ಕೊರಟಗೆರೆ
ಓರ್ವ ಸಾಮಾನ್ಯನು ಸೇನೆಯಲ್ಲಿ ಸೇವೆ ಸಲ್ಲಿಸಿದರೆ ಸರ್ಕಾರ ಮತ್ತು ಜನಮಾಟಿಸದಲ್ಲಿ ಗೌರವಗಳು ಬರುತ್ತವೆ ಎಂದು ಕ್ಯಾಪ್ಟನ್ ಸುಬೇದಾರ್ ವೆಂಕಟರಾಮಯ್ಯ ತಿಳಿಸಿದರು.
ಅವರು ಪಟ್ಟಣದ ಕನ್ಯಕಾ ವಿದ್ಯಾಪೀಠ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಮುಖ್ಯಅತಿಥಿಯಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸೈನ್ಯದಲ್ಲಿ ವಾಯು, ಜಲ, ಭೂಸೇನೆ ಹೀಗೆ ಮೂರು ರೀತಿಯ ಸೇನೆಗಳಿದ್ದು ಯಾವೊಂದು ಮಾರ್ಗವಾಗಿಯಾದರೂ ಶತ್ರುಗಳು ದೇಶದೊಳಕ್ಕೆ ನುಗ್ಗಲು ಪ್ರಯತ್ನಿಸಿದರೆ, ದೇಶದ ರಕ್ಷಣೆಗೆ ಸದಾ ಸಿದ್ದರಿರುತ್ತಾರೆ. ನಮ್ಮ ರಾಷ್ಟ್ರಧ್ವಜದ ಮೂರು ವರ್ಗಗಳು ಒಂದೊಂದು ಸೇನೆಯನ್ನು ಸೂಚಿಸುತ್ತದೆ. ವಿದ್ಯಾರ್ಥಿ ದಿಸೆಯಲ್ಲಿಯೇ ಸೈನ್ಯದ ಬಗ್ಗೆ ಪ್ರತಿಯೊಬ್ಬರೂ ಒಲವನ್ನು ಬೆಳೆಸಿಕೊಳ್ಳಬೇಕು. 30 ವರ್ಷ ಸೈನ್ಯದಲ್ಲಿ ಕಳೆದಂತಹ ದಿನಗಳು ಬದುಕಿನುದ್ದಕ್ಕೂ ನೆನಪಿರುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಿಕಾ ವಿದ್ಯಾಪೀಠದ ಅಧ್ಯಕ್ಷ ಎಂ.ಜಿ ಸುಧೀರ್ ಮಾತನಾಡಿ, ಭಾರತ ದೇಶ ಇಡೀ ವಿಶ್ವದಲ್ಲಿ ವಿಭಿನ್ನವಾದಂತಹ ದೇಶವಾಗಿದ್ದು, ಇಲ್ಲಿರುವಂತಹ ನೆಲ, ಜಲ, ಮಣ್ಣು ಪ್ರತಿಯೊಂದೂ ವಿಶೇಷÀವಾಗಿದೆ. ನಾವು ಇದರ ರಕ್ಷಣೆ ಮಾಡಬೇಕು ಎಂದರು.
ಕ್ಯಾಪ್ಟನ್ ಸುಬೇದಾರ್ ವೆಂಕಟರಾಮಯ್ಯರವರÀನ್ನು ಕನ್ನಿಕಾ ವಿದ್ಯಾಪೀಠ ಶಾಲೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯದರ್ಶಿ ಕೆಎಸ್‍ವಿ ರಘು, ಉಪಾಧ್ಯಕ್ಷ ನಂಜುಂಡಶೆಟ್ಟಿ, ಸಹಕಾರ್ಯದರ್ಶಿ ಕೆ.ವಿ ಸತೀಶ್, ನಿರ್ದೇಶಕರಾದ ಶ್ರೀನಿವಾಸ್, ರಾಧಾಕೃಷ್ಣ ಮುಖ್ಯಶಿಕ್ಷಕ ರಾಘವೇಂದ್ರ ಡಿ.ಎಂ, ಶಾಲೆಯ ಶಿಕ್ಷಕರು ಇದ್ದರು.