ತುಮಕೂರು
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ಮಹಾತ್ಮಾಗಾಂಧಿ ರೂರಲ್ ಡೆವಲಪ್‍ಮೆಂಟ್ ಅಂಡ್ ಯೂತ್ ವೆಲ್‍ಫೇರ್ ಸೆಂಟರ್ ಹಾಗೂ ಅಂಬೇಡ್ಕರ್ ನಗರ ಯುವ ಮುಖಂಡರ ಸಹಯೋಗದಲ್ಲಿ ಪ್ರಧಾನ ಮಂತ್ರಿಯವರು ಸ್ವಚ್ಛ ಭಾರತಕ್ಕೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ನಗರದ ಅಂಬೇಡ್ಕರ್ ನಗರ ಕೊಳಗೇರಿಯಲ್ಲಿ ವಿಶೇಷ ಸ್ವಚ್ಛತಾ ದಿನವನ್ನು ಆಚರಿಸಲಾಯಿತು.
ದಿನಾಂಕ 15.09.2018ರಂದು ಶ್ರೀ.ಚೈತನ್ಯ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳ ಭಾಗವಹಿಸುವಿಕೆ ಹಾಗೂ ಅಂಬೇಡ್ಕರ್ ನಗರದ ಮಹಿಳಾ ಸಂಘಗಳ ನೇತೃತ್ವದಲ್ಲಿ ನಡೆದ ಈ ವಿಶೇಷ ಸ್ವಚ್ಛತಾ ದಿನದ ಅಂಗವಾಗಿ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ಸಂಸ್ಥೆಯ ಸಿಬ್ಬಂದಿ ಸ್ಥಳೀಯ ಮುಖಂಡರು, ಗೋಪಾಲ್‍ರವರ ನೇತೃತ್ವದಲ್ಲಿ ಬೀದಿ-ಬೀದಿಗಳಲ್ಲಿ ಸ್ವಚ್ಛತೆ ಕಾಪಾಡಿ ಎಂಬ ಘೋಷಣೆ ಕೂಗಲಾಯಿತು. ನಂತರ ಎಲ್ಲರೂ ಪೊರಕೆ ಹಿಡಿದು ರಸ್ತೆಯನ್ನು ಗುಡಿಸಿ ಅಲ್ಲಿನ ಪ್ಲಾಸ್ಟಿಕ್ ಹಾಯ್ದ್ ವಿಶೇಷವಾಗಿ ಮೀಸಲಿಟ್ಟಿದ ಡಬ್ಬದಲ್ಲಿ ಹಾಕುವ ಮೂಲಕ ಮತ್ತು ಶೌಚಾಲಯವನ್ನು ಕಡ್ಡಾಯವಾಗಿ ಬಳಸುವಂತೆ ಜಾಗೃತಿ ಮೂಡಿಸಲಾಯಿತು. ಸಾಂಕೇತಿಕವಾಗಿ ಶೌಚಾಲಯಕ್ಕೆ ನೀರು ಹಾಕಿ ಗುಡಿಸುವ ಮೂಲಕ ಶುದ್ದತೆಯನ್ನು ಕಾಪಾಡಲು ತಿಳಿಸಲಾಯಿತು.
ಅಂಬೇಡ್ಕರ್ ನಗರದ ಒಂದು ಬೀದಿಯಿಂದ ಇನ್ನೊಂದು ಬೀದಿಗೆ ಲಿಂಕ್ ಕೊಡುವ ದಾರಿ ಗಲೀಜಿನಿಂದ ಕೂಡಿದ್ದು ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲರೂ ಪೊರಕೆ ಹಿಡಿದು ಗುಡಿಸಿ ಸ್ವಚ್ಛಗೊಳಿಸಲಾಯಿತು. ಅಂಬೇಡ್ಕರ್ ನಗರದ ಕೊಳಗೇರಿಯ ಜನರಿಗೆ ಬಯಲು ಬಹಿರ್ದೆಸೆಯ ದುಷ್ಪರಿಣಾಮಗಳ ಬಗ್ಗೆ ತಿಳಿ ಹೇಳಲಾಯಿತು. ಶುದ್ದ ಕುಡಿಯುವ ನೀರಿನ ಘಟಕ ಹಾಕುವಂತೆ ಮಹಾನಗರ ಪಾಲಿಕೆ ರಚನೆಯಾದ ಮೇಲೆ ಮನವಿ ಮಾಡಿಕೊಳ್ಳಲು ಸ್ಥಳೀಯ ಮುಖಂಡರು ತೀರ್ಮಾನಿಸಿದರು. ಮಹಾತ್ಮಾಗಾಂಧಿ ರೂರಲ್ ಡೆವಲಪ್‍ಮೆಂಟ್ ಅಂಡ್ ಯೂತ್ ವೆಲ್‍ಪೇರ್ ಸೆಂಟರ್‍ನವರು 1 ವರ್ಷದಲ್ಲಿ 1) ಸ್ಥಳೀಯ 60 ಯುವಕ/ಯುವತಿಯರಿಗೆ ಕೌಶಲ್ಯ ತರಬೇತಿಗಾಗಿ ಶಿಬಿರವನ್ನು ನಡೆಸಿ ಆಯ್ಕೆ ಮಾಡಿ ವಿವಿಧ ತರಬೇತಿ ಕೋರ್ಸುಗಳಿಗೆ ಶಿಫಾರಸ್ಸು ಮಾಡುತ್ತೇವೆ. ತರಬೇತಿ ನಂತರ ಬ್ಯಾಂಕ್ ಲಿಂಕೇಜ್ ಮಾಡಲಾಗುವುದು, 2) ಮಹಿಳಾ ಸ್ವ-ಸಹಾಯ ಸಂಘಗಳನ್ನು ಹೊಸದಾಗಿ ರಚಿಸಿ ಅವರಿಗೆ ಸಾಮಥ್ಯ ವೃದ್ಧಿಸುವ ತರಬೇತಿ ನೀಡಲಾಗಿ ಬ್ಯಾಂಕ್ ಲಿಂಕೇಜ್ ಮಾಡಲಾಗುವುದು, ಕೊಳಗೇರಿಗಳಲ್ಲಿ ಬರುವ ಪ್ರಾಥಮಿಕ ಪಾಠಶಾಲೆಗಳಲ್ಲಿ ಮಕ್ಕಳಿಗೆ ಕಲಾತ್ಮಕ ಚಟುವಟಿಕೆ ನಡೆಸಲಾಗುವುದು, ಘನತ್ಯಾಜ್ಯ ವಿಲೇವಾರಿ ಬಗ್ಗೆ ಕೌಶಲ್ಯ ಬೆಳೆಸುವುದು ಮತ್ತು ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ವಿವಿಧ ಇಲಾಖೆಗಳ ಸಹಕಾರದಿಂದ ಹಮ್ಮಿಕೊಳ್ಳಲಾಗುವುದು ಎಂದು ಟೀಂ ಲೀಡರ್ ಈರಣ್ಣರವರು ತಿಳಿಸಿದರು. ಸ್ಥಳೀಯ ಯುವ ಮುಖಂಡ ಗೋಪಾಲ್ ಮಾತನಾಡಿ ಎಂ.ಜಿ.ಆರ್.ಡಿಸ.ಎಸ್ ಸಂಸ್ಥೆಯವರು ಸ್ವಚ್ಛತೆಯ ಅರಿವು ಮೂಡಿಸಿದ್ದು ಶ್ಲಾಘನೀಯ ನಮ್ಮ ಕೊಳಗೇರಿ ಜನ ಇಂತಹ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು ಹಾಗೂ ಮುಂದಿನ ದಿನದಲ್ಲಿ ಅಂಬೇಡ್ಕರ್ ನಗರಕ್ಕೆ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಮನವಿ ಮಾಡಿಕೊಳ್ಳೋಣ ಎಂದು ತಿಳಿಸಿದರು. ಚೈತನ್ಯ ಶ್ರೀ.ಕಾಲೇಜಿನ ರಾಮಕೃಷ್ಣರೊಂದಿಗೆ 15 ವಿದ್ಯಾರ್ಥಿಗಳು ಭಾಗವಹಿಸಿದ್ದರು.