ಶಿಗ್ಗಾವಿ:
ಗಜಾನನೋತ್ಸವದ ಅಂಗವಾಗಿ ಏರ್ಪಡಿಸಿದ ಸಾಂಸ್ಕತಿಕ ಸ್ಪರ್ದೇಯಲ್ಲಿ ವಿಜೇತರಾದ ಮಕ್ಕಳಿಗೆ ಸಸಿಗಳನ್ನು ವಿತರಿಸಿ ಹಸಿರು ಕರ್ನಾಟಕದ ನಿರ್ಮಾಣ ಮಾಡುವ ಕನಸನ್ನು ಸಾಕಾರಗೊಳಿಸುತ್ತಿರುವುದು ಅತ್ಯಂತ ಸ್ತುತ್ಯಾರ್ಹವಾದುದು ಹಬ್ಬಗಳ ಆಚರಣೆ ಪರಿಸರ ರಕ್ಷಣೆಗೆ ಪೂರಕವಾಗಿರಬೇಕಾದ ಅವಶ್ಯಕತೆ ಇಂದು ನಮ್ಮೇದುರಿಗೆ ಪ್ರತಿಯೊಬ್ಬರು ಪರಿಸರ ರಕ್ಷಿಸುವ ಪ್ರಮಾಣ ಕೈಗೊಳ್ಳಬೇಕಾಗಿದೆ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಅಭಿಪ್ರಾಯಪಟ್ಟರು
ಪಟ್ಟಣದ ಶ್ರೀ ಚನ್ನಪ್ಪ ಕುನ್ನೂರ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಗಜಾನನೋತ್ಸವದ ಅಂಗವಾಗಿ ಏರ್ಪಡಿಸಿದ ಸಾಸ್ಕತಿಕ ಸ್ಪರ್ದೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು ಮಕ್ಕಳಲ್ಲಿ ತಂದೆ ತಾಯಿಗಳ ಬಗ್ಗೆ ಗುರು ಹಿರಿಯರ ಬಗ್ಗೆ ಗೌರವ ಭಾವನೆ ಮೂಡುವುದು ಇಂದಿನ ಅವಶ್ಯಕತೆಯಾಗಿದೆ ಶಿಕ್ಷಣ ಮಾನವೀಯತೆಯನ್ನು ಜೀವನ ಮೌಲ್ಯಗಳನ್ನು ಕಲಿಸಿಕೊಡುವ ಮೂಲಕ ವಿದ್ಯಾರ್ಥಿಗಳಿಗೆ ಒಳ್ಳೆಯ ಬದುಕನ್ನು ಕಲ್ಪಿಸಿಕೊಡಬೇಕಾಗಿದೆ ಎಂದು ಹೇಳಿದರು
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮುಂಬಯಿ ನಿವಾಸಿ ಮಂಜುನಾಥ ನವಲಗುಂದ ಮಾತನಾಡಿ ಹಬ್ಬದ ನೆಪದಲ್ಲಿ ವಿದ್ಯಾರ್ಥಿಗಳ ಸುಪ್ತ ಪ್ರತಿಭೆತಯನ್ನು ಗುರುತಿಸುವ ಕಾರ್ಯ ಶ್ಲಾಘನೀಯವಾದುದು ಎಂದು ಅಭಿಪ್ರಾಯಪಟ್ಟರುಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾವೇರಿಯ ಪ್ರಹ್ಲಾದ ಆಳಂದಿಕರ, ಶಿಗ್ಗಾವಿಯ ಶಿವಪುತ್ರಪ್ಪ ಜಕ್ಕಣ್ಣವರ, ಜಿ ಎಂ ಅರಗೋಳ, ಸಿ ಟಿ ಪಾಟೀಲ, ಎಂ ಬಿ ನಿರಲಗಿ, ಮಾರುತಿ ಲಮಾಣಿ, ಗುಂಪೇ ಪರಮೇಶ್ವರ ಭಟ್ ಮೂಮತಾದವರು ಮುಖ್ಯ ಅತಿಥಗಳಾಗಿ ಪಾಲ್ಗೊಂಡಿದ್ದರು
ಸಾಂಸ್ಕತಿಕ ಸ್ಪರ್ದೇಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನದೊಂದಿಗೆ 500 ಸಸಿಗಳನ್ನು ವಿತರಿಸಲಾಯಿತು ಶ್ರೀಮತಿ ಎ ಎಂ ಕಲಾಯಗಾರ, ಶ್ರೀಮತಿ ಕಲ್ಪನಾ ಯಲವಿಗಿ, ಶ್ರೀಮತಿ ರಾಜೇಶ್ವರಿ ಬಡಿಗೇರ, ಫಾತಿಮಾ ಮುಲ್ಲಾ, ಶ್ರೀಮತಿ ಪ್ರಿಯಾಂಕಾ ಹಿರೇಮಠ, ಪ್ರೊ. ಎಂ ಎಸ್ ಕುರಂದವಾಡ, ಶ್ರೀಮತಿ ಮಂಜುಳಾ ಹೊನ್ನಳ್ಳಿ ಹಾಗೂ ಶ್ರೀಮತಿ ಸುನಿತಾ ಹೊಸಮನಿ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಿರೂಪಿಸಿದರು
ಶಿಕ್ಷಕ ಎಂ ಎ ಗಾಣಿಗೇರ ಸ್ವಾಗತಿಸಿದರು, ಪ್ರೊ. ಕೆ ಬಸಣ್ಣ ಕಾರ್ಯಕ್ರಮ ನಿರೂಪಿಸಿದರು, ಕೊನೆಯಲ್ಲಿ ಶಿಕ್ಷಕ ಜೆ ಎಂ ದೇವರಮನಿ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿಪ್ರಜಾಪ್ರಗತಿ facebook pageಲೈಕ್ ಮಾಡಿ