ಸವಣೂರ :
ಜಿಲ್ಲಾ ಉತ್ತಮ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಸ್ತಿ ಪಡೆದಿರುವ ಸವಣೂರಿನ ಯುಎಂಪಿಎಸ್ ಶಾಲೆಯ ದೈಹಿಕ ಶಿಕ್ಷಕರಾದ ವೀರೇಶ್ವರ ಷ ಹಿರೇಮಠ ಅವರನ್ನು ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುಧಾಕರ್ ಎನ್‍ಎಸ್ ಸಮ್ಮುಖದಲ್ಲಿ ತಾಲೂಕಿನ ಮುಖ್ಯೋಪಾಧ್ಯಯರು .
ಶಿಕ್ಷಕ ವರ್ಗದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿಸಿ ಮಾತಾಡಿದ ಬಿಇಓ ಎನ್‍ಎಸ್ ಸುಧಾಕರ್ ಜಿಲ್ಲಾ ಮಟ್ಟದ ಪ್ರಶಸ್ತಿ ದೊರಕಿದ್ದು ವೀರೇಶ್ವರ ಹಿರೇಮಠ ಅವರ ನಿಸ್ವಾರ್ಥಿ ಸೇವೆ ಸಂದ ಗೌರವವಾಗಿದೆ.ಅವರೊಬ್ಬ ಸದ್ಗುಣ ಸಂಪನ್ನ ಕ್ರೀಯಾಶೀಲ ಶಿಕ್ಷಕರು .ಪ್ರಶಸ್ತಿ ಜವಾಬ್ದಾರಿಯನ್ನು ಹೆಚ್ಚಿಸುವ ಪ್ರೇರಣಾ ಶಕ್ತಿ ಇದ್ದಂತೆ. ಅವರಿಗೆ ದೇವರು ಆಯುಷ್ಯ ಆರೋಗ್ಯ ನೆಮ್ಮದಿ ನೀಡಲೆಂದು ಹಾರೈಸಿದರು. ಈಸಂದರ್ಭದಲ್ಲಿ ಉರ್ದು ಪ್ರೌಢ ಶಾಲೆಯ ಮುಖ್ಯೋಪಾಧ್ಯಯರಾದ ಎಂಎನ್ ಅಡಿವೆಪ್ಪನವರ.ಬಿಸಿಯೂಟ ಸಹಾಯಕ ನಿರ್ದೆಶಕರಾದ ಅರಗೋಳ.ಬಿಆರ್‍ಸಿಗಳಾದ ಅರಬಾಳ.ಉರ್ದು ಸಿಆರ್‍ಪಿ ಗಳಾದ ಲಿಯಾಖತ್.ಶಿಕ್ಷಕರುಗಳಾದ ಎಫ್ ಆರ್ ಹಿರೇಮಠ.ಐಎಸ್ ಮುದಿಗಲ್.ಜೆ ಆರ್ ಕಮ್ಮಾರ.ಅಬ್ದುಲ್ ಖಾದರ.ಸೇರಿದಂತೆ ಶಿಕ್ಷಕ ವೃಂದ ಹಾಗೂ ಸಿಬ್ಬಂದ ವರ್ಗದವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
