ವಿದ್ಯುತ್ ವಿತರಣೆ ಸಮಯ ಬದಲಾಯಿಸುವಂತೆ ಆಗ್ರಹ

ಹಗರಿಬೊಮ್ಮನಹಳ್ಳಿ:

               ವಿದ್ಯುತ್ ವಿತರಣೆಯ ಸಮಯ ಬದಲಾಯಿಸುವಂತೆ ಒತ್ತಾಯಿಸಿ ತಾಲೂಕಿನ ವರದಾಪುರ ಗ್ರಾಮದ ರೈತರು ಜೆಸ್ಕಾಂ ಇಲಾಖೆಗೆ ಶನಿವಾರ ಮನವಿ ಸಲ್ಲಿಸಿದರು.

               ಜೆಸ್ಕಾಂ ಇಲಾಖೆಯ ಕಾರ್ಯನಿರ್ವಹಕ ಅಭಿಯಂತರರಿಗೆ ಮನವಿ ಸಲ್ಲಿಸಿದ ಬಳಿಕ ರೈತರ ಪರವಾಗಿ ತಾ.ಪಂ.ಮಾಜಿ ಅಧ್ಯಕ್ಷ ಪಿ.ಸೂರ್ಯಬಾಬು ಮಾತನಾಡಿ, ನಮ್ಮ ಭಾಗದಲ್ಲಿ ಈಗ ಮಧ್ಯಾಹ್ನ ಮೂರುಗಂಟೆಯ ನಂತರ ಸರಬರಾಜುಮಾಡಿ ರಾತ್ರಿ 10ಗಂಟೆಯವರೆಗೂ ವಿತರಣೆಮಾಡಲಾಗುತ್ತಿದೆ. ಆದರೆ, ಅದರ ಮಧ್ಯೆ ಎಷ್ಟುಸಾರಿ ವಿದ್ಯುತ್ ಹೋಗಿಬಂದು ಮಾಡುತ್ತೋ ದೇವರಿಗೆ ಪ್ರೀತಿ. ಅದಲ್ಲದೆ, ರಾತ್ರಿವೇಳೆ ವಿದ್ಯುತ್ ವಿತರಣೆಯಿಂದ ವಿಷಜಂತುಗಳ ಹಾವಳಿಗೆ ರೈತ ಕಂಗಲಾಗುತ್ತಿದ್ದಾನೆ. ಮುಂಗಾರು ಮತ್ತು ಹಿಂಗಾರು ಮಳೆಗಳು ಸಂಪೂರ್ಣ ಕೈಕೊಡುತ್ತಿದ್ದು, ಬೆಳೆಯುತ್ತಿರುವಬೆಳೆಗೆ ನೀರು ಸಾಲುತ್ತಿಲ್ಲ, ಆದ್ದರಿಂದ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಈಗಿರುವಾಗ ಸಮಸ್ಯೆಯನ್ನು ಅರಿತು ಬೆಳಗ್ಗೆ 6ರಿಂದ ಮಧ್ಯಾಹ್ನದವರೆಗೂ ಅಥಾವ ಬೆಳಗ್ಗೆ 10ಗಂಟೆಯಿಂದ ಸಂಜೆ 6ಗಂಟೆಯವರೆಗೂ ವಿದ್ಯುತ್ ಸರಬರಾಜು ಮಾಡಬೇಕಂದು ವಿನಂತಿಸಿಕೊಂಡರು.ಎಸ್.ವಿರುಪಾಕ್ಷಗೌಡ, ಕೆ.ಬಸವರಾಜ್, ಎಸ್.ಹುಲುಗಪ್ಪ. ಕೆ.ಹನುಮಂತಪ್ಪ, ಬಿ.ಹಳ್ಳಿ ಹನುಮಪ್ಪ, ಕೆ.ನಾಗಪ್ಪ ಇತರರು ಇದ್ದರು.

Recent Articles

spot_img

Related Stories

Share via
Copy link