ಶಿಗ್ಗಾವಿ:
ಶ್ರಾವಣ ಮಾಸದ ಅಂಗವಾಗಿ ಸೋಮವಾರ ಪಟ್ಟಣದ ಹಳೇಪೇಟೆಯಲ್ಲಿರುವ ಕಾರಿಕಂಟಿ ಬಸವಣ್ಣ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.
ಬೆಳಿಗ್ಗೆ ಬಸವಣ್ಣ ದೇವಸ್ಥಾನದಲ್ಲಿ ಭಜನೆ, ಅಭಿಷೇಕ, ಹೋಮ ಹವನಗಳು ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ಭಕ್ತ ಸಮೂಹಕ್ಕೆ ಅನ್ನ ಪ್ರಸಾದ ವಿತರಣೆ ಮಾಡಲಾಯಿತು.
ಮುಖಂಡರಾದ ಶಂಕರಗೌಡ್ರ ಪಾಟೀಲ, ಟಿ.ವಿ.ಸುರಗೀಮಠ, ವಿ.ಕೆ,ಕಳ್ಳಿಮನಿ, ಎಸ್.ಆರ್.ಪಾಟೀಲ, ರಮೇಶ ವನಹಳ್ಳಿ, ಚನ್ನಬಸಪ್ಪ ಹಾದಿಮನಿ, ಪ್ರಭುಗೌಡ ಪಾಟೀಲ, ಸಂಗಪ್ಪ ಕಂಕನವಾಡ, ಸತೀಶ ಯಲಿಗಾರ, ಯಲ್ಲಪ್ಪ ಮುಂಡಗೋಡ, ಮಂಜುನಾಥ ಹಾದಿಮನಿ, ಶಿದ್ರಾಮಗೌಡ ಮೇಳ್ಳಾಗಟ್ಟಿ, ದುಂಡಪ್ಪ ಜವಳಗಟ್ಟಿ, ಶಿವಪ್ಪ ಗಂಜೀಗಟ್ಟಿ, ಪಿ.ಕೆ.ನವಲಗುಂದ, ಶೇಖಣ್ಣ ಹಾದಿಮನಿ, ಮುತ್ತಣ್ಣ ಹೊಸಮನಿ ಸೇರಿದಂತೆ ಅನೇಕ ಮುಂಡರು, ಭಕ್ತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ