ಹಿರಿಯೂರು:
ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮಾಧ್ಯಮಿಕ, ಪದವಿ ಹಂತಗಳಲ್ಲಿ ಸಿಗಬಹುದಾದ ಶೈಕ್ಷಣಿಕ ಸೌಲಭ್ಯಗಳನ್ನು ಹಾಗೂ ವಿದ್ಯಾರ್ಥಿಗಳು ಅರ್ಥಶಾಸ್ತ್ರ, ರಾಜಕೀಯಶಾಸ್ತ್ರವನ್ನು ಚನ್ನಾಗಿ ಓದಿ ಅವುಗಳ ಮುಖಾಂತರ ನಿಮ್ಮ ಬೆಳವಣೆಗೆಗಳನ್ನು ರೂಢಿಸಿಕೊಳ್ಳಿ ಎಂಬುದಾಗಿ ನಗರಠಾಣೆ ಪೋಲೀಸ್ ಸಬ್‍ಇನ್ಸ್‍ಪೆಕ್ಟರ್ ವಿ.ಎನ್.ಮಂಜುನಾಥ್ ಹೇಳಿದರು.
ನಗರದ ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯ ಮಾಹಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಗರಸಭೆ ಆಯುಕ್ತರಾದ ರಮೇಶ್ ಸುಣಗಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿವಿಧ ಇಲಾಖೆಗಳಿಂದ ಅಧಿಕಾರಿಗಳು ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಸಿಗಬಹುದಾದ ಸೌಲಭ್ಯಗಳ ಬಗ್ಗೆ ವಿವರಣೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.ಕೃಷ್ಣಮೂರ್ತಿ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಇವರು ತಮ್ಮ ಇಲಾಖೆಯಲ್ಲಿ ಸಿಗಬಹುದಾದ ವಿದ್ಯಾರ್ಥಿವೇತನದ ಬಗ್ಗೆ ಮಾಹಿತಿ ನೀಡಿದರು. ಅದೇರೀತಿ ಬಿಎಂಸಿ ಇಲಾಖೆಯ ರಮೇಶ್ ವುದಿರೆ ಇವರು ಹಿಂದುಳಿದ ವರ್ಗ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿಗೆ ನೀಡಲಾಗುವ ಸೌಲಭ್ಯಗಳನ್ನು ಕುರಿತು ವಿವರಿಸಿದರು.ಪ್ರಧಾನ ವ್ಯವಸ್ಥಾಪಕರಾದ ಪಿ.ಪ್ರಭಾಕರ್ ಇವರು ವಿದ್ಯಾರ್ಥಿಗಳಿಗೆ ಸಿಗಬಹುದಾದ ಸಾಲ ಸೌಲಭ್ಯಯೋಜನೆ, ಬ್ಯಾಂಕ್ ಖಾತೆಯ ಬಗ್ಗೆ ಮಾಹಿತಿ ಹಾಗೂ ಹಣ ವಿನಿಮಯ ಮಾಡುವ ಬಗ್ಗೆ ಮಾಹಿತಿ ನೀಡಿದರು.
ಡಾ||ಡಿ.ಧರಣೇಂದ್ರಯ್ಯ ಇವರು ಮಾತನಾಡಿ, ಪದವಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳು ಹೆಚ್ಚಾಗಿ ಸಿಗುತ್ತಿರುವುದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿ.ಈ.ಜಗನ್ನಾಥ್, ಇತಿಹಾಸ ಪ್ರಾಧ್ಯಾಪಕ ಜಿ.ಎಸ್.ರಾಮಪ್ಪ, ರಾಜ್ಯಶಾಸ್ತ್ರ ಪ್ರಾಧ್ಯಾಪಕಿ ಶ್ರೀಮತಿ ಆರ್.ಪುಷ್ಪಲತಾ, ಕನ್ನಡ ವಿಭಾಗದ ಮಹಾಂತೇಶ್, ಮತ್ತು ಮುತ್ತುರಾಜ್, ಪ್ರವೀಣ್, ಇನ್ನಿತರ ಉಪನ್ಯಾಸಕರು ಭಾಗವಹಿಸಿದ್ದರು.
ಆರಂಭದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೆ.ಮುರವರ್ಧನ್ ಸ್ವಾಗತಿಸಿದರು. ದೈಹಿಕ ಶಿಕ್ಷಕರಾದ ಹೆಚ್.ಟಿ.ತಿಪ್ಪೇಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ಇಂಗ್ಲೀಷ್ ಪ್ರಾಧ್ಯಾಪಕರಾದ ಎ.ಪಿ.ಜನಾರ್ಧನ್ ವಂದಿಸಿದರು. ಡಾ||ಸಿದ್ದಲಿಂಗಯ್ಯ ಇತಿಹಾಸ ವಿಭಾಗ ಮುಖ್ಯಸ್ಥರು ಕಾರ್ಯಕ್ರಮವನ್ನು ನಿರೂಪಿಸಿದರು.