ವಕೀಲ ಸತೀಶ್ ಬರ್ಬರ ಹತ್ಯೆ ಖಂಡನೆ : ವಕೀಲರ ಸಂಘದಿಂದ ಮನವಿ

ಹಗರಿಬೊಮ್ಮನಹಳ್ಳಿ:

        ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ವಕೀಲರ ಸಂಘದ ಸದಸ್ಯರಾದ ಸತೀಶ್‍ರನ್ನು ದುಷ್ಕರ್ಮಿಗಳಿಂದ ಬರ್ಬರ ಹತ್ಯೆಯಾದುದ್ದನ್ನು ಖಂಡಿಸಿದ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಕಾರ್ಯಕಲಾಪಗಳಿಂದ ದೂರ ಉಳಿದು ಇಲ್ಲಿಯ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಬುಧವಾರ ಮನವಿ ಸಲ್ಲಿಸಿದರು.

       ಮನವಿ ಸಲ್ಲಿಸಿದ ಬಳಿಕ ಪದಾಧಿಕಾರಿಗಳ ಪೈಕಿ ಕಾರ್ಯದರ್ಶಿ ಟಿ.ಜಿ.ಎಂ.ಕೊಟ್ರೇಶ್ ಮಾತನಾಡಿ, ಸತೀಶ್ ಅವರನ್ನು ಹತ್ಯೆಗೈದ ಆರೋಪಿಗಳನ್ನು ಕೂಡಲೆ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ರಾಜ್ಯದೆಲ್ಲೆಡೆ ವಕೀಲರು ಕರ್ತವ್ಯ ಕಕ್ಷಿದಾರರ ಪರವಾಗಿ ವಕೀಲತ್ತು ಮಾಡುವ ಸಂದರ್ಭದಲ್ಲಿ ಅನೇಕ ಹತ್ಯೆಯಂತ ಪ್ರಕರಣಗಳು ಜರುಗುತ್ತವೆ.

          ಆದರೆ, ವಕೀಲರಿಗೆ ಯಾವುದೇ ರಕ್ಷಣೆ ಇಲ್ಲದೆ ಜೀವ ರಕ್ಷಣೆಯ ಭಯದಲ್ಲಿಯೇ ಜೀವನ ಅಥವಾ ವಕಲತ್ತು ಮಾಡಬೆಕಾದಂತ ಪರಿಸ್ಥಿತಿ ಬಂದೊದಗಿದೆ. ಹತ್ಯೆಗೈಯುತ್ತಿರುವ ದುಷ್ಕರ್ಮಿಗಳನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಕೈಗೊಂಡರೆ ಮುಂದೆ ಆಗುವಂತ ಅನಾಹುತಗಳು ತಪ್ಪುತ್ತವೆ ಎಂದು ತಿಳಿಸಿದರು.

          ಅಲ್ಲದೆ, ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಅಮಾನುಷವಾಗಿ ದೌರ್ಜನ್ಯ, ಜೀವಬೆದರಿಕೆ ಹಾಗೂ ಕೆಲೆಗಳು ನಡೆಯುತ್ತಲೇ ಇವೆ. ಇದರಿಂದ ವಕೀಲರು ವೃತ್ತಿಯಲ್ಲಿ ಮುಂದುವರೆಯುವುದು ದುಸ್ತರವಾಗುತ್ತಿದೆ. ಆದ್ದರಿಂದ ವಕೀಲರಿಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿಕೊಂಡರು.

        ತಹಸೀಲ್ದಾರ್ ಸಂತೋಷ್ ಕುಮಾರ್‍ಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಸ್.ಲಿಂಗನಗೌಡ, ಸಿ.ಹುಲುಗಪ್ಪ, ಟಿ.ಶಿವಪ್ರಕಾಶ್, ಅಶೋಕ ಕನಿಕೇರಿ, ಟಿ.ಪ್ರಹ್ಲಾದ್, ಆಂಜನೇಯ, ಚಂದ್ರಶೇಖರ್, ಶಿವಕುಮಾರ್ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link