ವಾಣಿವಿಲಾಸ ವಿದ್ಯಾಸಂಸ್ಥೆಯಲ್ಲಿ : ಡಾ||ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನಾಚರಣೆ

ಹಿರಿಯೂರು :
              ನಮ್ಮ ದೇಶದ ಸರ್ವಾಂಗೀಣ ಅಭಿವೃದ್ದಿಗೆ ಶಿಕ್ಷಕರ ಪಾತ್ರ ಬಹಳ ಮಹತ್ವವಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ನಡೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಭಾವಿ ಭವಿಷ್ಯದ ಪ್ರಜೆಗಳನ್ನು ತಯಾರು ಮಾಡುವ ಜವಾಬ್ದಾರಿ ಇಂದಿನ ಶಿಕ್ಷಕರ ಮೇಲಿದೆ ಎಂಬುದಾಗಿ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರುಹನುಮಂತರಾಯಪ್ಪ ಹೇಳಿದರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ||ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
              ಇದೇ ಸಂದರ್ಭದಲ್ಲಿ ಶಿಕ್ಷಣ ದಿನಾಚರಣೆ ಪ್ರಯುಕ್ತ ಹಿರಿಯ ಶಿಕ್ಷಕ-ಶಿಕ್ಷಕಿಯರುಗಳಾದ ಶ್ರೀಮತಿ ಸೌಮ್ಯ ಹಾಗೂ ಶ್ರೀಮತಿ ಶಾಂತ, ರಜೀಯಬೇಗಂ, ಉಮೇಶ್, ಇವರುಗಳನ್ನು ಶಾಲುಹೊದಿಸಿ ಗೌರವಿಸಿ ನೆನಪಿನಕಾಣಿನೀಡಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ನಿದೇರ್ಶಕರಾದ ಶ್ರೀಮತಿ ಆರ್.ಪ್ರೇಮಲೀಲಾ, ತಾಲ್ಲೂಕು ಪತ್ರ್ರಕತರ ಸಂಘದ ಖಜಾಂಚಿ ಪಿ.ಆರ್.ಸತೀಶ್‍ಬಾಬು, ಹಾಗೂ ವಿದ್ಯಾಸಂಸ್ಥೆ ಮುಖ್ಯಶಿಕ್ಷಕಿಯರುಗಳಾದ ಶ್ರೀಮತಿ ಹೇಮಲತ, ಶ್ರೀಮತಿ ಶಾಂತ ಹಾಗೂ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಮೊಹಸೀನ, ಹಾಗೂ ರಜೀಯಬೇಗಂ, ಉಮೇಶ್, ಸಲ್ಮಾ, ವಸಂತ, ಮೊಬೀನಾ, ಸುಧಾ, ಸ್ಮಿತಾ, ಹಿಂದೂಜಾ, ರಂಜಿತಾ, ನಂದಿನಿ, ಸರಿತಾ, ಮಂಜುಳಾ, ಭಾಗ್ಯ, ಕಾಂತರಾಜ್, ಪ್ರಭಾಕರ್, ಸಾಕ್ಮಮ್ಮ, ಆಯೆಷಾ, ನದಿಯಾ, ಪರಮೇಶ್ವರಪ್ಪ, ಕೃಷ್ಣಮೂರ್ತಿ, ರಂಗನಾಯ್ಕ, ಸೇರಿದಂತೆ ಶಿಕ್ಷಕ-ಶಿಕ್ಷಕಿಯವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link