ಬಳ್ಳಾರಿ:
ದೇಶ ಕಂಡ ಅಪ್ರತಿಮ ನಾಯಕ, ಅಜಾತ ಶತೃ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಹಂಪಿಯ ವಶಿಷ್ಠ ಆಶ್ರಮದಲ್ಲಿ ಬಿಜೆಪಿಯ ನಾಯಕರು ವಿಸರ್ಜಿಸುವ ಮೂಲಕ ಅಗಲಿದ ನಾಯಕನಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಮರ್ಪಿಸಿದರು.
ಬಿಜೆಪಿಯ ನಾಯಕರಾದ ಕೆಎಸ್ ಈಶ್ವರಪ್ಪ, ಬಿ.ಶ್ರೀರಾಮುಲು ಇವರ ಸಮ್ಮುಖದಲ್ಲಿ ಇಂದು ಸಂಜೆ ಭಾರತರತ್ನ, ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇವರ ಚಿತಾಭಸ್ಮದ ಅಪರ ಕರ್ಮಗಳನ್ನು ನೆರವೇರಿಸುವ ಮೂಲಕ ವಿಪ್ರರು ವಾಜಪೇಯಿ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು. ವಸಿಷ್ಠ ಆಶ್ರಮ ಅಪರಕರ್ಮ ಸೇವಾ ಟ್ರಸ್ಟ್ ವತಿಯಿಂದ ನಡೆದ ಈ ಚಿತಾಭಸ್ಮ ಅಪರ ಕರ್ಮ ಆಚರಣೆಯನ್ನು ಪುರೋಹಿತರಾದ ಪ್ರಕಾಶ್ ಜೋಷಿ, ಮೋಹನ್ ಜೋಷಿ ನೇತೃತ್ವದಲ್ಲಿ ಜರುಗಿತು. ಅಗಲಿದ ನಾಯಕನ ಚಿತಾಭಸ್ಮಕ್ಕೆ ಉದಕ, ಕ್ಷೀರ, ದಧಿ, ಮತ್ತು ಘೃತದ ಧಾರೆಯೆರೆದು ಬಳಿಕ ತುಂಗಭದ್ರಾ ನದಿಯಲ್ಲಿ ವಿಜರ್ಸಿಲಾಯಿತು.
ಕೊಪ್ಪಳ ಸಂಸದ ಕರಡಿ ಸಂಗಣ್ಣ, ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ಪರಣ್ಣ ಮುನವಳ್ಳಿ, ಮಾಜಿ ಶಾಸಕರಾದ ನೇಮಿರಾಜ ನಾಯ್ಕ, ಚಂದ್ರಾ ನಾಯ್ಕ, ಮೃತ್ಯುಂಜಯ ಜಿನಗಾ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ, ಮುಖಂಡರಾದ ಡಿ.ರಾಘವೇಂದ್ರ, ಮುರಹರಿಗೌಡ, ಶ್ರೀನಿವಾಸ್ ಮೋತ್ಕರ್, ವೀರಶೇಖರರೆಡ್ಡಿ, ಜಿ.ರಾಮಚಂದ್ರಯ್ಯ, ಶ್ರೀನಿವಾಸ್ ಪಾಟೀಲ್, ಮುತ್ತಿಗಿ, ಸುಮಾ ರೆಡ್ಡಿ, ಸುಗುಣ, ಹೊಸಪೇಟೆ ಬಿಜೆಪಿ ಮುಖಂಡರಾದ ಅನಂತ್ ಪದ್ಮನಾಭ, ಅನಿಲ್ ಜೋಷಿ, ಚಂದ್ರಕಾಂತ್ ಕಾಮತ್, ಶಂಕರ್ ಮೇಟಿ, ಹೆಚ್.ಆರ್.ಸಂಜಯ್, ಬಸವರಾಜ ನಾಲತವಾಡ ಸುಮಾರೆಡ್ಡಿ, ಸುಗುಣ ಸೇರಿದಂತೆ ಬಿಜೆಪಿಯ ಅನೇಕ ಬಿಜೆಪಿ ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು.