ವೇದಾ ಪತ್ತಿನ ಸಹಕಾರ ಸಂಘದ: ಡಿವಿಡೆಂಟ್ ಸಂತ್ರಸ್ತರಿಗೆ ಹಂಚಿಕೆ

ಹಿರಿಯೂರು:

            ವೇದಾಪತ್ತಿನ ಸಹಕಾರ ಸಂಘದ 2017-18ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ನಿರ್ಣಯದಂತೆ, ಸದಸ್ಯರು 2017-18ನೇ ಸಾಲಿನಲ್ಲಿ ಗಳಿಸಿದ ಲಾಭಾಂಶದಲ್ಲಿ ತಮ್ಮ ಪಾಲಿನ ಡಿವಿಡೆಂಟ್ ಹಣವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳದೆ ಕೊಡಗಿನ ನೆರೆ ಸಂತ್ರಸ್ತರಿಗೆ 3/4 ಭಾಗ ಕಳುಹಿಸಲು ಹಾಗೂ ನೆರೆ ರಾಜ್ಯ ಕೇರಳಕ್ಕಾಗಿ 1/4 ಭಾಗ ಕಳುಹಿಸುವುದು ಎಂಬುದಾಗಿ ನಿರ್ಧರಿಸಲಾಗಿತ್ತು.

ಅದರಂತೆ ಕರ್ನಾಟಕ ರಾಜ್ಯದ  ಕರ್ನಾಟಕ ಬ್ಯಾಂಕ್ ಡಿ.ಡಿ.ಸಂಖ್ಯೆ;572713 ದಿನಾಂಕ:24-08-2018, ರೂ.2,54,424-00 (ಎರಡು ಲಕ್ಷದ ಐವತ್ತ ನಾಲ್ಕು ಸಾವಿರದ ನಾಲ್ಕು ನೂರ ಇಪ್ಪತ್ತ ನಾಲ್ಕು ರೂಪಾಯಿಗಳು ಮಾತ್ರ) ಹಾಗೂ ಕೇರಳ ರಾಜ್ಯದ  ಕರ್ನಾಟಕ ಬ್ಯಾಂಕ್ ಡಿ.ಡಿ.ಸಂಖ್ಯೆ;572712 ದಿನಾಂಕ:24-08-2018, ರೂ.84,808-00 (ಎಂಭತ್ತನಾಲ್ಕು ಸಾವಿರದ ಎಂಟು ನೂರ ಎಂಟು ರೂಪಾಯಿಗಳು ಮಾತ್ರ) ಗಳನ್ನು ದಿನಾಂಕ: 24-08-2018ರಂದು, ಸಂಘದ ಅಧ್ಯಕ್ಷರಾದ ಶ್ರೀ ಎಂ.ಎಸ್.ರಾಘವೇಂದ್ರ, ಉಪಾಧ್ಯಕ್ಷರಾದ ಟಿ.ಮಹಾಬಲೇಶ್, ಹಿರಿಯ ನಿರ್ದೇಶಕರಾದ ಡಾ|| ಎಂ.ಎನ್.ಶ್ರೀಪತಿರವರು ಹಿರಿಯೂರಿನ ಮಾನ್ಯ ತಹಶೀಲ್ದಾರ್‍ರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಘದ ಹಿರಿಯ ನಿರ್ದೇಶಕರಾದ ಬಿ.ಕೆ.ಕರಿಯಪ್ಪ, ಎನ್.ಸುಂದರಂ, ಕೆ.ಸತ್ಯನಾರಾಯಣಚಾರ್, ಕೆ.ಎಸ್.ಮಹೇಶರೆಡ್ಡಿ, ಡಿ.ಎಸ್.ತಿಪ್ಪೇಸ್ವಾಮಿ, ಹೆಚ್.ಎಂ.ಶಂಕರ್, ಡಿ.ಸಣ್ಣಪ್ಪ, ಶ್ರೀಮತಿ ವಿ.ಕಲಾವತಿ, ಇತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link