ವಿದ್ಯಾರ್ಥಿಗಳು,ಶಿಕ್ಷಕರು ಒಟ್ಟಾರೆ ಶ್ರಮಿಸಿದಾಗ ಶಾಲೆ ಅಭಿವೃದ್ಧಿ: ಟಿ.ಎನ್.ನರಸಿಂಹಮೂರ್ತಿ

ಮಿಡಿಗೇಶಿ

         ಜ 01-ಸರ್ಕಾರಿ ಶಾಲಾ ಕಾಲೇಜುಗಳು ಮುಂದಿವರಿಯಬೇಕೆಂದಲ್ಲಿ ಆಯಾ ಗ್ರಾಮಗಳ ಪೋಷಕರು,ವಿದ್ಯಾರ್ಥಿಗಳ ಸಂಪೂರ್ಣ ಸಹಕಾರವಿದ್ದು ಸದರಿ ಶಾಲಾ ಕಾಲೇಜುಗಳಲ್ಲಿನ ಬೋಧಕ ವರ್ಗದವರು ಶ್ರಮ ವಹಿಸಿ ಶಾಲೆಯಲ್ಲಿನ ವಿದ್ಯಾರ್ಥಿನಿಯರುಗಳವರ ಗಮನ ಹರಿಸುವಂತಹ ಬೋಧನೆ ಆದಲ್ಲಿ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಉನ್ನತ ವಿಧ್ಯಾಭ್ಯಾಸ ಮುಂದುವರಿಯಲು ತುಂಬಾ ಅನುಕೂಲಕರ ವಾಗಲಿದೆ

         ಆಗ ಆದಲ್ಲಿ ವಿದ್ಯಾರ್ಥಿ,ವಿದ್ಯಾರ್ಥಿನಿಯರನ್ನು ಗುರ್ತಿಸಿ ವರ್ಗಾವಣೆಯಾದಾಗ,ನಿವೃತ್ತಿ ಹೊಂದಿದಾಗ ಆಕಸ್ಮಿಕ ಸಾವು ನೋವುಗಳುಂಟಾದ ಸಮಯದಲ್ಲಿ ಅಂತಹವರನ್ನು ಗುರ್ತಿಸಿ ಪೋಷಕರು ಸನ್ಮಾನ ಮಾಡುವಲ್ಲಿ ಮುಂದೆ ಬರುತ್ತಾರೆಂಬುದಾಗಿ ಮಧುಗಿರಿ ತಾ.ನ ಮಿಡಿಗೇಶಿ ಗ್ರಾಮ ಪಂಚಾಯಿತಿಗೆ ಸೇರಿದ ಹನುಮಂತಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜ.01 ರಂದು ಸದರಿ ಶಾಲೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ಬಡ್ತಿ ಹೊಂದಿದ ಶಿಕ್ಷಕ(ಈಗ ಮು.ಶಿ.ಚಿಕ್ಕದಾಳವಟ್ಟ )ಪುಟ್ಟಲಿಂಗಯ್ಯನವರಿಗೆ ಬಿಳ್ಕೋಡುಗೆ,ಹಾಗೂ ಹತ್ತಾರು ವರ್ಷ ಇದೇ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿ ಇತ್ತೀಚಿನ ದಿನಗಳ ಹಿಂದೆಯಷ್ಠೇ ಅಕಾಲಿಕ ಮರಣ (ಅನಾರೋಗದಿಂದ) ಹೊಂದಿದ ದಿವಂಗತ ಬಿ.ಜಿ.ಬಾಲು ರವರ ಪತ್ನಿ ಗಂಗಮ್ಮಳಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಟಿ.ಎನ್.ನರಸಿಂಹಮೂರ್ತಿರವರು ಮಾತನಾಡುತ್ತಿದ್ದರು.

         ಸಹಶಿಕ್ಷಕ ಹುದ್ದೆಯಿಂದ ಮುಖ್ಯಶಿಕ್ಷಕರಾಗಿ ಬಡ್ತಿ ಹೊಂದಿದ ಪುಟ್ಟಲಿಂಗಯ್ಯ,ಹಾಗೂ ಸಹ ಶಿಕ್ಷಕರಾದ ನರಸೇಗೌಡ ಸಭೆಯನ್ನುದ್ಧೇಶಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ದೊಡ್ಡದಾಳವಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಾಂತಕುಮಾರ್ ಪವಾಡ ರಹಸ್ಯ ಕಾರ್ಯಕ್ರಮವನ್ನು ಪ್ರದರ್ಶಿಸಿದರು,ಇದೇ ಸಂದರ್ಭದಲ್ಲಿ ಪತ್ರಕರ್ತ ಅಂಜನಪ್ಪ,ಪ್ರಾಂಶುಪಾಲ ಟಿ.ಎನ್.ನರಸಿಂಹಮೂರ್ತಿರವರನ್ನು ಸನ್ಮಾನಿಸಿದರು ಮು.ಶಿ.ವೇಣುಗೋಪಾಲ್ ಸಹಶಿಕ್ಷಕರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link