ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಎಸ್.ಎಸ್.ಐ ಯಿಂದ ತಹಶೀಲ್ದಾರಗೆ ಮನವಿ

ರಟ್ಟೀಹಳ್ಳಿ:28

ನೂತನ ತಾಲೂಕಿನಲ್ಲಿ ಶೈಕ್ಷಣಿಕ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಸ್.ಎಸ್.ಐ ತಾಲೂಕಾ ಘಟಕದ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ ಪ್ರಸನ್ನಕುಮಾರಗೆ ಮನವಿ ಸಲ್ಲಿಸಿದರು.
ಎಸ್.ಎಪ್.ಐ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ ಮಾತನಾಡಿ ನೂತನ ತಾಲೂಕಾಗಿ ಅನೇಕ ತಿಂಗಳಾದರು ತಾಲೂಕಿನಲ್ಲಿ

ಶೈಕ್ಷಣಿಕ, ಆಡಳಿತ್ಮಾತ್ಮಕವಾಗಿ ಅಧಿಕಾರಿಗಳು ಕೆಲಸಗಳು ಮತ್ತಷ್ಟು ಚುರುಕುಗೋಳಿಸಿಬೇಕು ಆ ಮೂಲಕ ನೂತನ ತಾಲೂಕನ್ನು ರಾಜ್ಯದಲ್ಲಿ ಮಾದರಿ ತಾಲೂಕಾಗಿ ಹೋರ ಹೋಮ್ಮುವುದರಲ್ಲಿ ಎರಡು ಮಾತಿಲ್ಲ. ಡಾ. ನಂಜುಂಡಪ್ಪ ವರದಿಯ ಪ್ರಕಾರ ಜಿಲ್ಲೆಯು ಅಭಿವೃದ್ದಿಯಲ್ಲಿ ಹಿಂದುಳಿದ ಜಿಲ್ಲೆಯ ಸಾಲಿನಲ್ಲಿರುವುದು ನಮ್ಮೇಲ್ಲರಿಗೂ ಅಸಮಧಾನವನ್ನುಂಟು ಮಾಡಿದೆ, ರಟ್ಟೀಹಳ್ಳಿ ನೂತನ ತಾಲೂಕಾಗಿರುವುದರಿಂದ ತಾಲೂಕಿನಲ್ಲಿ ಶೈಕ್ಷಣಿಕ ಬೇಡಿಕೆಗಳು ಸಮಸ್ಯಗಳು ಹಲವಾರಿದ್ದು ಅವುಗಳನ್ನು ತಾಲೂಕಾಡಳಿತ, ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಗಮನ ಹರಿಸಿ ರಟ್ಟೀಹಳ್ಳಿ ತಾಲೂಕನ್ನು ಅಭಿವೃದ್ದಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಎಸ್ ಎಫ್.ಐ ತಾಲೂಕಾಧ್ಯಕ್ಷ ನವೀನ ಅಂಗರಗಟ್ಟಿ ಮಾತನಾಡಿ ತಾಲೂಕಿನ ಶೈಕ್ಷಣಿಕ ಸಮಸ್ಯಗಳನ್ನು ಅರಿಯಲು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಶಾಸಕರು ವಿಧ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೋಳ್ಳಬೇಕು ಆ ಮೂಲಕ ವಿಧ್ಯಾರ್ಥಿಗಳ ಸಮಸ್ಯಗಳನ್ನು ಪರಿಹರಿಸುವಲ್ಲಿ ಸಹಾಯಕಾರಿಯಾಗುವುದು. ತಾಲೂಕಿನಲ್ಲಿ ಸುಮಾರು 10ರಿಂದ15 ಸಾವಿರ ವಿಧ್ಯಾರ್ಥಿಗಳು ವಿಧ್ಯಾರ್ಜನೆ ಮಾಡುತ್ತಿದ್ದಾರೆ ಕಾರಣ ವಿಭಾಗವಾರು ಸಮಾಜ ಕಲ್ಯಾಣ ಹಾಗೂ ಬಿಸಿಎಂ ಇಲಾಖೆಯ ಬಾಲಕ ಮತ್ತು ಬಾಲಕೀಯರ ಹಾಸ್ಟೆಲ್ ಮಂಜೂರು ಮಾಡಬೇಕು. ಸರಕಾರಿ ಬಾಲಕೀಯರ ಪ್ರೌಡ ಶಾಲೆ ಹಾಗೂ ತಾಲೂಕಿನ ಹೋಬಳಿಗಳಲ್ಲಿ ಸರಕಾರಿ ಪ್ರೌಢ ಶಾಲೆ ಮಂಜೂರ ಮಾಡಬೇಕು, ತಾಲೂಕು ಕೇಂದ್ರಗಳಲ್ಲಿ ಮಹಿಳಾ ಪದವಿ ಕಾಲೇಜ್ ಮಂಜೂರ ಮಾಡಬೇಕು, ತಾಲ್ಲೂಕಿಗೆ ಕೆಎಸಆರಟಿಸಿ ಬಸ್ ಡಿಪೋ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯವನ್ನು ಕಲ್ಪಿಸಿಕೋಡಬೇಕು ಹಾಗೂ
ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚನೆ ಮಾಡಬೇಕು ಎಂದು ಮನವಿ ಮಾಡಿದರು.

ತಹಶೀಲ್ದಾರ್ ಪ್ರಸನ್ನಕುಮಾರ ಮನವಿ ಸ್ವೀಕರಿಸಿ ಮಾತನಾಡಿದ ಅವರು ನೂತನ ತಾಲೂಕನ್ನು ಮಾದರಿ ತಾಲೂಕನ್ನಾಗಿಸಲು ನಮ್ಮ ಎಲ್ಲ ಅಧಿಕಾರಿಗಳು ದಿನದ 24.ಘಂಟೆ ಕಾರ್ಯನಿರ್ವಹಿಸುತ್ತಿದ್ದು ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು. ತಾಲೂಕಿಗೆ ಅವಶ್ಯಕತೆ ಇರುವಂತೆ ಎಲ್ಲ ಅಭಿವೃದ್ದಿ ಯೋಜನೆಗಳನ್ನು ಸರಕಾರಕ್ಕೆ ಈಗಾಗಲೆ ಸಲ್ಲಿಸಿದ್ದು ಆದಷ್ಟು ಬೇಗ ಕಾರ್ಯಗತವಾಗುವಂತೆ ಶ್ರಮಿಸಲಾಗುವುದು ಎಂದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link