ತುಮಕೂರು :
ಅಂತರಸನಹಳ್ಳಿ ಸ್ವೀಕರಣಾ ಕೇಂದ್ರದಲ್ಲಿ ಮಾರ್ಗ ಮುಕ್ತತೆ ಪಡೆದು ನೆಲಮಂಗಲ ಮತ್ತು ಶಿವಮೊಗ್ಗ ವಿದ್ಯುತ್ ಮಾರ್ಗದ ದುರಸ್ತಿ ಕಾರ್ಯ ಕೈಗೊಳ್ಳುವ ಹಿನ್ನಲೆಯಲ್ಲಿ ಸೆಪ್ಟೆಂಬರ್ 10 ಮತ್ತು 11ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಬೆಸ್ಕಾಂನ ತುಮಕೂರು ವಿಭಾಗ ವ್ಯಾಪ್ತಿಯ ಅಂಕಸಂದ್ರ, ಅಂತರಸನಹಳ್ಳಿ, ಬಡ್ಡಿಹಳ್ಳಿ, ಬೆಳ್ಳಾವಿ, ಬ್ರಹ್ಮಸಂದ್ರ, ಚೇಳೂರು, ಹೊಸಕೆರೆ, ಕೋಳಾಲ, ಕೋರಾ, ಮೆಳೆಕೋಟೆ, ತುಮಕೂರು, ಹೆಗ್ಗೆರೆ, ಮಲ್ಲಸಂದ್ರ, ಊರ್ಡಿಗೆರೆಯಲ್ಲಿ ಸೆಪ್ಟೆಂಬರ್ 10ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಅದೇ ರೀತಿ ನಿಟ್ಟೂರು, ಗುಬ್ಬಿ, ಕಲ್ಲೂರು, ಕೆ.ಜಿ.ಟೆಂಪಲ್, ಉಂಗ್ರ, ಕಡಬ, ದೊಡ್ಡಗುಣಿ, ಸಂಪಿಗೆ, ಅಮ್ಮಸಂದ್ರ, ಅಮ್ಮಸಂದ್ರ ಸಿಮೆಂಟ್ ಫ್ಯಾಕ್ಟರಿ, ಸೋಮಲಾಪುರ, ಬಿದರೆ ಪ್ರದೇಶದಲ್ಲಿ ಸೆಪ್ಟೆಂಬರ್ 10 ಹಾಗೂ 11ರಂದು ಬೆ. 9ರಿಂದ ಸಂ.6 ಗಂಟೆಯವರೆಗೆ ವಿದ್ಯುತ್ ಕಡತ ಉಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ.