ಹಗರಿಬೊಮ್ಮನಹಳ್ಳಿ:
ವಸತಿ ಹಂಚಿಕೆಯ ಫಲಾನುಭವಿಯಿಂದ ಲಂಚಪಡೆಯುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ತಾಲೂಕಿನ ಹಂಪಾಪಟ್ಟಣ ಗ್ರಾ.ಪಂ.ಪಿಡಿಒ ಎಸ್.ವೀರೇಶರ ಮೇಲೆ ಬುಧವಾರ ರಾತ್ರಿ ಭ್ರಷ್ಟಚಾರ ನಿಗ್ರಹ ದಳದವರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ತಾಲೂಕಿನ ನವ್ಯಾಸಪುರ ತಾಂಡದ ವಸತಿ ಫಲಾನುಭವಿಯಾದ ಶಿವಪ್ಪನಾಯ್ಕ್‍ನಿಂದ 4ಸಾವಿರ ರೂ.ಗಳನ್ನು ಲಂಚ ಕೇಳಿದನೆಂದು 4ಸಾವಿರ ರೂ.ಗಳನ್ನು ಪಡೆಯುತ್ತಿದ್ದ ವೇಳೆ ಎಸಿಬಿ ಡಿವೈಎಸ್ಪಿ ಅರುಣ್‍ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿತು. ನಂತರ ವಿಚಾರಣೆಗಾಗಿ ಪ್ರವಾಸಿ ಮಂದಿರಕ್ಕೆ ಕೈರೆತಂದರು. ನಂತರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಬಳಿಕ ಆರೋಪಿ ನ್ಯಾಯಾಂಗ ಬಂಧನಕ್ಕೊಳಗಾದರು.
ದಾಳಿವೇಳೆ ಎಸಿಬಿ ಇನ್‍ಸ್ಪಕ್ಟರ್‍ಗಳಾದ ಬಿ.ಮಂಜುನಾಥ, ಪ್ರಭುಲಿಂಗಯ್ಯ ಹಿರೇಮಠ ಇದ್ದರು. ಪಿಡಿಒ ವೀರೇಶ ಈ ಹಿಂದೆ ತಾಲೂಕಿನ ಮಾದೂರು ಹಾಗೂ ಹಲಗಾಪುರ ಗ್ರಾಮಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸಿದ್ದರು.
