ವೀರಶೈವ,ಲಿಂಗಾಯಿತ ಅಂತರಿಕ ಕಿತ್ತಾಟದಿಂದ ಸಮಾಜಕ್ಕೆ ಹೆಚ್ಚು ನಷ್ಟ

ತುಮಕೂರು.:

               ಕಾಯಕವನ್ನೇ ನಂಬಿ ಬದುಕುತ್ತಿರುವ ದೊಡ್ಡ ಸಮುದಾಯವಾಗಿರುವ ವೀರಶೈವ, ಲಿಂಗಾಯಿತರು, ತಮ್ಮ ತಮ್ಮಲ್ಲಿಯೇ ಕಿತ್ತಾಡಿದರೆ, ರಾಜಕೀಯವಾಗಿ, ಶೈಕ್ಷಣಿಕವಾಗಿ, ಅರ್ಥಿಕವಾಗಿ, ಸಾಮಾಜಿಕವಾಗಿ ಅತ್ಯಂತ ಸಂಕಷ್ಟದ ಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ಎಚ್ಚರಿಕಸಿದ್ದಾರೆ.

                ನಗರದ ಸಿದ್ದಿವಿನಾಯಕ ಸಮುದಾಯ ಭವನದಲ್ಲಿ ತುಮಕೂರು ಜಿಲ್ಲಾ ವೀರಶೈವ-ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘದವತಿಯಿಂದ ಆಯೋಜಿಸಿದ್ದ ಪ್ರತಿಭಾಪುರಸ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಸನ್ಮಾನ ಕಾರ್ಯಕ್ರನವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಕಳೆದ ವಿಧಾನಸಭೆ ಚುನಾವಣೆಯ ವೇಳೆ ಕೆಲ ಕಿಡಿಗೇಡಿಗಳು ಮಾಡಿದ ತಪ್ಪಿನಿಂದ ಅಧಿಕಾರದಿಂದ ವಂಚಿತರಾಗಿದ್ದು, ಇದು ಹೀಗೆಯೇ ಮುಂದುವರೆದರೆ ಸಮಾಜ ಅದೋಗತಿಗೆ ತಲುಪಲಿದೆ. ಆದ್ದರಿಂದ ಎರಡು ಸಮುದಾಯಗಳು ಒಗ್ಗೂಡಿ ಕೆಲಸ ಮಾಡುವ ಅವಶ್ಯಕತೆ ಇದೆ ಎಂದರು.

                  ಒಂದು ಕಾಲದಲ್ಲಿ ಇಡೀ ಭಾರತದಲ್ಲಿಯೇ ಅತ್ಯಂತ ಪ್ರಬಲ ಶಕ್ತಿಯಾಗಿದ್ದ ಶರಣ ಸಂಸ್ಕøತಿ ಇಂದು ಶಕ್ತಿಯಿಲ್ಲದಂತಾಗಿದೆ. ಇದಕ್ಕೆ ನಾವುಗಳೇ ಕಾರಣ.ನಮ್ಮ ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸುಮಾರು 1.30ಕೋಟಿಯಷ್ಟ ವೀರಶೈವ ಲಿಂಗಾಯಿತರಿದ್ದಾರೆ.ಆದರೆ ಸಿದ್ದರಾಮಯ್ಯ ನಡೆಸಿದ ಜಾತಿ ಸಮೀಕ್ಷೆ ವೇಳೆ ಕೆಲವರು ತಮ್ಮಗೆ ಇಚ್ಚೆ ಬಂದಂತೆ ಜಾತಿ ಹೆಸರು ಬರೆಸಿದ ಪರಿಣಾಮ ಕೇವಲ 55 ರಿಂದ 60 ಲಕ್ಷಕ್ಕೆ ಇಳಿದಿದೆ.ಈಗಲಾದರೂ ಎಚ್ಚೆತ್ತುಕೊಂಡು ಮುಂದಿನ ಪೀಳಿಗೆಗೆ ಒಳ್ಳೆಯದಾಗುವ ರೀತಿ ಒಗ್ಗೂಡಿ ಸಮಾಜದ ಅಭಿವೃದ್ದಿಗೆ ಕೆಲಸ ಮಾಡೋಣ ಎಂದು ಜಿ.ಎಸ್.ಬಸವರಾಜು ತಿಳಿಸಿದರು.

                 ತುಮಕೂರು ಜಿಲ್ಲೆ ಇಂದು ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ ಮುಂದುವರೆದಿದ್ದರೆ ಅದಕ್ಕೆ ಹೇಮಾವತಿಯೇ ಕಾರಣ. ಹೇಮಾವತಿಯ ಅತಿ ಹೆಚ್ಚು ಲಾಭ ಪಡೆದವರಲ್ಲಿ ಲಿಂಗಾಯಿತರು,ವೀರಶೈವರ ಪ್ರಮುಖರು.ಆದರೆ ಇಂದಿನ ಜಲಸಂಪನ್ಮೂಲ ಮಂತ್ರಿಗಳು,ಮುಖ್ಯಮಂತ್ರಿ ಜೊತೆ ಸೇರಿ,ಟನಲ್ ಮೂಲಕ ಮಾಗಡಿ,ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗಲು ನಮ್ಮ ಜಿಲ್ಲೆಗೆ ನಿಗಧಿಯಾಗಿರುವ ನೀರಿನ ಮೇಲೆ ಕಣ್ಣು ಹಾಕಿದ್ದು,ಆಪಾಯಕಾರಿ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಈ ಕುರಿತು ಒಂದು ತಿಂಗಳ ಹಿಂದೆಯೇ ಪತ್ರಿಕೆಗಳಲ್ಲಿ ಪ್ರಚುರ ಪಡಿಸಿದ್ದರೂ ಒಂದು ಸಣ್ಣ ಪ್ರತಿಭಟನೆಯೂ ನಡೆಯಲಿಲ್ಲ. ಅಷ್ಟು ನಿರ್ವೀಯರಾಗಿದ್ದೇವೆ.

                   ಪೌರುಷವೇ ಇಲ್ಲದೇ ಬದುಕುತ್ತಿದ್ದೇವೆ ಎಂದು ತ್ರೀವ ಆಸಮಾಧಾನವನ್ನು ಮಾಜಿ ಸಂಸದರು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಜೆ.ಸಿ. ಮಾಧುಸ್ವಾಮಿ,ಹುಟ್ಟಿನಿಂದಲೇ ನಾವು ಶ್ರೇಷ್ಠರು ಎಂದು ಹೇಳಿಕೊಳ್ಳುವ ಬ್ರಾಹ್ಮಣರಿಗೆ ಪರ್ಯಾಯವಾಗಿ ತಮ್ಮ ಕಾಯಕ,ದಾಸೋಹ ತತ್ವದ ಮೂಲಕ ವೀರಶೈವರು ಶ್ರೇಷ್ಠ ಎಂಬ ಧರ್ಮವನ್ನು ಪ್ರತಿಪಾದಿಸಿದವ ಬಸವಣ್ಣ.ಆದರೆ ಇಂದು ವೀರಶೈವರು ವಿಪ್ರರರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ಎಲ್ಲರಿಂದಲೂ ದೂರವಾಗುತ್ತಿದ್ದಾರೆ. ಇದು ನಾವು ಬಸವಣ್ಣ ಅವರಿಗೆ ಮಾಡುತ್ತಿರುವ ಅಪಚಾರ.ನಾನು ನನ್ನದು ಎನ್ನುವ ಬದಲು, ನಾವು, ನಮ್ಮವರು ಎಂಬ ತತ್ವದಡಿ, ನಮ್ಮ ಸಮುದಾಯದಲ್ಲಿಯೇ ಇರುವ ಬಡವರ ಶಿಕ್ಷಣ, ಅರ್ಥಿಕ ಅಭಿವೃದ್ದಿಗೆ ನಮ್ಮ ಕೈಲಾದ ಸಹಾಯ ಮಾಡೋಣ.ಶಿಲ್ಪದಲ್ಲಿ ದೇವರ ಕಾಣುವ ಬದಲು ಮಕ್ಕಳಲ್ಲಿ ದೇವರನ್ನು ಕಾಣೋಣ. ಅದರ ಉತ್ತಮ ಭವಿಷ್ಯಕ್ಕೆ ತಮ್ಮ ಕೈಲಾದ ಸಹಾಯ ಮಾಡೋಣ ಎಂದು ಸಲಹೆ ನೀಡಿದರು.

                 ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಶಿವಶಂಕರಯ್ಯ,2006-07ರಲ್ಲಿ ಆರಂಭವಾದ ನಮ್ಮ ಸಂಘಟನೆ ಅಂದಿನಿಂದ ಇಂದಿನಿಯವರೆಗೂ ನಿರಂತರವಾಗಿ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಏರ್ಪಡಿಸುವ ಮೂಲಕ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಾ ಬಂದಿದೆ.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ರೇಣುಕಾ ವಿದ್ಯಾಪೀಠದಲ್ಲಿ ಉಚಿತ ತರಬೇತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಅಲ್ಲದೆ ಸುತ್ತೂರು ಶ್ರೀಗಳು ಮತ್ತು ನಮ್ಮ ರಾಜ್ಯ ಸಂಘಟನೆಯಿಂದ ಬೆಂಗಳೂರಿನಲ್ಲಿ ಐಎಎಸ್, ಕೆ.ಎ.ಎಸ್. ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದ್ದು, ಅವಶ್ಯವಿದ್ದವರು ಇದರ ಲಾಭ ಪಡೆದುಕೊಳ್ಳಲು ಮನವಿ ಮಾಡಿದರು.

               ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೆಳ್ಳಾವೆಯ ಕಾರದ ಮಠದ ಶ್ರೀ ಕಾರದ ವೀರಬಸವ ಮಹಾಸ್ವಾಮೀಜಿ ವಹಿಸಿದದರು. ವೇದಿಕೆಯಲ್ಲಿ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್,ಜಿ.ಪಂ.ಸದಸ್ಯರಾದ ಡಾ.ನವ್ಯಚಂದ್ರಶೇಖರ್,ಗೂಳೂರು ಶಿವಕುಮಾರ್,ಕರ್ನಾಟಕ ವೀರಶೈವ, ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ನಿರಂಜನ್, ವೀರಶೈವ ವiಹಾಸಭಾ ಅಧ್ಯಕ್ಷ ಎಸ್.ಆರ್.ನಟರಾಜು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸದಾಶಿವಯ್ಯ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಟಿ.ಸಿ.ಓಹಿಲೇಶ್ವರ್,ಕಾಂಗ್ರೆಸ್ ಮುಖಂಡ ನಿರಂಜನ್, ಕೊಪ್ಪಲ್ ನಾಗರಾಜು, ಸಂಘದ ಮುಖಂಡರಾದ ಜಯಶಂಕರ್, ಉಮೇಶ್, ಜೋತಿಪ್ರಕಾಶ್, ಬಿಇಒ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ 2017-18ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಗೌರವಿಸಲಾಯಿತು. 

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap