ಶಿಗ್ಗಾವಿ :
ವಸಾಹತುಶಾಹಿ ಮತ್ತು ಜಾಗತೀಕರಣದ ಪ್ರಭಾವದಿಂದಾಗಿ ಎಕ ಸಂಸ್ಕತಿ ಪ್ರತಿಪಾದನೆಗೊಳ್ಳುತ್ತಾ ದೇಶಿಯ ವೃತ್ತಿ ಜ್ಞಾನ ಮತ್ತು ಸಂಸ್ಕತಿಕ ಪರಂಪರೆ ತನ್ನ ಮೌಲ್ಯಕಳೆದುಕೊಂಡು ನಾಶದಕಡೆಗೆ ಸಾಗುತ್ತಿರುವಾಗ ಅದನ್ನು ರಕ್ಷಿಸುವ ಹೊಣೆ ಯುವ ಸಮೋಹದ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದ ಡಾ. ಚಂದ್ರಪ್ಪಾ ಸೊಬತಿ ಅಭಿಪ್ರಾಯಪಟ್ಟರು,
ಪಟ್ಟಣದ ಎಸ್.ಆರ್.ಜೆ..ವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಪರಂಪರಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಪರಂಪರೆಯಂಬುದು ಒಂದು ಪಿಳಿಗೆಯಿಂದಾ ಮತ್ತೊಂದು ಪಿಳಿಗೆಗೆ ವರ್ಗಾಯಿಸುವ ಲಿಖಿತ ಅಥವಾ ಮೌಕಿಕ ಜ್ಞಾನ.
ನಮ್ಮನ್ನು ನಾವು ಅರ್ಥಮಾಡಿಕೊಳ್ಳುವದಕ್ಕಾಗಿ ಈ ಜ್ಞಾನದ ಅವಶ್ಯಕತೆಯಿದೆ. ಪರಂಪರೆಯಲ್ಲಿಯ ಒಳ್ಳೆಯದನ್ನು ಉಳಿಸಿಕೊಂಡು ಕೆಟ್ಟದ್ದನು ಅಳಿಸಿ ಸಮಾಜದಸ್ವಾಸ್ಥ್ಯವನ್ನು ಉಳಿಸಿಕೊಳ್ಳವುದು ಪ್ರಸ್ತುತ ಕಾಲಕ್ಕೆ ಅವಶ್ಯವಿದೆಯಂಬ ಚಿಂತನಾಶೀಲ ಮಾತುಗಳನ್ನಾಡಿದರು.
ಕಾಲೇಜಿನ ಪ್ರೊ ಎಸ್ ಎಸ್ ಪೂಜಾರ ತಮ್ಮ ಪ್ರಾಸ್ಥಾವಿಕ ಮಾತಿನಲ್ಲಿ ಪರಂಪರಾಕೂಟ ಬೆಳೆದು ಬಂದ ದಾರಿ ಮತ್ತು ಅದರ ರೂಪರೇಶಗಳನ್ನು ವಿವರಿಸಿದರು ಪರಂಪರಾ ಕೂಟದ ಸಂಚಾಲಕರಾದ ಪ್ರೊ ಪಿ ಸಿ ಹಿರೇಮಠ ಜಾನಪದ ಕಲೆ, ಕ್ರೀಡೆ ಮತ್ತು ವೃತ್ತಿಗಳನ್ನು ಉಳಿಸಿಕೊಳ್ಳಬೇಕೆಂದು ಕೂಟದ ಕಾರ್ಯಕ್ರಮಗಳನ್ನು ಯಶಶ್ವಿಗೊಳಿಸಬೇಕೆಂದು ಸಮಾರಂಭದ ಅದ್ಯಕ್ಷತೆವಹಿಸಿ ಮಾತನಾಡಿದರು.
ಕು.ಲಕ್ಷ್ಮಿ ಮತ್ತು ಸರಸ್ವತಿ ಪ್ರಾರ್ಥಿಸಿದರು, ಕು. ಸಂಗೀತಾ ಹಿರೇಮಠ ಸ್ವಾಗತಿಸಿದರು, ಕು. ಅಕ್ಷತಾ ಶಟ್ಟರ್ ವಂದಿಸಿದಳು, ಕೂಟದ ಕಾರ್ಯದರ್ಶಿ ಕುಮಾರ ಬಸವರಾಜ ವಾಲ್ಮೀಕಿ ಕಾರ್ಯಕ್ರಮ ನಿರೂಪಿಸಿದನು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ