ಗುಬ್ಬಿ
ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಸಾಂಪ್ರದಾಯಿಕ ಗೌರಿಹಬ್ಬವನ್ನು ವಿನೂತನವಾಗಿ ಆಚರಿಸುತ್ತಾರೆ. ಮನೆ ಮನೆಗಳಿಗೆ ತೆರಳಿ ಬಿದಿರಿನಿಂದ ತಯಾರಿಸಿದ ಹೊಸ ಮರಗಳಲ್ಲಿ ಬಾಗಿನದ ಪೂಜ ಸಾಮಗ್ರಿಗಳನ್ನು ತುಂಬಿ ಬಾಗಿನ ಕೊಡುವ ಮೂಲಕ ಗೌರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿರುವುದು ವಿಶೇಷವಾಗಿತ್ತು. ಬಾಗಿನ ಕೊಟ್ಟ ನಂತರ ಊರ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದ ನಂತರ ಮನೆಯಲ್ಲಿ ಹಬ್ಬದೂಟ ಮಾಡುವುದು ಗೌರಿ ಹಬ್ಬದ ವಿಶೇಷ ಎನ್ನುತ್ತಾರೆ ಮಹಿಳೆಯರು.