ಬಳ್ಳಾರಿ
ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಲೋಕ ಸಭಾ ಉಪ ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಪ್ರಯುಕ್ತ ಅಬಕಾರಿ ಇಲಾಖೆಯ ವತಿಯಿಂದ ಸಂಚಾರಿ ದಳ (ಈಟಥಿiಟಿg Squಚಿಜ) ವನ್ನು ರಚಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಚುನಾವಣೆ ಸಮಯದಲ್ಲಿ ಅಕ್ರಮ ಮದ್ಯ ಸರಬರಾಜು, ಶೇಖರಣೆ, ಸಾಗಾಣಿಕೆ, ಮಾರಾಟ ಇತ್ಯಾದಿ ಅಬಕಾರಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಹಾಗೂ ಉಪ ವಿಭಾಗದ ವ್ಯಾಪ್ತಿಯಲ್ಲಿ ಈ ಸಂಚಾರಿ ದಳ ನಿಯೋಜಿಸಲಾಗಿದೆ.
ಜಿಲ್ಲಾ ಸಂಚಾರಿದಳದಲ್ಲಿ ಅಬಕಾರಿ ನಿರೀಕ್ಷಕ ಜಿ.ಹನುಮಂತಪ್ಪ (ದೂ.ಸಂ.9449597154), ಅಬಕಾರಿ ಉಪ ನಿರೀಕ್ಷಕರಾದ ಕೆ.ಟಿ.ಶ್ರೀನಿವಾಸ (ದೂ.ಸಂ.9611990950), ಅಬಕಾರಿ ರಕ್ಷಕರಾದ ಹೆಚ್.ಸುರೇಶ್ (ದೂ.ಸಂ.8892481585). ಉಪ ವಿಭಾಗರಿ ಸಂಚಾರಿದಳದಲ್ಲಿ ಅಬಕಾರಿ ನಿರೀಕ್ಷಕ ಆರ್.ಒ.ಸುರೇಶ್ (ದೂ.ಸಂ.9449597156), ಅಬಕಾರಿ ರಕ್ಷಕ ಜಿ.ಶ್ರೀಧರ (ದೂ.ಸಂ.7259333370).
ಹೊಸಪೇಟೆ ಉಪ ವಿಭಾಗ ಸಂಚಾರಿ ದಳದಲ್ಲಿ ಅಬಕಾರಿ ನಿರೀಕ್ಷಕ ಸಂಪತ್ ಕುಮಾರ್.ಎಂ.ಪಿ (ದೂ.ಸಂ.9449597158), ಅಬಕಾರಿ ರಕ್ಷಕ ಪಿ.ಸುಧಾಕರ (ದೂ.ಸಂ.9449191828) ಅವರು ಕಾರ್ಯನಿರ್ವಹಿಸಲಿದ್ದಾರೆ.
ಸಂಚಾರಿ ದಳದ ಅಧಿಕಾರಿ ಹಾಗೂ ಸಿಬ್ಬಂದಿಯವರು ಆಯಾ ವ್ಯಾಪ್ತಿಯಲ್ಲಿ ಸಂಚರಿಸಿ ಯಾವುದೇ ಅಬಕಾರಿ ಅಕ್ರಮಗಳು ಜರುಗದಂತೆ ನಿಗಾವಹಿಸಿ, ತಡೆಗಟ್ಟಲು ರಸ್ತೆ ಗಸ್ತು, ಅಬಕಾರಿ ದಾಳಿಗಳನ್ನು ಕೈಗೊಳ್ಳಲಾಗುವುದು ಅಲ್ಲದೇ ಜಿಲ್ಲೆಯಲ್ಲಿ ಸ್ಥಾಪಿಸಲಾದ ಎಲ್ಲಾ ಚೆಕ್ ಪೋಸ್ಟ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ