ತುಮಕೂರು:
ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ನಲ್ಲಿದ್ದ ಚಿನ್ನಾ‘ರಣಗಳನ್ನು ಕಳ್ಳರು ಅಪಹರಿಸಿರುವ ಘಟನೆಯು ತಿಪಟೂರು ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಹಾಸನ ಜಿಲ್ಲೆ ಅರಸಿಕೆರೆ ತಾಲ್ಲೂಕು ಕಲ್ಲುಸಾದರಹಳ್ಳಿ ನಿವಾಸಿ ಓಂಕಾರ ಮೂರ್ತಿ ಮತ್ತು ಅವರ ಪತ್ನಿ ತೇಜಸ್ವಿನಿ ಅವರು ಇತ್ತೀಚೆಗೆ ಮಧ್ಯಾಹ್ನ ತಿಪಟೂರು ಬಸ್ ನಿಲ್ದಾಣದಲ್ಲಿ ಅರಸೀಕೆರೆಗೆ ಹಿಂತಿರುಗಲು ಬಸ್ ಹತ್ತಿದರು. ಬಸ್ ಹತ್ತುವಾಗ ತುಂಬ ರಶ್ ಇತ್ತು. ಹೀಗಾಗಿ ತೇಜಸ್ವಿನಿ ಅವರು ವ್ಯಾನಿಟಿ ಬ್ಯಾಗ್ನಲ್ಲಿ ಆಭರಣಗಳನ್ನು ಇರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಯಾರೋ ಕಳ್ಳರು ಸದರಿ ವ್ಯಾನಿಟಿ ಬ್ಯಾಗ್ನ ಜಿಪ್ ತೆರೆದು, ಅದರಲ್ಲಿದ್ದ ಒಂದು ಚಿನ್ನದ ಲಾಂಗ್ ಚೈನ್ ಮತ್ತು ಇಯರ್ ರಿಂಗ್ ಸೆಟ್ ಅನ್ನು ಅಪಹರಿಸಿದ್ದಾರೆ. ಸದರಿ ಆಭರಣಗಳ ಮೌಲ್ಯ ಸುಮರು 49000 ರೂ. ಎಂದು ಹೇಳಲಾಗಿದೆ. ಈ ಬಗ್ಗೆ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 379 ರ ಪ್ರಕಾರ ಮೊಕದ್ದಮೆ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







