ಬಳ್ಳಾರಿ :
ಇಲ್ಲಿನ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಯಲ್ಲಿ ಸೋಮವಾರ ಸೆ.17ರಂದು ಬೆಳಿಗ್ಗೆ ವಿಶ್ವಕರ್ಮ ಜಯಂತ್ಯುತ್ಸವವನ್ನು ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು.ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕೆ.ವೆಂಕಟೇಶ್ವರ ಸ್ವಾಮಿ ಮಾತನಾಡಿ, ವಿಶ್ವಕರ್ಮ ಸಮುದಾಯದವರು, ಉಪಪಂಗಡದವರು ಒಗ್ಗೂಡಿ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದ ಸೌಲಭ್ಯಗಳನ್ನು ಅರಿತು ಸದ್ವಿನಿಯೋಗಪಡಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದು ಹೇಳಿದರು.
ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದ ಬಳ್ಳಾರಿ ಜಿಲ್ಲಾ ನಾಮ ನಿರ್ದೇಶನ ಸದಸ್ಯ ಎಂ.ಮಂಜುನಾಥ ಮಾತನಾಡಿ, ವಿಶ್ವಕರ್ಮ ನಿಗಮ ಮಂಡಳಿಯಿಂದ ಸಮುದಾಯದ ಪಂಚವೃತ್ತಿಯರಿಗೆ ನಾನಾ ಸೌಲಭ್ಯಗಳನ್ನು ನೀಡಿದ್ದು ಅರಿತು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ವಿಶ್ವಕರ್ಮ ಜಯಂತ್ಯುತ್ಸವನ್ನು ರಾಜ್ಯದ ಎಲ್ಲೆಡೆಗಳಲ್ಲಿಯೂ ವಿಶ್ವಕರ್ಮ ಹಾಗೂ ಉಪಪಂಗಡದವರು ಸಡಗರ ಸಂಭ್ರಮಗಳಿಂದ ಒಗ್ಗೂಡಿ ಆಚರಿಸಬೇಕು ಎಂದು ಹೇಳಿದರು.
ದೇವರಾಜ ಅರಸು ಅಭಿವೃದ್ದಿ ನಿಗದ ದ್ವಿತಿಯ ಸಹಾಯಕ ಕೆ.ಹನುಮಂತ ಮಾತನಾಡಿ, ವಿಶ್ವಕರ್ಮ ಸಮುದಾಯದವರು ದೇವರಾಜು ಅರಸು ನಿಗಮದಲ್ಲಿ ಸೌಲಭ್ಯ ಪಡೆದಂತೆ ವಿಶ್ವಕರ್ಮ ಅಭಿವೃದ್ದಿ ನಿಗಮದಲ್ಲೂ ಪಡೆದುಕೊಳ್ಳಬೇಕು. ಅಖಿಲ ಭಾರತೀಯ ವಿಶ್ವಕರ್ಮ ಮಹಾಸಭಾದ ಹೈದ್ರಾಬಾದ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ವೈದ್ಯಂ ಜಂಬುನಾಥ ಆಚಾರ್, ಕೊಟ್ರೇಶ್,ಸುಧಾಕರ ಹಾಗೂ ಸಿಬ್ಬಂದಿ ವರ್ಗದವರು ಸೇರಿ ಅನೇಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ