಐ.ವೈ.ಎಫ್) ದೇಣಿಗೆ ಸಂಗ್ರಹಿಸಲಾಯಿತು.
ಬಿಹಾರದಲ್ಲಿ “ಕನ್ಹಯ್ಯಾಕುಮಾರ” ಅವರ ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಇವರು ದೆಹಲಿಯ ಜೆ.ಎನ್.ವಿ. ವಿದ್ಯಾರ್ಥಿ ಸಂಘಟನೆ ನಾಯಕರಾಗಿದ್ದು, ರಾಷ್ಟ್ರಾದ್ಯಂತ ವಿದ್ಯಾರ್ಥಿ-ಯುವಜನ, ರೈತ-ಕಾರ್ಮಿಕರ, ಅಸಂಘಟಿತ ಕಾರ್ಮಿಕರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಜನರ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಕನ್ಹಯ್ಯ ಕುಮಾರ್ ಅವರ ಚುನಾವಣಾ ಖರ್ಚಿಗೆ ನೆರವು ನೀಡಬೇಕೆಂಬ ಉದ್ದೇಶದಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ ಎಂದು ಎ.ಐ.ವೈ.ಎಫ್. ಜಿಲ್ಲಾ ಆಧ್ಯಕ್ಷ ಆವರಗೆರೆ ವಾಸು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎ.ಐ.ವೈ.ಎಫ್ ತಾಲೂಕು ಅಧ್ಯಕ್ಷ ಎ. ಪ್ಪೇಶಿ, ಪ್ರಧಾನ ಕಾರ್ಯದರ್ಶಿ ಕೆರನಹಳ್ಳಿ ರಾಜು, ಸಂಘಟನಾ ಕಾರ್ಯದರ್ಶಿ ಸಿ.ಗುರುಮೂರ್ತಿ, ಮಂಜುನಾಥ ಹೆಚ್.ಎಂ., ಮಂಜುನಾಥ ಬಿ., ಹನುಮಂತಪ್ಪ ಪಿ., ಕೆ. ಬಾನಪ್ಪ, ರವಿ ಬಿ., ಎ. ಮಂಜು, ರವಿಗೋಶಾಲೆ, ಮಲ್ಲಿ, ರಾಜು, ಜಗದೀಶ, ರಮೇಶ್, ಶಿವುಕುಮಾರ, ದುಗ್ಗೇಶ್ ಮತ್ತಿತರರು ಹಾಜರಿದ್ದರು.