ವಾಲ್ಮೀಕಿ ಸಮಾಜ ಕೈ ಬಿಟ್ಟರು ಸಮಾಜವನ್ನು ನಾನು ಕೈ ಬಿಡಲಾರೆ:ಆನಂದಸಿಂಗ್

ಹೊಸಪೇಟೆ:

ವಾಲ್ಮೀಕಿ ಸಮಾಜ ಬಾಂಧವರ ಆರ್ಶಿವಾದದ ಫಲವಾಗಿ ರಾಜಕೀಯ ಪ್ರವೇಶ ಮಾಡಿದ ನಾನು ವಾಲ್ಮೀಕಿ ಸಮಾಜ ನನ್ನನ್ನು ಕೈ ಬಿಟ್ಟರು, ನಾನು ಎಂದಿಗೂ ಸಮಾಜವನ್ನು ಕೈ ಬಿಡದೇ ಋಣಿಯಾಗಿರುತ್ತೇನೆ ಎಂದು ಶಾಸಕ ಆನಂದಸಿಂಗ್ ಭಾವುಕರಾಗಿ ನುಡಿದರು.
ಸ್ಥಳೀಯ ಸಹಕಾರಿ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಾಜ ಸೇವೆ ಸಲ್ಲಿಸಲು ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕ ಅವಕಾಶವನ್ನು ಬಳಿಕೆ ಮಾಡಿಕೊಂಡು ಸಮಾಜ ಸೇವೆ ಸಲ್ಲಿಸಬೇಕು. ವಾಲ್ಮೀಕಿ ಸಮಾಜದಿಂದಲೇ ರಾಜಕೀಯವಾಗಿ ಬೆಳೆದಿದ್ದೇನೆ ಎಂದರು.

ಮೂರು ಬಾರಿ ಕ್ಷೇತ್ರದ ಮತದಾರರು ನನಗೆ ಆಶೀರ್ವಾದ ಮಾಡಿ ಗೆಲ್ಲಿಸಿ. ನನಗೂ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನಾಗಬೇಕು ಎನ್ನುವ ಛಲ ಇತ್ತು. ಕ್ಷೇತ್ರದ ಜನರು ನನ್ನನ್ನು ಮೂರು ಬಾರಿ ಶಾಸಕನಾಗಿ ಆಯ್ಕೆ ಮಾಡಿದರೆ. ಮತ್ತೊಂದು ಬಾರಿ ಶಾಸಕನಾಗಬೇಕೆಂಬ ಇಚ್ಚೆಯಿಲ್ಲ. ರಾಜಕಾರಣದಲ್ಲಿ ಸಕ್ರಿಯವಾಗಿ ಇರುತ್ತೇನೆ. ಆದರೆ ಶಾಸಕನಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ಮುಂದಿನ ದಿನಗಳಲ್ಲಿ ಸಾಕಷ್ಟು ಅನುದಾನವನ್ನು ತರುವ ಮೂಲಕ ಮತ್ತಷ್ಟು ಕ್ಷೇತ್ರದ ಅಭಿವೃದ್ಧಿಯನ್ನು ಕೈಕೊಳ್ಳುವ ಭರವಸೆ ನೀಡಿದ ಅವರು, ಗಣಿ ಬಾಧಿತ ಯೋಜನೆ ನಿಧಿಯಿಂದ 350 ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಜಾರಿ ಮಾಡಲಾಗುವುದು. ಇದರಿಂದಾಗಿ ರಾಯರಕೆರೆ, ಕಲ್ಲಹಳ್ಳಿ, ರಾಜಾಪುರ ಗ್ರಾಮಗಳ ವ್ಯಾಪ್ತಿಯ 25 ಸಾವಿರ ಎಕರೆ ಪ್ರದೇಶ ನೀರಾವರಿ ಸೌಕರ್ಯಕ್ಕೆ ಒಳ ಪಡಲಿದ್ದು, ರೈತರ ಭೂಮಿಗಳಿಗೆ ಸಮರ್ಪಕ ನೀರು ಲಭಿಸಲಿದೆ ಎಂದು ಹೇಳಿದರು.

ಕಂಪ್ಲಿ ಶಾಸಕ ಜೆ.ಎನ್.ಗಣೇಶ,ನಗರಸಭೆ ಅಧ್ಯಕ್ಷ ಗುಜ್ಜಲ ನಿಂಗಪ್ಪ, ಮಾಜಿ ಶಾಸಕ ಗುಜ್ಜಲ್ ಜಯಲಕ್ಷ್ಮೀ, ರತನ್ ಸಿಂಗ್, ವಾಲ್ಮೀಕಿ ಸಮಾಜದ ಅಧ್ಯಕ್ಷ ಗುಜ್ಜಲ್ ಶಿವರಾಮಪ್ಪ, ಮುಖಂಡರಾದ ಜಂಬಾನಹಳ್ಳಿ ವೆಂಕೋಬಣ್ಣ,   ಜಿ. ಕೆ. ಹನುಮಂತಪ್ಪ, ಗೋಸಲ ಭರಮಪ್ಪ, ಬೆಳಗೋಡು ರುದ್ರಪ್ಪ, ಕವಿತಾ ಈಶ್ವರ್‍ಸಿಂಗ್, ಬಿ. ಎಸ್. ಜಂಬಯ್ಯ ನಾಯಕ, ಕಿಚಿಡಿ ಶ್ರೀನಿವಾಸ, ಕಟಗಿ ಜಂಬಯ್ಯ ನಾಯಕ, ವಿಜಯಕುಮಾರ್, ಖಾದರ್, ಕೆ. ಬಡಾವಲಿ, ಶ್ರೀಧರ್ ನಾಯ್ಡು, ರಾಮಕೃಷ್ಣ, ಬಸವರಾಜ, ಅಂಜಿನಪ್ಪ, ಚಂದ್ರಕಾಂತ್ ಕಾಮತ್, ಗೋವಿಂದ್, ರೋಫ್, ಡಿ. ಎಂ. ಶಶಿಧರ್‍ಸ್ವಾಮಿ ಇತರರಿದ್ದರು.

Recent Articles

spot_img

Related Stories

Share via
Copy link