ರಾಣೇಬೆನ್ನೂರು
ಸ್ಥಳೀಯ ರಾ. ತಾ. ಶಿ. ಸಂಸ್ಥೆಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಪ್ರಸಕ್ತ 2018-19 ರ ಸಾಲಿನ ವಿದ್ಯಾರ್ಥಿ ಒಕ್ಕೂಟ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಇಂದು ಅದ್ದೂರಿಯಾಗಿ ಜರುಗಿತು.
ಸಮಾರಂಭವನ್ನು ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ. ಸುಭಾಸ. ವ್ಹಿ. ಸಾವುಕಾರ ಅವರು ಮಾತನಾಡುತ್ತ ‘ಜ್ಞಾನದಿಂದ ಏನನ್ನಾದರೂ ಸಾಧಿಸಬಹುದು; ಜ್ಞಾನದಿಂದ ಘನತೆ ಹೆಚ್ಚುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಶಾÅಂತ ಪ್ರಾಧ್ಯಾಪಕರಾದ ಡಾ|| ಪಿ. ಬಿ. ಲಕ್ಕಣ್ಣನವರ ಅವರು ಮಾತನಾಡುತ್ತ ‘ಸಮಾಜವನ್ನು ಸುಸಜ್ಜಿತವಾಗಿ ಕಟ್ಟುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ; ಬದುಕಿನ ಹೊಂಗನಸನ್ನು ಸತತ ಪ್ರಯತ್ನದಿಂದ ಸಾಕಾರಗೊಳಿಸಲು ಸಾಧ್ಯ; ಸಕಾರಾತ್ಮಕ ವಿಚಾರಗಳಿಂದ ಬದುಕು ಬಂಗಾರವಾಗುತ್ತದೆ’- ಎಂದರು ಸಮಾರಂಭದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಪ್ರೊ. ಎಫ್. ಎಚ್. ಮಾಚೇನಹಳ್ಳಿ ಅವರು ಮಾತನಾಡಿ ‘ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು’ ಎಂದರು ಕಳೆದ ಶೈಕ್ಷಣಿಕ ಸಾಲಿನಲ್ಲಿ ಕ್ರಮವಾಗಿ ಬಿ.ಎಸ್ಸಿ, ಬಿ.ಎ ಮತ್ತು ಬಿ.ಕಾಂ ಅಂತಿಮ ತರಗತಿಗಳಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ; ರಾಜ್ಯಶಾಸ್ತ್ರದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ; ಗ್ರಂಥಾಲಯ ವಿಭಾಗದಿಂದ ಉತ್ತಮ ಓದುಗ-ಮುಂತಾದ ಪ್ರತಿಭಾ ಪ್ರತಿಭಾ ಪುರಷ್ಕಾರವನ್ನು ನೀಡಲಾಯಿತು. ಶ್ರೀ. ಪಿ. ಬಿ. ಕೊಪ್ಪದ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕು. ಭಾಗ್ಯಶ್ರೀ ಜಂಬಗಿ ಅವರು ಪ್ರಾರ್ಥಿಸಿದರು; ಪ್ರೊ. ಓ. ಎಫ್. ದ್ಯಾವನಗೌಡರ ಅವರು ಸ್ವಾಗತಿಸಿದರು; ಪ್ರೊ. ಎಂ. ವ್ಹಿ. ಹಿತ್ತಲಮನಿ ಅವರು ಅತಿಥಿಗಳನ್ನು ಪರಿಚಯಿಸಿದರು; ಪ್ರೊ. ಆರ್. ಡಿ. ನಾಯಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು; ಪ್ರೊ. ಸಿ. ಎ. ಹರಿಹರ ಅವರು ವಿದ್ಯಾರ್ಥಿ ಒಕ್ಕೂಟದ ಪ್ರತಿನಿಧಿಗಳಿಗೆ ಪ್ರತಿಜ್ಞಾನಿಧಿ ಬೋಧಿಸಿದರು. ಪ್ರಸಕ್ತ ಸಾಳಿನ ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕು. ಶ್ರೀಧರ. ಈ. ಕುಲಕರ್ಣಿ ಮತ್ತು ಮಹಿಳಾ ಪ್ರತಿನಿಧಿ ಕುಮಾರಿ ಶ್ವೇತಾ ಮುದಿಗೌಡರ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಸಮಾರಂಭದ ಕೊನೆಯಲ್ಲಿ ಪ್ರೊ. ಡಿ. ಟಿ. ಲಮಾಣಿ ಅವರು ಎಲ್ಲರಿಗೂ ವಂದಿಸಿದರು.ಕಾರ್ಯಕ್ರಮದಲ್ಲಿ ಎಲ್ಲಾ ಪ್ರಾಧ್ಯಾಕರು ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದರು.