ಹರಪನಹಳ್ಳಿ:

ಪಟ್ಟಣದ ವಾಲ್ಮೀಕಿ ನಗರದಲ್ಲಿ ಹಾಲಸ್ವಾಮಿ ಜಾತ್ರೆಯ ಅಂಗವಾಗಿ ಮುಳ್ಳುಗದ್ದಿಗೆ ಉತ್ಸವ ಭಾನುವಾರ À ಮದ್ಯರಾತ್ರಿ ಅಪಾರ ಭಕ್ತರ ಮದ್ಯೆ ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು.
ಹಾಲಸ್ವಾಮಿ ಮಠದ ತೇಜಿ(ಮಠದ ಕುದುರೆ) ದಲಿತ ಕೇರಿಯ ಕರೆ ಬಾನಿಗೆ ಹೋಗಿ ಪೂಜೆ ಸಲ್ಲಿಸಿ ಬಂದ ನಂತರ ಹಸಿದಾದ ಮುಳ್ಳಿನಿಂದ ಮಾಡಿದ ಗದ್ದುಗೆಯನ್ನು ಸಣ್ಣ ಹಾಲಸ್ವಾಮಿಗಳು ಏರಿ ಕುಳಿತರು. ಭಕ್ತರು ಗದ್ದುಗೆ ಯುಳ್ಳ ಪಲ್ಲಕ್ಕಿಯನ್ನು ಹೊತ್ತು ಕೊಂಡು ಮೂರು ಓಣಿಗಳನ್ನು ಸುತ್ತಿದರು.
ಸಣ್ಣ ಹಾಲಸಾಮಿಗಳು ಆಗಾಗ ಹಾರಿ, ಹಾರಿ ಕುಳಿತು ಮುಳ್ಳುಗದ್ದಿಗೆಯನ್ನು ಸಣ್ಣದಾಗಿ ಮಾಡುತ್ತಾ ಸಾಗುತ್ತಾರೆ, ಇದು ಸುಮಾರು ಮೂರು ತಾಸು ನಡೆಯಿತು. ಭಕ್ತರು ದೇವರಿಗೆ ಕೊಬ್ಬರಿ ಸುಡುವುದು ಮುಂತಾದ ಹರಕೆ ತೀರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








