ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ

ಚಿತ್ರದುರ್ಗ:

      ನಗರದ ಜೆ.ಸಿ.ಆರ್.ಬಡಾವಣೆಯಲ್ಲಿರುವ ಎಸ್.ಜೆ.ಕೋಚಿಂಗ್ ಅಕಾಡೆಮಿಯಿಂದ ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಪದವಿ ನಂತರ ಮುಂದೇನು ಎಂಬ ವಿಷಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಮಾರ್ಗದರ್ಶನ ಕಾರ್ಯಾಗಾರವನ್ನು ಪೊಲೀಸ್ ಸಮುದಾಯ ಭವನದ ಆವರಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

      ಎಸ್.ಜೆ.ಕೋಚಿಂಗ್ ಅಕಾಡೆಮಿ ನಿರ್ದೇಶಕ ಹಾಗೂ ನಿವೃತ್ತ ಡಿ.ವೈ.ಎಸ್ಪಿ ಸೈಯದ್ ಇಸಾಕ್ ಮಾಹಿತಿ ಮಾರ್ಗದರ್ಶನ ಕಾರ್ಯಾಗಾರ ಉದ್ದೇಶಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಪದವಿ ನಂತರ ಅನೇಕ ಕೋರ್ಸ್‍ಗಳಿವೆ. ಜೀವನಕ್ಕೆ ಸಾವಿರಾರು ದಾರಿಗಳಿವೆ ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳಬೇಕು. ದ್ವಿತೀಯ ಪಿ.ಯು.ಸಿ.ನಂತರ ಎಲ್ಲಾ ಪೋಷಕರು ತಮ್ಮ ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್‍ಗಳೇ ಆಗಬೇಕೆಂಬ ಪಟ್ಟು ಹಿಡಿಯುವುದು ಸರಿಯಲ್ಲ. ಸಾಧನೆಗೆ ವಿದ್ಯೆ ಅಂಕ ಗಳಿಕೆಯೇ ಮಾನದಂಡವಾಗಬಾರದು ಎಂದು ಹೇಳಿದರು.

      ಪದವಿಯ ಜೊತೆ ಸಾಮಾನ್ಯ ಜ್ಞಾನ ಹಾಗೂ ವ್ಯವಹಾರಿಕ ಜ್ಞಾನವನ್ನು ಮಕ್ಕಳಿಗೆ ವಿದ್ಯಾರ್ಥಿ ದೆಸೆಯಿಂದಲೇ ಕಲಿಸಬೇಕು. ಇದರಿಂದ ಬದುಕಿಗೆ ಬೇಕಾದ ಅನುಭವ ಸಿಗತ್ತದೆ. ಮಕ್ಕಳಿಗೆ ಯಾವ ವಿಷಯದಲ್ಲಿ ಆಸಕ್ತಿಯಿದೆ ಎನ್ನುವುದನ್ನು ಮೊದಲು ಪೋಷಕರು ತಿಳಿದುಕೊಂಡು ಉತ್ತೇಜನ ಕೊಡಬೇಕು. ಬಲವಂತವಾಗಿ ಇಂತಹ ವಿಷಯವನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದು ಒತ್ತಡ ಹೇರಬಾರದು. ಶೇ.ನೂರಕ್ಕೆ ನೂರು ಅಂಕಗಳನ್ನು ತೆಗೆದವರಷ್ಟೆ ಪ್ರತಿಭಾವಂತರಲ್ಲ. ಶೇ.35 ರಷ್ಟು ಅಂಕಗಳನ್ನು ಪಡೆದ ಮಕ್ಕಳಲ್ಲಿಯೂ ಇರುವ ಅನೇಕ ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗಬೇಕು ಎಂದರು.

       ಇದು ಕಂಪ್ಯೂಟರ್ ಯುಗವಾಗಿರುವುದರಿಂದ ನೂರಾರು ಬಗೆಯ ಕೋರ್ಸ್‍ಗಳಿವೆ. ಎಸ್.ಎಸ್.ಎಲ್.ಸಿ.ಹಾಗೂ ಪಿ.ಯು.ಸಿ. ಪದವಿಯ ನಂತರ ನಿಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಅದನ್ನು ಆಯ್ಕೆ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ. ಒಮ್ಮೆ ಫೇಲಾದರೆ ಆತ್ಮಸ್ಥೈರ್ಯ ಕಳೆದುಕೊಳ್ಳುವುದು ಬೇಡ. ಮರಳಿ ಪ್ರಯತ್ನವ ಮಾಡಿ ಒಂದಲ್ಲ ಒಂದು ಸಾರಿ ಯಶಸ್ವಿಯಾಗುತ್ತೀರ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಎಸ್.ಜೆ.ಕೋಚಿಂಗ್ ಅಕಾಡೆಮಿಯ ನಿರ್ದೇಶಕ ಸೈಯದ್ ಈ ಸಂದರ್ಭದಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap