ರಟ್ಟೀಹಳ್ಳಿ
ಇಲ್ಲಿನ ಜನತಾ ಪ್ಲಾಟ್‍ನಲ್ಲಿನ ಚಕ್ಕರಘಟ್ಟಿ ಕೆರೆ ಅಭಿವೃದ್ದಿ ನೆಪದಲ್ಲಿ ಕಾಮಗಾರಿಕೆ ಪ್ರಾರಂಭಿಸಿ ತಾಂತ್ರಿಕ ದೋಷ ನೆಪಯೋಡ್ಡಿ ಕಾಮಗಾರಿ ಅರ್ದಕ್ಕೆ ನಿಲ್ಲಿಸಿದ್ದರಿಂದ ಕೇರೆಯಲ್ಲಿ ಹನಿ ನೀರು ಇಲ್ಲದೆ ದನ,ಕರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಕಾರಣ ಸಂಭಂದಪಟ್ಟ ಅಧಿಕಾರಿಗಳು ಇತ್ತಕಡೆ ಗಮನಹರಿಸಬೇಕು ಎಂದು ರೈತರು ಆಗ್ರಹಿಸಿದರು.
ನಂತರ ಮಾತನಾಡಿದ ಪ್ರಭು ಮಳಗೊಂಡರ್ ಚಕ್ರಘಟ್ಟಿ ಕೇರೆ ಅಭಿವೃದ್ದಿಪಡಿಸುತ್ತಿರುವುದು ಸ್ವಾಗತಾರ್ಹ ಆದರೆ ತಾಂತ್ರಿಕ ದೋಷದ ನೆಪಯೊಡ್ಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದರಿಂದ ಧನ, ಕರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಈ ಕೇರೆಯಿಂದ ನೂರಾರು ರೈತರಿಗೆ ಹಾಗೂ ಧನು ಕರುಗಳಿಗೆ ಸಹಾಯವಾಗುತ್ತಿದ್ದು ಆದರೆ ಇಂದು ಕೇರೆಯಲ್ಲಿ ಹನಿ ನೀರಿಲ್ಲದ ಪರಿಣಾಮ ರೈತರಲ್ಲಿ ಆತಂಕವನ್ನುಂಟು ಮಾಡಿದೆ, ಅವಧಿ ಮುನ್ನವೆ ಮಳೆ ಇಲ್ಲದೆ ಬೆಳೆದ ಬೆಳೆಗಳನ್ನು ಉಳಿಸಿಕೋಳ್ಳುವುದೆ ದುಸ್ಥರವಾಗಿದೆ ಹಾಗೂ ಮೂಕ ಪ್ರಾಣಿಗಳು ಇದರ ಹೋರತಾಗಿಲ್ಲ ಆದ್ದರಿಂದ ಯಾವುದೇ ತಾಂತ್ರಿಕ ದೋಷಗಳಿದ್ದರು 3-4 ದಿನಗಳ ಒಳಗಾಗಿ ಸರಿ ಪಡಿಸಿ ನೀರು ಹರಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ರುದ್ರಪ್ಪ ಬೇನ್ನೂರ ಮಾತನಾಡಿ ಬೆಸಿಗೆ ಅವಧಿಯಲ್ಲು ಸದಾಕಾಲ ನೀರು ತುಂಬಿತುಳಕುತ್ತಿತ್ತು ಆದರೆ ಇಂದು ಕೆರೆ ಅಭಿವೃದ್ದಿ ನೆಪದಲ್ಲಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರಿಂದ ಹನಿ ನೀರು ಇಲ್ಲದಂತಾಗಿದೆ ಕೆವಲ 15-20 ದಿನಗಳಲ್ಲಿ ಚಾನಲ್ ನೀರು ಕಡಿಮೆಯಾಗುವ ಸಂಭವವಿದ್ದು ಕಾರಣ ಆದಷ್ಟು ಬೆಗ ಕಾಮಗಾರಿಯನ್ನು ಮುಗಿಸಿ ನೀರು ಬಿಡಲು ಮುಂದಾಗಬೇಕೆಂದು ಆಗ್ರಹಿಸಿದರು.
ಕೋಟ್— ವಾರ್ಡ ಸದಸ್ಯ ಶಂಕರಗೌಡ ಚನ್ನಗೌಡ ಮಾತನಾಡಿ ಜಿಲ್ಲಾ ಪಂಚಾಯ್ತ ನಿರ್ಲಕ್ಷದಿಂದಾಗಿ ರಟ್ಟೀಹಳ್ಳಿಗೆ ಕಾಯಂ ಪಿ.ಡಿ.ಓ ಇಲ್ಲದ ಕಾರಣ ಯಾವುದೇ ಅಭಿವೃದ್ದಿ ಕಾರ್ಯಗಳು ಆಗುತ್ತಿಲ್ಲ ಸಾರ್ವಜನಿಕರು ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಶಾಪ ಹಾಕುತ್ತಿದ್ದಾರೆ ಕಾರಣ ಜಿಲ್ಲಾಡಳಿತ ಆದಷ್ಟು ಬೇಗ ಪಿ.ಡಿ.ಓಅವರನ್ನು ನೆಮಿಸಬೇಕು ಎಂದು ಮನವಿ ಮಾಡಿದರು. ಇಲ್ಲಿನ ಜನತಾ ಪ್ಲಾಟ್‍ನ ಕೆರೆ ಅಭಿವೃದ್ದಿಗಾಗಿ 14ನೆ ಹಣಕಾಸು ಯೋಜನೆ ಅಡಿಯಲ್ಲಿ ಕೆರೆ ಅಭಿವೃದ್ದಿಪಡಿಸುತ್ತಿದ್ದು 1ನೇ ಹಂತದ ಕಾಮಗಾರಿ ಪೂರ್ಣ ಗೊಂಡಿದ್ದು 2ನೇ ಹಂತದ ಕಾಮಗಾರಿ ಆರಂಭಿಸಲು ಪಿ.ಡಿ.ಓ ಇಲ್ಲದ ಕಾರಣ ಜಿ.ಪಿ.ಎಸ್ ಹಾಗೂ ಸ್ಯಾಟ್‍ಲೈಟ್ ಫೋಟೊ ತೆಗೆಯದೆ ಕಾಮಗಾರಿಯನ್ನು ಆರಂಭಿಸಲು ಆಗುವುದಿಲ್ಲ ಕಾರಣ 2ದಿನಗಳಲ್ಲಿ ಪಿ.ಡಿ.ಒ ಅವರನ್ನು ಕರೆಯಿಸಿ ತಾಂತ್ರಿಕದೊಷ ಸರಿಪಡಿಸಿ ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡಿ ಕೆರೆಗೆ ನೀರು ಹರಿಸಲಾಗುವದು ಎಂದರು.
ಹನುಮಂತಗೌಡ ಬೆನ್ನೂರು,ಸೋಮಶೇಖರ ಮಳಗೊಂಡರ, ಗಣೇಶ ತಿಪ್ಪಕ್ಕನವರ, ವಿಶ್ವನಾಥ ಬೇನ್ನೂರು, ರಾಜು ಸಿಂಧ್ಯೆ, ಕುಬೇರಪ್ಪ ಮುಂತಾದವರು ಇದ್ದರು.