ಸ್ವಿಜರ್ ಲೆಂಡ್:
ವಿಶ್ವಸಂಸ್ಥೆ ಮಾಜಿ ಮಹಾಪ್ರಧಾನ ಕಾರ್ಯದರ್ಶಿ, ನೊಬೆಲ್ ಶಾಂತಿ ಪುರಸ್ಕೃತ ಕೋಫಿ ಅನ್ನಾನ್(80)ಶನಿವಾರ ತಮ್ಮ ಕೊನೆಯುಸಿರೆಳೆದಿದ್ದಾರೆ.
ಕೆಲವು ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ನಿಧನರಾಗಿರುವುದಾಗಿ ಕೋಫಿ ಅನ್ನಾನ್ ಫೌಂಡೇಷನ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮೂಲತಃ ಘಾನಾ ದೇಶದವರಾದ ಕೋಫಿ, ಆಫ್ರಿಕಾದ ಕಡೆಗೆ ವಿಶೇಷ ಒಲವನ್ನು ಬೆಳೆಸಿಕೊಂಡು ಅಭಿವೃದ್ಧಿ ಕುರಿತಂತೆ ಹಲವಾರು ಮಹತ್ತರ ಜವಾಬ್ದಾರಿಗಳ ಹೊಣೆ ಹೊತ್ತಿದ್ದರು
ವಿಶ್ವದ ಪ್ರಮುಖ ಸ್ಥಾನದಲ್ಲಿ ಜವಾಬ್ದಾರಿ ನಿರ್ವಹಿಸಿದ ಮೊದಲ ಆಫ್ರಿಕನ್ ಕಪ್ಪು ವರ್ಣೀಯ ಕೋಫಿ ಅನ್ನಾನ್. ಅವರು 1997–2006ರ ವರೆಗೂ ವಿಶ್ವಸಂಸ್ಥೆಯ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ ಸಿರಿಯಾಗೆ ವಿಶ್ವಸಂಸ್ಥೆಯ ಶಾಂತಿ ಸಂಧಾನ ಪ್ರತಿನಿಧಿಯಾಗಿ ಸಂಘರ್ಷಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಶ್ರಮಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ