ರೋಟರಿ ಮತ್ತು ರೆಡ್‍ಕ್ರಾಸ್ ಒಂದೇ ನಾಣ್ಯದ ಎರಡು ಮುಖಗಳು : ಎಂ.ಎಸ್.ರಾಘವೇಂದ್ರ

ಹಿರಿಯೂರು :
             ರೋಟರಿ ಮತ್ತು ರೆಡ್‍ಕ್ರಾಸ್ ಸಂಸ್ಥೆ ಒಂದೇ ನಾಣ್ಯದ ಎರಡು ಮುಖಗಳು ಎಂಬಂತೆ ನಮ್ಮ ರೋಟರಿ, ರೆಡ್‍ಕ್ರಾಸ್ ಸಮಾಜ ಮುಖಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸೇವೆಗಳನ್ನು ಮಾಡುತ್ತಾ ಬಂದಿವೆ. ನಮ್ಮ ಜೊತೆಗೆ ಸದಾಕಾಲವು ದಾನಿಗಳು ಮುಂದೆ ಬಂದು ಸಹಾಯ ಹಸ್ತವನ್ನು ನೀಡಿರುವುದರಿಂದ ನಿಮ್ಮಗಳ ಆರೋಗ್ಯ ಸೇವಾ ಶಿಬಿರಗಳು ನಡೆಸಲು ಸಾಧ್ಯವಾಗಿದೆ. ಜನರಿಗೆ ಉತ್ತಮವಾದ ಸ್ವಚ್ಛ, ಸ್ವಾಸ್ಥ್ಯ ಆರೋಗ್ಯ ಸೇವೆಗಳು ಜನರಿಗೆ ತಲುಪಬೇಕೆನ್ನುವುದು ನಮ್ಮ ಸಂಸ್ಥೆಗಳ ಮುಖ್ಯ ಧ್ಯೇಯ ಎಂಬುದಾಗಿ ಎಂ.ಎಸ್.ರಾಘವೇಂದ್ರ ಹೇಳಿದರು.

            ನಗರದಲ್ಲಿ ರೋಟರಿ ಸಭಾಭವನದಲ್ಲಿ, ರೋಟರಿಕ್ಲಬ್ ಹಾಗೂ ರೆಡ್‍ಕ್ರಾಸ್‍ಸಂಸ್ಥೆ, ತಾಲ್ಲೂಕುಆರೋಗ್ಯಾಧಿಕಾರಿಗಳು ಮತ್ತು ಸಾರ್ವಜನಿಕಆಸ್ಪತ್ರೆ, ಜಿಲ್ಲಾಆರೋಗ್ಯ ಮತ್ತು ಕುಟುಂಬಕಲ್ಯಾಣಇಲಾಖೆ ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ, ಚಿತ್ರದುರ್ಗ ಡಾ.ಮಹಮ್ಮದ್ ರೆಹಾನ್‍ಸಯೀದ್ ದಿ ಹಾರ್ಟ್‍ಸೆಂಟರ್ ಮತ್ತು ಶ್ರೀನಿವಾಸ ಕಣ್ಣಿನಆಸ್ಪತ್ರೆ, ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಸಾರ್ವಜನಿಕರಿಗೆ ಉಚಿತ ಹೃದಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಹಾಗೂ ಉಚಿತ ನೇತ್ರ ತಪಾಸಣೆ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
             ಶ್ರೀಮತಿ ಶಶಿಕಲಾರವಿಶಂಕರ್ ಮಾತನಾಡಿ, ಪ್ರತಿಯೊಬ್ಬರು ತಮ್ಮ ಬದುಕುಗಳ ಜಂಜಾಟದಲ್ಲಿ ಆರೋಗ್ಯದ ಕಡೆ ಗಮನ ನೀಡುವುದಿಲ್ಲ. ಹೃದಯರೋಗ, ನೇತ್ರ ರೋಗಗಳು ಬಂದಾಗ ಕೂಡಲೇ ನಮ್ಮ ಸಂಸ್ಥೆಗಳ ಆರೋಗ್ಯ ಶಿಬಿರದಲ್ಲಿ ಬಂದಂತಹ ತಜ್ಞ ವೈದ್ಯರಲ್ಲಿ ತಪಾಸಣೆ ಅವಶ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆ ಪಡೆಯುವಂತೆ ಸಲಹೆ ಇತ್ತರು.
               ಈ ಕಾರ್ಯಕ್ರಮವನ್ನು ರೆಡ್‍ಕ್ರಾಸ್‍ಸಂಸ್ಥೆ ಉಪಾಧ್ಯಕ್ಷರಾದ ಹೆಚ್.ಎಸ್.ಸುಂದರ್‍ರಾಜ್ ಉದ್ಭಾಟಿಸಿದರು, ಈ ಶಿಬಿರವನ್ನು ಬೆಂಗಳೂರಿನ ವರ್ತಕರಾದ ದಿವಂಗತ ಹೆಚ್.ವಿ.ರಾಮಕೃಷ್ಣಶೆಟ್ಟಿ ಇವರ ಸ್ಮರಣಾರ್ಥ ಇವರು ಕುಟುಂಬ ವರ್ಗದವರು ಏರ್ಪಡಿಸಲಾಗಿದ್ದು ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀಮತಿ ಹೆಚ್.ಆರ್.ಸುಗುಣಕುಮಾರಿ ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದರು. ಅಲ್ಲದೆ ಸಾಮಾನ್ಯ ಜನರಿಗೆ ಈ ಶಿಬಿರವು ಅನುಕೂಲವಾಗಲಿ ಎಂದು 2 ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆ ರೂಪಿಸಿದೆ ಇದರ ಸದ್ಭಳಕೆಯನ್ನು ಮಾಡಿಕೊಳ್ಳುವಂತೆ ಕೋರಿದರು.
                ಈ ಕಾರ್ಯಕ್ರಮದಲ್ಲಿ ಎಂ.ಎನ್.ಸೌಭಾಗ್ಯವತಿದೇವರು, ಹೆಚ್.ವೆಂಕಟೇಶ್, ಕಲ್ಲೇಶ್, ಬಸವರಾಜ್, ಸವಿತಪೂಜಾರಿ, ಸ್ವಪ್ನಾಸತೀಶ್, ಕಿರಣ್, ಪ್ರದೀಪ್, ಹೃದಯ ರೋಗ ತಜ್ಞರು ಡಾ.ಹರೀಶ್, ಎಕೋ ಟೆಕ್ನೀಷಿಯನ್ ಜೋಸೆಫ್, ಇಂದಿರಾ, ನೇತ್ರ ತಪಾಸಕ ನಾರಾಯಣಸ್ವಾಮಿ, ರೋಟರಿಯ ಎಂ.ವಿ.ಹರ್ಷ, ಹೆಚ್.ಪಿ.ರವೀಂದ್ರನಾಥ್, ಎಸ್.ಜೋಗಪ್ಪ, ರೆಡ್‍ಕ್ರಾಸ್‍ನ ಬಿ.ಕೆ.ನಾಗಣ್ಣ, ಕೆ.ಎಸ್.ಮಹಾಬಲೇಶ್ವರಶೆಟ್ಟಿ, ಪಿ.ಆರ್.ಸತೀಶ್‍ಬಾಬು, ವೈ.ಎಸ್.ಉಮಾಶಂಕರ್, ತ್ರಿಯಂಬಕೇಶ್ವರ, ಪರಮೇಶ್ವರಭಟ್, ಇನ್ನರ್‍ವ್ಹೀಲ್ ಪದ್ಮಜಾ ಎಂ.ಶೆಟ್ಟಿ, ಸರ್ವಮಂಗಳಾ, ಬಸವರಾಜ್, ವೇದಾ ಕಾಲೇಜಿನ ಸ್ಕೌಟ್ಸ್ & ಗೈಡ್ಸ್‍ನ ವಿದ್ಯಾರ್ಥಿಗಳು ಶಿಬಿರಾರ್ಥಿಗಳು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link