ಹಾವೇರಿ :
ನಗರಸಭೆ ಚುನಾವಣೆಯ ವಾರ್ಡ ನಂ. 18 ರಲ್ಲಿ ಅ ವರ್ಗ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅನ್ವರಸಾಬ ಕಡೇಮನಿ ತಮ್ಮ ವಾರ್ಡಿನಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಮತಯಾಚನೆಯಲ್ಲಿ ಅಭ್ಯರ್ಥಿ ಅನ್ವರಸಾಬ ಕಡೇಮನಿ ಮಾತನಾಡಿ 18 ನೇ ವಾರ್ಡಿನಲ್ಲಿ ಹೆಚ್ಚು ಕೂಲಿ ಕಾರ್ಮಿಕರು ಮತ್ತು ಸಣ್ಣ ಪಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುವವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ವಾರ್ಡಿನಲ್ಲಿ ವಸತಿ ಸಮಸ್ಯೆಯು ಇದೆ. ಗುಣಮಟ್ಟದ ಇಲ್ಲದ ರಸ್ತೆಗಳು, ಒಳಚರಂಡಿ ವ್ಯವಸ್ಥೆ ಕುಡಿಯುವ ನೀರಿನ ಸಮಸ್ಯೆ ಆಗರವಾಗಿದೆ. ಈ ಸಮಸ್ಯೆಗಳಿಗೆ ಕೊಡಲೇ ಸ್ಪಂದಿಸುವ ಕಾರ್ಯ ಮಾಡಬೇಕಾಗಿದೆ. ಮೂಲಭೂತ ಸೌಕರ್ಯಗಳಿಗೆ ವಾರ್ಡಿನ ಸರ್ವಾಂಗೀಣ ಅಭಿವೃದ್ದಿಗಾಗಿ ತಮ್ಮನ್ನು ಬೆಂಬಲಿಸುವಂತೆ ಮತಯಾಚನೆ ಸಂದರ್ಭದಲ್ಲಿ ಮನವಿ ಮಾಡಿದರು.
ಈ ಚುನಾವಣೆಯಲ್ಲಿ ತಮಗೆ ಆಯ್ಕೆ ಮಾಡುವಂತೆ ಅನ್ವರಸಾಬ ಕಡೇಮನಿ ಮನವಿ ಮಾಡಿದರು. ನನ್ನನ್ನು ಆಯ್ಕೆ ಮಾಡಿದರೆ ವಾರ್ಡಿನ ಸರ್ವಾಂಗಿಣ ಅಭಿವೃದ್ಧಿಗಾಗಿ ದಿನ 24 ಘಂಟೆಗಳ ಕಾಲ ತಮ್ಮ ಸೇವೆ ಮಾಡಲು ಮುಂದಾಗುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸುನೀಲ ದಂಡೆಮ್ಮನವರು,ಶೇಕಪ್ಪ ಮಾಳಗಿ.ಗುರುರಾಜ ಓಬಣ್ಣನವರ.ಮಾಲತೇಶ ಡಿ.ಹಜರತಲಿ ಶೇಖ್.ಗುಲಾಬಸಾಬ ಸೌದಾಗಾರ.ಲತಿಬಸಾಬ. ಅಬ್ದಲ್ ಸತ್ತರ ಅತ್ತಿಕಾಳ. ಆಯುಸಾಬ ಬಸವನಕೊಪ್ಪ. ಮುಬಾರಕ ಜಮಾದರ.ಸದ್ದಾಮಾ ಮೇಸ್ತ್ರಿ ಬಸವರಾಜ ಹರಪನಹಳ್ಳಿ ಹಾಗೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ಭಾಗವಹಿಸಿದರು.
