ರೈತನ ಮೇಲೆರಗಿದ ಕರಡಿ ಸೆರೆ

ಎಂ ಎನ್ ಕೊಟೆ

    ಸೋಮವಾರ ಮುಂಜಾನೆ ರೈತ ತೋಟಕ್ಕೆ ಹೋದಾಗ ಕರಡಿಯೊಂದು ಏಕಾಏಕಿ ದಾಳಿ ಮಾಡಿ ರೈತನ ಕಿವಿ ಹಾಗೂ ಮುಖವನ್ನು ಗಾಯಗೊಳಿಸಿರುವ ಘಟನೆ ನಡೆದಿದೆ.

    ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಮುದ್ದಾಪುರ ಗ್ರಾಮದ ನಿವಾಸಿ ಮಹಾದೇವಯ್ಯ (50) ಮುಂಜಾನೆ ತನ್ನ ತೋಟಕ್ಕೆ ಹೋದಾಗ ಕರಡಿ ದಾಳಿ ಮಾಡಿದೆ. ಆಗ ಅವರು ಜೋರಾಗಿ ಕೂಗಿಕೊಂಡಾಗ ಕರಡಿ ತೋಟದ ಪಕ್ಕದ ಪೊದೆಯೊಳಗೆ ಅಡಗಿಕೊಂಡಿದೆ. ನಂತರ ಕರಡಿಯನ್ನು ಸೆರೆ ಹಿಡಿಯಲು ಹಾಸನದಿಂದ ಡಾ.ಮುರಳಿಧರ್ ಎಂಬುವರ ತಂಡ ಬಂದು, ಸತತ ನಾಲ್ಕು ಗಂಟೆ ಕಾರ್ಯಾಚರನೆ ನಡೆಸಿ ಪೊದೆಯೊಳಗಿದ್ದ ಕರಡಿಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದಿದ್ದಾರೆ. ಈ ಭಾಗದಲ್ಲಿ ಸುಮಾರು ದಿನಗಳಿಂದ ಕರಡಿ ಪದೆ ಪದೆ ಗ್ರಾಮಸ್ಥರ ಕಣ್ಣಿಗೆ ಕಾಣಿಸಿಕೊಂಡಿದ್ದು, ಈ ಭಾಗದ ಜನರು ಆತಂಕಕ್ಕೆ ಒಳಗಾಗಿದ್ದರು. ಈಗ ಕರಡಿ ಸೆರೆಯಾದ್ದರಿಂದ ಗ್ರಾಮಸ್ಥರಲ್ಲಿ ನೆಮ್ಮದಿ ಮೂಡಿದೆ.

    ಈ ಸಂದರ್ಭ ವಲಯ ಅರಣ್ಯಾಧಿಕಾರಿ ಸಿ. ರವಿ ಮಾತನಾಡಿ, ಕರಡಿ ಪೊದೆಯೊಳಗೆ ಇದೆ ಎಂದು ನಮ್ಮ ಸಿಬ್ಬಂದಿ ಖಚಿತವಾಗಿ ತಿಳಿಸಿದ್ದರಿಂದ ನಾವು ಹಾಸನದಿಂದ ಡಾ. ಮುರಳಿಧರ್ ಎಂಬ ಅರವಳಿಕೆ ತಜ್ಞರ ತಂಡವನ್ನು ಕರೆಸಿದೆವು. ಮುದ್ದಪುರದ ತೋಟದ ಪಕ್ಕದ ಪೊದೆಯೊಳಗಿ ಇದ್ದ ಕರಡಿಯ ಚಲನವಲನಗಳನ್ನು ಪತ್ತೆ ಹಚ್ಚಿ, ಕರಡಿ ಪೊದೆಯೊಳಗೆ ಇರುವುದು ಖಚಿತವಾಗಿದ್ದರಿಂದ, ಅರವಳಿಕೆ ತಜ್ಞ ಮುರಳಿಧರ್ ಅವರ ತಂಡ ಸತತ ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ, ಕರಡಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು 5 ವರ್ಷದ ಗಂಡು ಕರಡಿಯಾಗಿದ್ದು, ಇದನ್ನು ಬನ್ನೇರುಘಟ್ಟ ಅರಣ್ಯಕ್ಕೆ ಬಿಡಲಾಗುತ್ತದೆ ಎಂದು ತಿಳಿಸಿದರು. ಕರಡಿ ದಾಳಿಗೆ ಒಳಗಾಗಿರುವ ಮಹಾದೇವಯ್ಯನವರಿಗೆ ಸರ್ಕಾರದಿಂದ ಬರುವ ಸೌಲಭ್ಯವನ್ನು ಆದಷ್ಟು ಬೇಗ ಕೊಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link